Sunday, November 1, 2026
spot_img
More
    spot_img
    HomeStateDistrictಚೇತನ್‌ಗೆ ಕೊಲೆ ಬೆದರಿಕೆ ಹಾಕಿದ ಯುಟ್ಯೂಬರ್ ಸುಮಂತ್‌ ಬಗ್ಗೆ ಆತನ ತಂದೆ ಮೊದಲ ಪ್ರತಿಕ್ರಿಯೆ

    ಚೇತನ್‌ಗೆ ಕೊಲೆ ಬೆದರಿಕೆ ಹಾಕಿದ ಯುಟ್ಯೂಬರ್ ಸುಮಂತ್‌ ಬಗ್ಗೆ ಆತನ ತಂದೆ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಕುರಿತು ಸುದ್ದಿ ಮಾಡುವ ವಿಚಾರವಾಗಿ ಖ್ಯಾತ ಯುಟ್ಯೂಬರ್‌ ಚಂದನ್‌ ಗೌಡ ದುಡ್ಡು ಪಡೆದು ಅಪಪ್ರಚಾರ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಅದನ್ನು ಸಾಬೀತುಪಡಿಸಲಾಗದೇ ಜನರ ಮುಂದೆ ಬೆತ್ತಲಾದ ಯುಟ್ಯೂಬರ್‌ ಸುಮಂತ್‌ ಸದ್ಯ ಯಾವುದೇ ವಿಡಿಯೊ ಮಾಡದೇ ತಲೆ ಮರೆಸಿಕೊಂಡಿದ್ದಾನೆ.

    ಅಲ್ಲದೇ ಈತ ಬೇಕಂತಲೇ ಚಂದನ್‌ ಗೌಡನನ್ನು ಸಿಕ್ಕಿಹಾಕಿಸಿದ್ದಾಗಿ ಹೇಳಿಕೊಂಡಿದ್ದ ಆಡಿಯೊವನ್ನು ರೆಕಾರ್ಡ್‌ ಮಾಡಿಕೊಂಡು ಬಿಡುಗಡೆ ಮಾಡಿದ್ದ ಚೇತನ್‌ ಎಂಬ ಹುಡುಗನಿಗೂ ಸಹ ಕೊಲೆ ಬೆದರಿಕೆ ಹಾಕಿದ್ದ ಸುಮಂತ್‌ ತನ್ನ ನಿಜವಾದ ಮುಖವಾಡವನ್ನು ತಾನೇ ಕಳಚಿಕೊಂಡಿದ್ದ.

    ಹೀಗೆ ಒಂದೊಂದಾಗಿ ತನ್ನ ನಿಜರೂಪ ಪ್ರದರ್ಶಿಸಿದ ಸುಮಂತ್‌ನ ಹಿನ್ನೆಲೆ ಕೆದಕಿದಾಗ ಈತ ಈ ಹಿಂದೆ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ, ಧರ್ಮಸ್ಥಳ ತನಿಖೆ ಆರಂಭವಾದ ಬಳಿಕ ಬಾರ್‌ ಕೆಲಸ ಬಿಟ್ಟು ಯುಟ್ಯೂಬ್‌ನತ್ತ ಬಂದ ಎಂಬುದು ತಿಳಿದುಬಂದಿದೆ.

    ಇನ್ನು ಈತ ಚಂದನ್‌ ಗೌಡ ಹಾಗೂ ಸಮೀರ್‌ ಬಗ್ಗೆ ಮಾತ್ರವಲ್ಲದೇ ಸೌಜನ್ಯ ತಾಯಿಯ ಬಗ್ಗೆ ಸಹ ಕೆಟ್ಟದಾಗಿ ಮಾತನಾಡಿದ್ದ ಎಂದು ಚೇತನ್‌ ಆರೋಪಿಸಿದ್ದು, ಇದರಿಂದ ರೊಚ್ಚಿಗೆದ್ದ ಸೌಜನ್ಯ ಪರ ಹೋರಾಟಗಾರ್ತಿ ಸಂದ್ಯಾ ಈತನಿಗೆ ಕರೆ ಮಾಡಿ ಚಳಿ ಬಿಡಿಸಿದ್ದರು.

