ರಾಮನಗರ: ಭೂಗತ ದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕಾರಿನ ಮೇಲೆ ತಡರಾತ್ರಿ ಬಿಡದಿಯ ತಮ್ಮ ಮನೆಯ ಮುಂಭಾಗವೇ ಕೊಲೆ ಯತ್ನ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಡದಿಯಲ್ಲಿನ ತಮ್ಮ ಮನೆಯಿಂದ ಬೆಂಗಳೂರಿನೆಡೆಗೆ ತಮ್ಮ ಗನ್‌ಮ್ಯಾನ್ ಹಾಗೂ ಕಾರು ಚಾಲಕನ ಜೊತೆಗೂಡಿ ಟೊಯೊಟಾ ಕಾರಿನಲ್ಲಿ ಹೊರಟ ಮುತ್ತಪ್ಪ ರೈ ಹಿಂಬದಿಯ ಸೀಟ್‌ನಲ್ಲಿ ಕುಳಿತಿದ್ದರು. ಡ್ರೈವರ್ ರಾಜು ಹಾಗೂ ಗನ್‌ಮ್ಯಾನ್ ಮುಂದೆ ಕುಳಿತಿದ್ದರು.
ಇನ್ನು ಮನೆ ಲೇಔಟ್ ಪ್ರದೇಶದಲ್ಲಿದ್ದು, ಮನೆಯಿಂದ ಮುನ್ನೂರು ಮೀಟರ್ ಬಂದ ಬಳಿಕ ಮತ್ತೆಂದು ದೊಡ್ಡ ರಸ್ತೆ ಸಿಗಲಿದೆ. ಆ ರಸ್ತೆಯ ಸಮೀಪ ರಿಕ್ಕಿ ರೈ ಮನೆಗೆ ಎದುರುಬದುರಾಗಿ ಇರುವ ಒಂದು ಸೈಟ್ ಕಾಂಪೌಂಡ್‌ನ ಹಿಂದೆ ಗನ್ ಪಾಯಿಂಟ್ ಇಟ್ಟುಕೊಂಡು ಬಚ್ಚಿಟ್ಟುಕೊಂಡಿದ್ದಾರೆ ದಾಳಿಕೋರರು.
ರಿಕ್ಕಿ ರೈ ಕಾರು ಮನೆಯಿಂದ ಹೊರಟ ಕೂಡಲೇ ಸಜ್ಜಾದ ಅವರು 70 ಎಂಎಂ ಗನ್‌ನಿಂದ ಶೂಟ್ ಮಾಡಿದ್ದಾರೆ. ಡ್ರೈವರ್ ಸೀಟ್ ಡೋರ್‌ಗೆ ಬಡಿದ ಗುಂಡು ಬಳಿಕ ಸೀಟ್‌ಗೆ ತಾಗಿ ಹಿಂದೆ ಕುಳಿತಿದ್ದ ರಿಕ್ಕಿ ರೈಗೆ ತಗುಲಿದೆ. ಈ ವೇಳೆ ಮೂಗು ಮತ್ತು ಕೈಗೆ ಗಾಯಗಳಾಗಿವೆ.
ತಮ್ಮ ಗುರಿ ಸರಿಯಾಗಿ ಕೆಲಸ ನಿರ್ವಹಿಸಿದ್ದನ್ನು ಅರಿತ ದಾಳಿಕೋರರು ಅಲ್ಲಿಂದ ಕಾಲ್ಕಿತ್ತಿದ್ದು, ಸ್ಥಳ ಪರಿಶೀಲನೆಗೆ ತೆರಳಿದ ಪೊಲೀಸರಿಗೆ ಕೀಪ್ಯಾಡ್ ಮೊಬೈಲ್ ಹಾಗೂ ಬುಲೆಟ್ ಲಭ್ಯವಾಗಿವೆ. ಇನ್ನು ಗಾಯಗೊಂಡ ರಿಕ್ಕಿ ರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


