Friday, March 20, 2026
spot_img
More
    spot_img
    HomeStateDistrictಬೆಂಗಳೂರಿನ ಪ್ರಮುಖ ಆಸ್ಪತ್ರೆ ಖರೀದಿ ಮಾಡಿದ ಫೋರ್ಟಿಸ್

    ಬೆಂಗಳೂರಿನ ಪ್ರಮುಖ ಆಸ್ಪತ್ರೆ ಖರೀದಿ ಮಾಡಿದ ಫೋರ್ಟಿಸ್

    ಬೆಂಗಳೂರು ನಗರದ ಪ್ರಮುಖ ಆಸ್ಪತ್ರೆಯೊಂದನ್ನು ದೇಶದ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಯಾದ ಫೋರ್ಟಿಸ್ ಹೆಲ್ತ್‌ಕೇರ್ ಖರೀದಿ ಮಾಡಿದೆ. ಸುಮಾರು 430 ಕೋಟಿ ರೂ.ಗಳ ವಹಿವಾಟು ಇದಾಗಿದೆ. ಈ ಮೂಲಕ ಟಿಎಂಐ ಹೆಲ್ತ್‌ ಕೇರ್‌ ಫೋರ್ಟಿಸ್ ಪಾಲಾಗಿದೆ.

    ಬೆಂಗಳೂರು ನಗರದ ಯಶವಂತಪುರದಲ್ಲಿರುವ ಪೀಪಲ್ ಟ್ರೀ ಆಸ್ಪತ್ರೆಯನ್ನು 430 ಕೋಟಿ ರೂ.ಗಳಿಗೆ ಫೋರ್ಟಿಸ್ ಹೆಲ್ತ್‌ಕೇರ್ ಖರೀದಿ ಮಾಡಿದೆ. ಶೇ 100ರಷ್ಟು ಸ್ವಾಧೀನ ಪ್ರಕ್ರಿಯೆ ಮೂಲಕ 125 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಖರೀದಿ ಮಾಡಲಾಗಿದೆ ಎಂದು ಶನಿವಾರ ಫೋರ್ಟಿಸ್ ಹೆಲ್ತ್‌ಕೇರ್ ಹೇಳಿದೆ.

    ಪೀಪಲ್ ಟ್ರೀ ಆಸ್ಪತ್ರೆ ಟಿಎಂಐ ಹೆಲ್ತ್‌ ಕೇರ್‌ ಎಂಬ ಸಂಸ್ಥೆಯ ಅಡಿಯಲ್ಲಿತ್ತು. ಆಸ್ಪತ್ರೆಯ ಕಟ್ಟೆಡ, ಅದಕ್ಕೆ ಸೇರಿದ ಜಾಗವನ್ನು ಸಹ ಖರೀದಿ ಮಾಡಿದೆ. ಟಿಎಂಐ ಹೆಲ್ತ್‌ ಕೇರ್‌ ಸಂಸ್ಥೆಗೆ ಸೇರಿದ ಸಾಲ ಸಹ ಇದರಲ್ಲಿ ಸೇರಿದೆ ಎಂದು ಫೋರ್ಟಿಸ್ ಹೆಲ್ತ್‌ಕೇರ್ ತಿಳಿಸಿದೆ.

    ಮುಂದಿನ ಮೂರು ವರ್ಷಗಳಲ್ಲಿ ಈ ಆಸ್ಪತ್ರೆಯ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ 410 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುತ್ತದೆ ಎಂದು ಸಹ ಫೋರ್ಟಿಸ್ ಹೆಲ್ತ್‌ಕೇರ್ ಘೋಷಣೆ ಮಾಡಿದೆ.

    ಫೋರ್ಟಿಸ್ ಹೆಲ್ತ್‌ಕೇರ್ ಟಿಎಂಐ ಹೆಲ್ತ್‌ ಕೇರ್‌ನ ಶೇ 100ರಷ್ಟು ಪಾಲನ್ನು ಸಹ ಖರೀದಿ ಮಾಡಿದ್ದು, 125 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಅಭಿವೃದ್ಧಿಗೊಳಿಸಲಾಗುತ್ತದೆ.

    ಫೋರ್ಟಿಸ್ ಹೆಲ್ತ್‌ಕೇರ್‌ನ ಅಂಗ ಸಂಸ್ಥೆಯಾದ ಇಂಟರ್ ನ್ಯಾಷನಲ್ ಹಾಸ್ಪಿಟಲ್ ಲಿಮಿಟೆಡ್ (ಐಎಚ್‌ಎಲ್) ಮೂಲ ಈ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಫೋರ್ಟಿಸ್ ಹೆಲ್ತ್‌ಕೇರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

    410 ಕೋಟಿ ರೂ. ಹೂಡಿಕೆ: ಪೀಪಲ್ ಟ್ರೀ ಆಸ್ಪತ್ರೆ ಖರೀದಿ ಮಾಡುವ ಮೂಲಕ ಬೆಂಗಳೂರು ನಗರದಲ್ಲಿ ಫೋರ್ಟಿಸ್ ಹೆಲ್ತ್‌ಕೇರ್‌ ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಣೆ ಮಾಡಲಾಗಿದೆ. ಮುಂದಿನ ಮೂರು ವರ್ಷದಲ್ಲಿ ಆಸ್ಪತ್ರೆಯ ಮೂಲ ಸೌಕರ್ಯ, ಆಧುನಿಕ ಉಪಕರಣಗಳು ಸೇರಿದಂತೆ ಒಟ್ಟು 410 ಕೋಟಿ ರೂ. ಹೂಡಿಕೆಯನ್ನು ಫೋರ್ಟಿಸ್ ಹೆಲ್ತ್‌ಕೇರ್‌ ಮಾಡಲಿದೆ.