    ಇದೇ ಸಂದ್ಯಾ ಸುಮಂತ್‌ ತಂದೆಗೆ ಕರೆ ಮಾಡಿ ಮಾತನಾಡಿದ್ದು, ಸುಮಂತ್‌ ತಂದೆ ಇದರ ಬಗ್ಗೆ ತನಗೆ ಇತ್ತೀಚೆಗಷ್ಟೆ ಗೊತ್ತಾಗಿದ್ದು, ಇದೆಲ್ಲ ನಮಗೆ ಯಾಕೆ ಬೇಕು ಪೊಲೀಸರಿದ್ದಾರೆ ಅವರೇ ಎಲ್ಲವನ್ನೂ ನೋಡಿಕೊಳ್ತಾರೆ ಎಂದು ಬುದ್ದಿ ಹೇಳಿದ್ದಾಗಿ ಹೇಳಿಕೊಂಡಿದ್ದಾರೆ.

    ಅಲ್ಲದೇ ಮೊದಲು ಬಾರ್‌ಗೆ ಕೆಲಸಕ್ಕೆ ತೆರಳುತ್ತಿದ್ದ, ಆದರೆ ಈಗ ಅದನ್ನೂ ಸಹ ಬಿಟ್ಟಿದ್ದು, ಹಣ ಎಲ್ಲಿಂದ ಬರುತ್ತಿದೆಯೋ ಗೊತ್ತಿಲ್ಲ ಎಂದಿದ್ದಾರೆ. ದೊಡ್ಡವರ ವಿಚಾರವೆಲ್ಲ ನಮಗೆ ಯಾಕೆ ಎಂದು ಬುದ್ದಿ ಹೇಳಿದ್ದೇನೆ ಆದರೂ ಕೇಳುತ್ತಿಲ್ಲ ಎಂದಿದ್ದಾರೆ. ನಾವೂ ಸಹ ಕೂಲಿ ಮಾಡಿ ಜೀವನ ನಡೆಸಬೇಕು, ನಾವು ಶ್ರೀಮಂತರಲ್ಲ ಎಂದು ಸುಮಂತ್‌ ತಂದೆ ಹೇಳಿಕೊಂಡಿದ್ದಾರೆ.

    ಇನ್ನು ಚೇತನ್‌ಗೆ ಕೊಲೆ ಬೆದರಿಕೆ ಹಾಕಿದ ಬಗ್ಗೆ ಮಾತನಾಡಿದ ಸುಮಂತ್‌ ತಂದೆ ಇದೆಲ್ಲ ನಮಗೆ ಗೊತ್ತಿಲ್ಲ ಮೇಡಂ, ಆದರೆ ಕಾನೂನಿನ ಬಗ್ಗೆ ಇವನಿಗೇನು ಗೊತ್ತು ಎಂದು ಬೇಸರ ಹೊರಹಾಕಿದ್ದಾರೆ.

    ಒಟ್ಟಿನಲ್ಲಿ ಪ್ರಚಾರದ ಗೀಳಿಗೆ ಬಿದ್ದ ಮಗನಿಂದ ತಂದೆ ಹಾಗೂ ತಾಯಿ ಇಂತಹ ವಿಷಯಗಳ ಬಗ್ಗೆ ಮಾತನಾಡಿ ತಲೆ ತಗ್ಗಿಸುವ ಹಾಗೆ ಮಡಿದ್ದಾನೆ ಸುಮಂತ್.‌

    ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಅಸ್ತಿಪಂಜರದ ಬಳಿ ಸಿಕ್ಕ ಐಡಿ ಕಾರ್ಡ್‌ ವ್ಯಕ್ತಿ ನಾಪತ್ತೆ; ಆ ವ್ಯಕ್ತಿಯ ಮಗನ ಮೊದಲ ಪ್ರತಿಕ್ರಿಯೆ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search