Sunday, November 1, 2026
spot_img
More
    spot_img
    HomeCrime3 ವರ್ಷದ ಮುದ್ದಾದ ಮಗಳನ್ನು ಲಾಲಿ ಹಾಡಿ ಮಲಗಿಸಿ ಕೆರೆಗೆ ಹಾಕಿ ಕೊಂದ ಮಹಿಳೆ; ಕೊಟ್ಟ...

    3 ವರ್ಷದ ಮುದ್ದಾದ ಮಗಳನ್ನು ಲಾಲಿ ಹಾಡಿ ಮಲಗಿಸಿ ಕೆರೆಗೆ ಹಾಕಿ ಕೊಂದ ಮಹಿಳೆ; ಕೊಟ್ಟ ಕಾರಣ ಅಬ್ಬಬ್ಬಾ!

    ಅಜ್ಮೀರ್:‌ ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಅರ್ಥವೇ ಇಲ್ಲದೇ ತಮ್ಮ ಅನುಕೂಲಕ್ಕಾಗಿ ಮನ ಬಂದಂತಹ ಕೃತ್ಯಗಳನ್ನು ಎಸಗಿ ಸಮಾಜದ ಎದುರು ಬೆತ್ತಲಾಗಿ ನಿಲ್ಲುತ್ತಿರುವ ಹಲವಾರು ಘಟನೆಗಳು ನಮ್ಮ ಮುಂದೆಯೇ ನಡೆಯುತ್ತಿವೆ.

    ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಹೆತ್ತ ತಾಯಿಯೇ ತನ್ನ ಮುದ್ದಾದ ಮಗಳನ್ನು ಕೆರೆಗೆ ಹಾಕಿ ಕೊಂದುಬಿಟ್ಟಿದ್ದಾಳೆ. ಹೌದು, ಉತ್ತರ ಪ್ರದೇಶ ಮೂಲದ 28 ವರ್ಷದ ಅಂಜಲಿ ಎಂಬಾಕೆ ಕೊಲೆಗಾತಿ.

    ತನ್ನ ಪತಿಯಿಂದ ಬೇರ್ಪಟ್ಟು ಲವರ್‌ ಅಲ್ಕೇಶ್ ಜತೆಗೆ ರಾಜಸ್ಥಾನದ ಅಜ್ಮೀರದಲ್ಲಿ ವಾಸವಿದ್ದ ಈಕೆಗೂ ತನ್ನ ಲವರ್‌ಗೂ ಆಗಾಗ ಮಗುವಿನ ವಿಷಯಕ್ಕೆ ಜಗಳ ನಡೆಯುತ್ತಲೇ ಇತ್ತು. ಈಕೆಯ ಲವರ್‌ ಮಗುವನ್ನು ಮುಂದಿಟ್ಟುಕೊಂಡು ಆಕೆಯ ಗಂಡನ ಬಗ್ಗೆ ಹಾಗೂ ಅವರ ಸಂಬಂಧದ ಬಗ್ಗೆ ಆಗಾಗ ಗಲಾಟೆ ಮಾಡುತ್ತಿದ್ದ.

    ಹೀಗೆ ತನ್ನ ಪ್ರಿಯತಮನಿಗೆ ಕೋಪ ತರಿಸುತ್ತಿದ್ದ ಮಗಳನ್ನು ಕೊಲ್ಲಲು ಮುಂದಾದ ಅಂಜಲಿ ಮೊದಲಿಗೆ ಆಕೆ ಮಲಗಬೇಕೆಂದು ಲಾಲಿ ಹಾಡಿ ಮಲಗಿಸಿದ್ದಾಳೆ. ಆಕೆ ಮಲಗಿದ ಬಳಿಕ ನಗರ ಆನ ಸಾಗರ್‌ ಕೆರೆ ಬಳಿ ಆಕೆಯನ್ನು ಕರೆದೊಯ್ದು ಬಿಸಾಕಿದ್ದಾಳೆ. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಪೇದೆ ಅಂಜಲಿಯನ್ನು ಈ ಹೊತ್ತಿನಲ್ಲಿ ಇಲ್ಲೇನು ಮಾಡುತ್ತಿದ್ದೀರ ಎಂದು ಪ್ರಶ್ನಿಸಿದ್ದಾನೆ.

    ಇದಕ್ಕೆ ಉತ್ತರಿಸಿದ ಅಂಜಲಿ ತನ್ನ ಜತೆ ಬಂದ ಮಗಳು ನಾಪತ್ತೆಯಾಗಿದ್ದು, ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಳು. ಆದರೆ ಅಂಜಲಿಯ ಈ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರಿಗೆ ಕೆರೆಗೆ ಆಗಮಿಸಿದ ಅಂಜಲಿ ಕೈನಲ್ಲಿ ಮಗು ಇದ್ದದ್ದು ಹಾಗೂ ಕೆರೆಯಿಂದ ವಾಪಸ್ಸಾಗುವಾಗ ಆಕೆಯ ಬಳಿ ಮಗು ಇಲ್ಲದೇ ಇದ್ದದ್ದನ್ನು ಗಮನಿಸಿದ್ದಾರೆ.

    ಅಲ್ಲದೇ ಅಂಜಲಿ ಮೊಬೈಲ್‌ನಲ್ಲಿ ನಿರತಳಾಗಿದ್ದೂ ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಬುಧವಾರ ( ಸೆಪ್ಟೆಂಬರ್‌ 17 ) ಬೆಳಗ್ಗೆ ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿದ್ದು, ಪೊಲೀಸರು ಅಂಜಲಿಯನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಅಂಜಲಿ ಸತ್ಯಾಂಶ ಬಾಯಿಬಿಟ್ಟಿದ್ದು, ತನ್ನ ಪ್ರಿಯಕರನಿಗೆ ತನ್ನ ಮಗಳನ್ನು ಕಂಡರೆ ಆಗುತ್ತಿರಲಿಲ್ಲ, ಹೀಗಾಗಿ ಈ ಕೃತ್ಯ ಎಸಗಿದೆ ಎಂದು ತಿಳಿಸಿದ್ದಾಳೆ. ಅಲ್ಲದೇ ಇಡೀ ಕೃತ್ಯವನ್ನು ತಾನೊಬ್ಬಳೇ ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ.

    ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಅಸ್ತಿಪಂಜರದ ಬಳಿ ಸಿಕ್ಕ ಐಡಿ ಕಾರ್ಡ್‌ ವ್ಯಕ್ತಿ ನಾಪತ್ತೆ; ಆ ವ್ಯಕ್ತಿಯ ಮಗನ ಮೊದಲ ಪ್ರತಿಕ್ರಿಯೆ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search