ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು ಒಂದರ ಬಳಿಕ ಒಂದು ಸ್ಪೋಟಕ ರಹಸ್ಯಗಳು ಬಯಲಾಗುತ್ತಿವೆ.
ಕೊಲೆ ಪ್ರಕರಣದ ಎ1 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ನಟಿ ರಚಿತಾ ರಾಮ್‌ಗೆ ಭರ್ಜರಿ ಗಿಫ್ಟ್ ಕೊಟ್ಟಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿತ್ತು. ಪ್ರಮುಖ ಆರೋಪಿ ಜಗ್ಗ ನಟಿ ರಚಿತಾ ರಾಮ್‌ಗೆ ಸೀರೆ ಹಾಗೂ ಚಿನ್ನ ನೀಡಿದ್ದ ಫೋಟೋ ವೈರಲ್ ಆಗಿತ್ತ. ರವಿ ಬೋಪಣ್ಣ ಸಿನಿಮಾ ಶೂಟಿಂಗ್ ವೇಳೆ ಜಗ್ಗ ರಚಿತಾಗೆ ಈ ಉಡುಗೊರೆಯನ್ನು ನೀಡಿದ್ದಾನೆ ಎನ್ನಲಾಗಿತ್ತು.
ಆದರೆ ರಚಿತಾ ರಾಮ್ ಆಪ್ತ ಮೂಲಗಳು ಈ ಆರೋಪವನ್ನು ತಳ್ಳಿಹಾಕಿದ್ದು, ಅದು ಗಿಫ್ಟ್ ಅಲ್ಲ ರವಿ ಬೋಪಣ್ಣ ಚಿತ್ರದಲ್ಲಿ ರಚಿತಾ ಅತಿಥಿ ಪಾತ್ರದಲ್ಲಿ ನಿರ್ವಹಿಸಿದ್ದರಿಂದ ಸಂಭಾವನೆ ಪಡೆದಿರಲಿಲ್ಲ, ಹೀಗಾಗಿ ಚಿತ್ರದ ಸಹ ನಿರ್ಮಾಪಕನಾಗಿದ್ದ ಜಗದೀಶ್ ಈ ಉಡುಗೊರೆಯನ್ನು ನೀಡಿದ್ದ ಎಂದಿದ್ದಾರೆ.
ತೂಕ ಕಡಿಮೆ ಮಾಡಲು ದಿನನಿತ್ಯ ಬಳಸಬಹುದಾದ ಆರೋಗ್ಯಕರ ಡಯಟ್ ಸೂಪ್ ರೆಸಿಪಿ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


