ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆಯ ಅಬ್ಬರ ಮುಂದುವರಿದಿದ್ದು, ಸಾಮಾನ್ಯ ಜನರಿಗೆ ಆಭರಣ ಖರೀದಿ ಗಗನಕುಸುಮವಾಗುತ್ತಿದೆ. ಮದುವೆ ಮತ್ತು ಶುಭ ಸಮಾರಂಭಗಳ ಸೀಸನ್‌ನಲ್ಲಿ ಬೆಲೆ ಏರಿಕೆಯ ಖರೀದಿದಾರರ ಜೇಬಿಗೆ ಕತ್ತರಿ ಹಾಕಿದೆ.
ಇಂದು ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ ಸರಿಸುಮಾರು 30 ರೂಪಾಯಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಸದ್ಯ 22 ಕ್ಯಾರಟ್ ಚಿನ್ನದ ಬೆಲೆ ₹1,23,600 ತಲುಪಿದೆ.ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ಬರೋಬ್ಬರಿ 3,000 ರೂಪಾಯಿ ಏರಿಕೆಯಾಗುವ ಮೂಲಕ ಹೂಡಿಕೆದಾರರಿಗೆ ಶಾಕ್ ನೀಡಿದೆ. ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ ಈಗ ₹21,100 ಮೈಲಿಗಲ್ಲು ತಲುಪಿದೆ,4 ಕ್ಯಾರಟ್‌ನ 10 ಗ್ರಾಂ ಶುದ್ಧ ಚಿನ್ನದ ಬೆಲೆ ₹1,34,840 ಕ್ಕೆ ಏರಿಕೆಯಾಗಿದೆ,
ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಮತ್ತು ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ ಕುಸಿಯುತ್ತಿರುವುದು ದೇಶೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ಯುಎಸ್-ಭಾರತದ ನಡುವಿನ ಟ್ರೇಡ್ ಡೀಲ್ ವಿಳಂಬವಾಗುತ್ತಿರುವುದು ಹಾಗೂ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಳ್ಳುತ್ತಿರುವುದು ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಇಂದಿನ ಚಿನ್ನ ಮತ್ತು ಬೆಳ್ಳಿ ದರ
24 ಕ್ಯಾರಟ್ ಚಿನ್ನ (ಅಪರಂಜಿ) 1 ಗ್ರಾಂ ₹13,484
22 ಕ್ಯಾರಟ್ ಚಿನ್ನ (ಆಭರಣ) 1 ಗ್ರಾಂ ₹12,360
18 ಕ್ಯಾರಟ್ ಚಿನ್ನ 1 ಗ್ರಾಂ ₹10,113
ಬೆಳ್ಳಿ (Silver) 1 ಗ್ರಾಂ ₹211
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,34,840
ನಾಗ್ಪುರ ₹1,34,840
ಮುಂಬೈ ₹1,34,840
ಚೆನ್ನೈ ₹1,35,710
ಕೋಲ್ಕತ್ತಾ ₹1,34,840
ಪಾಟ್ನಾ ₹1,34,890
ಸೂರತ್ ₹1,34,890
ಚಂಡೀಗಢ ₹1,34,990
ಲಕ್ನೋ ₹1,34,990
ಅಡುಗೆ ಮನೆಗಳೇ ಇಲ್ಲದ ಭಾರತದ ವಿಶಿಷ್ಟ ಗ್ರಾಮ! 500 ಮಂದಿಗೆ ದಿನವೂ ಒಂದೇ ಕಡೆ ಊಟ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


