Wednesday, September 2, 2026
spot_img
More
    spot_img
    HomeTop Storyಪ್ರವಾಹದಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ 3 ಜನ ಅಂತ್ಯಕ್ರಿಯೆ ವೇಳೆ ಪ್ರತ್ಯಕ್ಷ !

    ಪ್ರವಾಹದಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ 3 ಜನ ಅಂತ್ಯಕ್ರಿಯೆ ವೇಳೆ ಪ್ರತ್ಯಕ್ಷ !

    ಉತ್ತರಾಖಂಡದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದ್ದ ಬಿಹಾರದ ಮೂವರು ಕಾರ್ಮಿಕರು ಅಂತ್ಯಕ್ರಿಯೆ ವೇಳೆ ಪ್ರತ್ಯಕ್ಷರಾದ ಘಟನೆ ನಡೆದಿದೆ!

    Advertisement

    ಧರಾಲಿ ಗ್ರಾಮದಲ್ಲಿ ದಿಢೀರ್‌ ಪ್ರವಾಹದ ವೇಳೆ ಹಲವರು ನಾಪತ್ತೆಯಾಗಿದ್ದರು. ಇದೇ ಸಮಯದಲ್ಲಿ ಉತ್ತರಕಾಶಿಗೆ ಕೆಲಸಕ್ಕೆಂದು ತೆರಳಿದ್ದ ಬಿಹಾರದ ಕಾರ್ಮಿಕರಾದ ರಾಹುಲ್‌ ಮುಖಿಯಾ, ಮುನ್ನಾ ಮುಖೀಯಾ ಮತ್ತು ರವಿ ಕುಮಾರ್‌ ಅವರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಅವರು ಮೃತಪಟ್ಟಿದ್ದಾರೆಂದು ಭಾವಿಸಿ ಕುಟುಂಬಗಳು ಅವರ ಪ್ರತಿರೂಪಗಳನ್ನಿಟ್ಟು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದವು. ಇದೇ ವೇಳೆ ಇವರು ಪ್ರತ್ಯಕ್ಷರಾಗಿದ್ದು, ಕುಟುಂಬದವರ ಸಂತಸಪಟ್ಟಿದ್ದಾರೆ.

    ಪ್ರವಾಹಕ್ಕೂ 3 ದಿನಗಳ ಮೊದಲೇ ಅವರು ಘಟನಾ ಸ್ಥಳದಿಂದ ಸುಮಾರು 6 ಕಿ.ಮೀ. ದೂರದ ಗಂಗೋತ್ರಿಗೆ ತೆರಳಿದ್ದರು. ಆದರೆ, ನೆಟ್‌ವರ್ಕ್‌ ಸಮಸ್ಯೆಗಳಿಂದಾಗಿ ಕುಟುಂಬದ ಸಂಪರ್ಕ ಸಾಧ್ಯವಾಗಿರಲಿಲ್ಲ. ಅಲ್ಲದೇ ಅವರಿಗೆ ಈ ಪ್ರವಾಹದ ಬಗ್ಗೆ ಮಾಹಿತಿಯೂ ಇರಲಿಲ್ಲ. ಕೊನೆಗೆ ನಾಪತ್ತೆಯಾದವರ ಪಟ್ಟಿಯಲ್ಲಿದ್ದವರನ್ನು ಸೇನೆ ಶೋಧಿಸುತ್ತಿರುವಾಗ ಇವರನ್ನು ಪತ್ತೆ ಹಚ್ಚಲಾಗಿದೆ. ಬಳಿಕ ಇವರು ಸೇನೆಯ ಸಹಾಯದಿಂದ ಡೆಹ್ರಾಡೂನ್‌ಗೆ ವಿಮಾನದಲ್ಲಿ ತೆರಳಿ, ಅಂತಿಮವಾಗಿ ತಮ್ಮ ಹಳ್ಳಿಗೆ ಮರಳಿದ್ದಾರೆ.

    ,ವಿಷ್ಣು ಸಮಾಧಿ ನೆಲಸಮ: ಯಶ್‌ ಹೆಸರು ಯಾಕೆ ತರ್ತೀರಾ ಎಂದು ಅನಿರುದ್ಧ್‌ ಎದುರೇ ಫ್ಯಾನ್ಸ್‌ ಗರಂ; ವಿಡಿಯೊ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading