ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಇಂದು ಎರಡನೇ ಹಂತದ ಸಿಡಿಮದ್ದು ತಾಲೀಮು ನಡೆಸಲಾಯಿತು.
ದಸರಾ ವಸ್ತು ಪ್ರದರ್ಶನ ಮೈದಾನದ ವಾಹನಗಳ ನಿಲುಗಡೆ ಸ್ಥಳದಲ್ಲಿ ದಸರಾ ಗಜಪಡೆ ಹಾಗೂ ಅಶ್ವಾರೋಹಿ ದಳದ ಸಮ್ಮುಖದಲ್ಲಿ ಕುಶಾಲತೋಪು ಸಿಡಿಸುವ ಎರಡನೇ ಹಂತದ ತಾಲೀಮು ಯಶಸ್ವಿಯಾಗಿ ನೆರವೇರಿತು.
ಅರಮನೆಯ ಫಿರಂಗಿಗಾಡಿಗಳಿಂದ ಕುಶಾಲತೋಪು ಸಿಡಿಸಿದ ತಾಲೀಮಿನಲ್ಲಿ ಎಲ್ಲಾ 14 ಆನೆಗಳು, ಅಶ್ವಾರೋಹಿ ದಳ ಭಾಗಿಯಾಗಿದ್ದವು. ಎರಡನೇ ಬಾರಿಯೂ ಹೇಮಾವತಿ, ರೂಪ ಮತ್ತು ಶ್ರೀಕಂಠ ಆನೆಗಳು ಕುಶಾಲತೋಪು ಸಿಡಿತದ ತಾಲೀಮಿನಲ್ಲಿ ಭಾಗವಹಿಸಿದ್ದವು.
ಸಿಡಿಮದ್ದು ತಾಲೀಮು ಫೈರಿಂಗ್ ಕಾರ್ಯದಲ್ಲಿ ಭಾಗಿಯಾಗಿದ್ದ 30ಕ್ಕೂ ಹೆಚ್ಚು ಸಿಎಆರ್ ಪೊಲೀಸರು ಏಳು ಫಿರಂಗಿ ಗಾಡಿಗಳಿಂದ, ತಲಾ ಮೂರು ಬಾರಿಯಂತೆ ಒಟ್ಟು 21 ಕುಶಾಲತೋಪುಗಳನ್ನು ಸಿಡಿಸಿದರು.
ದಸರಾ ಗಜಪಡೆ ಕುಶಾಲತೋಪು ಸಿಡಿತದ ಸದ್ದಿಗೆ ಬೆದರದೇ ಆತ್ಮಸ್ಥೈರ್ಯ ಪ್ರದರ್ಶಿಸಿದ್ದು, ಅಶ್ವಾರೋಹಿ ದಳದ ಕೆಲ ಕುದುರೆಗಳು ಮಾತ್ರ ಸಿಡಿಮದ್ದಿನ ಸದ್ದಿಗೆ ವಿಚಲಿತವಾದವು.
2ನೇ ಹಂತದ ಸಿಡಿಮದ್ದು ತಾಲೀಮಿನಲ್ಲಿ ಸಿಎಆರ್ ಡಿಸಿಪಿ ಸಿದ್ದನಗೌಡ ಪಾಟೀಲ್, ಸಿಎಫ್ ರವಿಶಂಕರ್, ಡಿಸಿಎಫ್ ಡಾ. ಪ್ರಭುಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಧರ್ಮಸ್ಥಳ: ಎರಡನೇ ದಿನವೂ ಬಂಗ್ಲೆಗುಡ್ಡದಲ್ಲಿ ಬುರುಡೆಗಳು ಪತ್ತೆ; ತನಿಖೆ ವಿರೋಧಿಗಳು ಕಂಗಾಲು!
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