    ಅಲ್ಲದೇ ಪ್ರಮುಖವಾಗಿ ಕ್ಯಾನ್ಸರ್ ಚಿಕಿತ್ಸಾ ವಿಭಾಗವನ್ನು ಬಲಪಡಿಸಲಾಗುತ್ತದೆ ಎಂದು ಫೋರ್ಟಿಸ್ ಹೆಲ್ತ್‌ಕೇರ್ ಹೇಳಿದೆ. ಪೀಪಲ್ ಟ್ರೀ ಆಸ್ಪತ್ರೆಯ ಪಕ್ಕದಲ್ಲಿರುವ 0.8 ಎಕರೆ ಭೂಮಿ ಸಹ ಈಗ ಫೋರ್ಟಿಸ್ ಹೆಲ್ತ್‌ಕೇರ್‌ ಪಾಲಾಗುತ್ತದೆ. ಇದನ್ನು ಸೇರಿಸಿಕೊಂಡು ಈಗಿರುವ ಆಸ್ಪತ್ರೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುತ್ತದೆ.

    ಫೋರ್ಟಿಸ್ ಹೆಲ್ತ್‌ಕೇರ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅಶುತೋಷ್ ರಘುವಂಶಿ ಮಾತನಾಡಿ, “ಈ ಸ್ವಾಧೀನ ಪ್ರಕ್ರಿಯೆಯ ಮೂಲಕ ಫೋರ್ಟಿಸ್ ಹೆಲ್ತ್‌ಕೇರ್‌ ಬೆಂಗಳೂರು ನಗರದಲ್ಲಿ ಸೇವೆಯನ್ನು ಇನ್ನಷ್ಟು ವಿಸ್ತರಣೆ ಮಾಡಲಿದೆ. ಆಯ್ದ ಕ್ಲಸ್ಟರ್‌ನಲ್ಲಿ ನಮ್ಮ ಅಸ್ತಿತ್ವವನ್ನು ಬಲಪಡಿಸುವ ಗುರಿಗೆ ಇದು ಪೂರಕವಾಗಿದೆ” ಎಂದು ಹೇಳಿದ್ದಾರೆ.

    ಸದ್ಯದ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ ಫೋರ್ಟಿಸ್ ಹೆಲ್ತ್‌ಕೇರ್‌ 7 ಘಟಕಗಳನ್ನು ಹೊಂದಿದೆ. 900 ಹಾಸಿಗೆ ಸಾಮರ್ಥ್ಯದ ಸೇವೆಗಳನ್ನು ನೀಡುತ್ತಿದೆ. ಈಗ ಪೀಪಲ್ಸ್ ಟ್ರೀ ಆಸ್ಪತ್ರೆ ಸ್ವಾಧೀನದ ಮೂಲಕ ಹಾಸಿಗೆ ಸಾಮರ್ಥ್ಯ 1,500ಕ್ಕೆ ಏರಿಕೆಯಾಗಲಿದೆ.

    ಬೆಂಗಳೂರು ನಗರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಈ ಹಿಂದೆ ಕೊಲಂಬಿಯಾ ಏಷ್ಯಾ ಮತ್ತು ವಿಕ್ರಂ ಆಸ್ಪತ್ರೆಗಳನ್ನು ಮಣಿಪಾಲ್ ಆಸ್ಪತ್ರೆಗಳ ಸಮೂಹ ಖರೀದಿ ಮಾಡುವ ಮೂಲಕ ದೊಡ್ಡ ವ್ಯವಹಾರವನ್ನು ಮಾಡಿತ್ತು. ಈಗ ಫೋರ್ಟಿಸ್ ಹೆಲ್ತ್‌ಕೇರ್‌ ಸಹ ಬಹುದೊಡ್ಡ ಸ್ವಾಧೀನ ಪ್ರಕ್ರಿಯೆಯನ್ನು ಮಾಡಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    ಶಾಕಿಂಗ್! ಪ್ರತಿಭಾವಂತ ಕುಸ್ತಿಪಟುಗೆ ಗಲ್ಲು—ಇರಾನ್‌ನಲ್ಲಿ ಪ್ರತಿಭಟನೆಗೆ ಬೆಲೆ ಜೀವವೇ?

    “ಇರಾನ್ ಕುಸ್ತಿಪಟು ಶಿಕ್ಷೆ ಪ್ರಕರಣ” ಇದೀಗ ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಕೇವಲ 19 ವರ್ಷದ ಯುವ ಕುಸ್ತಿಪಟು ಸಲեհ್ ಮೊಹಮ್ಮದಿ ಗಲ್ಲಿಗೇರಿಸಲ್ಪಟ್ಟ ಘಟನೆ ಮಾನವ ಹಕ್ಕುಗಳ ಬಗ್ಗೆ ದೊಡ್ಡ ಪ್ರಶ್ನೆ ಎಬ್ಬಿಸಿದೆ....

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading