ಇಂದಿನಿಂದ ( ನವೆಂಬರ್ 21 ) ಎಲ್ಲ ಕ್ರಿಕೆಟ್ ಸರಣಿಗಳ ತಾಯಿ ಎಂದೇ ಖ್ಯಾತಿಯನ್ನು ಪಡೆದಿರುವ ಆಶಸ್ ಟೆಸ್ಟ್ ಸರಣಿ ಶುರುವಾಗಿದೆ. ಮೊದಲ ಪಂದ್ಯ ಇಂದು ಪರ್ತ್ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಆರಂಭವಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆರಿಸಿಕೊಂಡು ಮೊದಲ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ದಾಳಿಗೆ ತತ್ತರಿಸಿ 32.5 ಓವರ್‌ಗಳಲ್ಲಿ 172 ರನ್‌ಗೆ ಆಲ್‌ಔಟ್ ಆಗಿದೆ. ಇನ್ನು ಆಸ್ಟ್ರೇಲಿಯಾ ಕೂಡ ಇಂಗ್ಲೆಂಡ್ ದಾಳಿಗೆ ತತ್ತರಿಸಿದ್ದು, ದಿನದಾಟದಂತ್ಯಕ್ಕೆ 39 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಕಲೆಹಾಕಿದೆ.
ಈ ಮೂಲಕ ಮೊದಲದಿನದಾಟದಂತ್ಯಕ್ಕೆ ಇಂಗ್ಲೆಂಡ್ 49 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಆಸ್ಟ್ರೇಲಿಯಾ ಪರ ನಾಥನ್ ಲಿಯಾನ್ ಬ್ರೆಂಡನ್ ಡಾಗೆಟ್ ಕಣದಲ್ಲಿದ್ದಾರೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ತಂಡದ ಪರ ಜಾಕ್ ಕ್ರಾವ್ಲಿ ಡಕ್‌ಔಟ್, ಬೆನ್ ಡಕೆಟ್ 21, ಓಲ್ಲಿ ಪೋಪ್ 46, ಜೋ ರೂಟ್ ಡಕ್‌ಔಟ್, ಹ್ಯಾರಿ ಬ್ರೂಕ್ 52, ಬೆನ್ ಸ್ಟೋಕ್ಸ್ 6, ಜೇಮಿ ಸ್ಮಿತ್ 33, ಗಸ್ ಆಟ್ಕಿನ್‌ಸನ್ 1, ಬ್ರೈಡನ್ ಕಾರ್ಸ್ 6, ಮಾರ್ಕ್ ವುಡ್ ಡಕ್‌ಔಟ್ ಹಾಗೂ ಜೋಫ್ರಾ ಆರ್ಚರ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 7 ವಿಕೆಟ್, ಬ್ರೆಂಡನ್ ಡಾಗ್ಗೆಟ್ 2 ವಿಕೆಟ್ ಹಾಗೂ ಕೆಮರಾನ್ ಗ್ರೀನ್ 1 ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜೇಕ್ ವೆದರಾಲ್ಡ್ ಡಕ್‌ಔಟ್, ಮಾರ್ನಸ್ ಲ್ಯಾಬುಷೇನ್ 9, ನಾಯಕ ಸ್ಟೀವನ್ ಸ್ಮಿತ್ 17, ಉಸ್ಮಾನ್ ಖವಾಜಾ 2, ಟ್ರಾವಿಸ್ ಹೆಡ್ 21, ಕೆಮರಾನ್ ಗ್ರೀನ್ 24, ಅಲೆಕ್ಸ್ ಕ್ಯಾರಿ 26, ಮಿಚೆಲ್ ಸ್ಟಾರ್ಕ್ 12, ಸ್ಕಾಟ್ ಬೊಲ್ಯಾಂಡ್ ಡಕ್‌ಔಟ್, ನಾಥನ್ ಲಿಯಾನ್ ಅಜೇಯ 3 ರನ್ ಹಾಗೂ ಯಾವುದೇ ರನ್ ಗಳಿಸದ ಬ್ರೆಂಡನ್ ಡಾಗ್ಗೆಟ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ 5 ವಿಕೆಟ್, ಜೋಫ್ರಾ ಆರ್ಚರ್ ಹಾಗೂ ಬ್ರೈಡನ್ ಕಾರ್ಸ್ ತಲಾ 2 ವಿಕೆಟ್ ಪಡೆದರು.
ಚನ್ನಪಟ್ಟಣ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ; ರೆಡ್‌ಹ್ಯಾಂಡ್ ಆಗಿ ಪತ್ನಿಗೆ ಸಿಕ್ಕಿಬಿದ್ದ ಪಾಪಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


