ರಾಯಚೂರು: ಕಳೆದ ಕೆಲ ದಿನಗಳ ಹಿಂದೆ ಗುರ್ಜಾಪುರ ಸೇತುವೆ ಮೇಲೆ ಪತ್ನಿ ತನ್ನ ಫೋಟೊ ತೆಗೆಯುವುದಾಗಿ ಹೇಳಿ ನಿಲ್ಲಿಸಿ ತನ್ನನ್ನ ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದಳು ಎಂದು ಪತಿ ಗಂಭೀರ ಆರೋಪ ಮಾಡಿದ್ದ.
ಸೇತುವೆಯಿಂದ ಬಿದ್ದು ನದಿ ಮಧ್ಯ ಸಿಲುಕಿದ್ದ ಪತಿಯನ್ನು ಸ್ಥಳೀಯರು ಕಾಪಾಡಿದ್ದರು. ಸೇತುವೆ ಮೇಲೆ ಮರಳಿ ಬಂದವ ತನ್ನ ಪತ್ನಿಯೇ ಈ ಕೆಲಸ ಮಾಡಿದ್ದಾಳೆಂದು ಗಂಭೀರ ಆರೋಪ ಮಾಡಿದ್ದ.
ಅಲ್ಲದೇ ಪತಿ ತಾತಪ್ಪ ಆಕೆಗೆ ವಿಚ್ಛೇದನ ನೀಡಲು ಸಹ ಮುಂದಾಗಿದ್ದ. ಆದರೆ ಇದೀಗ ಈ ಪ್ರಕರಣಕ್ಕೆ ಮಹಾ ತಿರುವು ಸಿಕ್ಕಿದ್ದು, ತಾತಪ್ಪ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಪತಿ ತಾತಪ್ಪ, ಆತನ ತಾಯಿ ಹಾಗೂ ಬಾಲಕಿಯ ತಾಯಿ ಈ ಮೂವರ ವಿರುದ್ಧವೂ ಸಹ ದೂರು ದಾಖಲಾಗಿದೆ.
ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 9 ಹಾಗೂ 10ರ ಅಡಿಯಲ್ಲಿ ದೂರನ್ನು ದಾಖಲಿಸಲಾಗಿದ್ದು, ಈ ಅಡಿಯಲ್ಲಿ ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಅಥವಾ 1 ಲಕ್ಷ ಜುಲ್ಮಾನೆಯನ್ನು ವಿಧಿಸಲಾಗುವುದು. ಒಮ್ಮೊಮ್ಮೆ ಎರಡನ್ನೂ ಸಹ ವಿಧಿಸುವ ಸಾಧ್ಯತೆ ಇರಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ವಾದ ಮಂಡಿಸದ ದರ್ಶನ್ ಪರ ವಕೀಲ; ಜಾಮೀನಿನ ಕಥೆ ಏನು?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


