ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ವೇಗ ನೀಡುವ ಕುರಿತು ಸಂಸದ ಬಿ.ವೈ.ರಾಘವೇಂದ್ರ ಅಪ್‌ಡೇಟ್ ನೀಡಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಸಚಿವಾಲಯದ ರಸ್ತೆ ಅಭಿವೃದ್ಧಿ ಮಹಾನಿರ್ದೇಶಕ ವಿನಯ್ ಕುಮಾರ್ ರಾಜಾವತ್ ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಕುರಿತು ಸಂಸದರು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ವೇಗ ನೀಡುವ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿಜೀಯವರ ಆಧುನಿಕ ರಸ್ತೆ ಸಂಪರ್ಕದ ಪರಿಕಲ್ಪನೆಗೆ ಅನುಗುಣವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯೋಜನೆಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು, ಕ್ಷೇತ್ರದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿನಯ್ ಕುಮಾರ್ ರಾಜಾವತ್ ಅವರ ಜೊತೆ ಪ್ರಸ್ತಾಪಿಸಿದ ಎಲ್ಲಾ ವಿಷಯಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.
ಪ್ರಮುಖ ಹೆದ್ದಾರಿ ಯೋಜನೆಗಳು
- ಆಗುಂಬೆ ಘಾಟ್ ಸುರಂಗ. (ರಾಷ್ಟ್ರೀಯ ಹೆದ್ದಾರಿ-169A) ಕಾರ್ಯಸಾಧ್ಯತಾ ವರದಿ, DPR
- ಶಿವಮೊಗ್ಗ ಉತ್ತರ ಬೈಪಾಸ್: 35 ಕಿ.ಮೀ. ಪೆರಿಫೆರಲ್ ರಿಂಗ್ ರಸ್ತೆಯನ್ನು ಅಂತಿಮಗೊಳಿಸಲು 16 ಕಿ.ಮೀ. ಉದ್ದದ (ರಾಷ್ಟ್ರೀಯ ಹೆದ್ದಾರಿ-13 ರಿಂದ ರಾಷ್ಟ್ರೀಯ ಹೆದ್ದಾರಿ-206) ಕಾಮಗಾರಿ ಪೂರ್ಣಗೊಳಿಸುವುದು. ಭೂಸ್ವಾಧೀನ ವೆಚ್ಚ ಭರಿಸಲು ಕರ್ನಾಟಕ ಸರ್ಕಾರ 100 ಕೋಟಿ ರೂ. ನೀಡಲು ಒಪ್ಪಿಕೊಂಡಿದೆ.
- ರಾಷ್ಟ್ರೀಯ ಹೆದ್ದಾರಿ-69 ಅಗಲೀಕರಣ (ಶಿವಮೊಗ್ಗದಿಂದ ಆನಂದಪುರ): 4-ಪಧಗಳ ಅಗಲೀಕರಣದ ತುರ್ತು ಆರಂಭ.
- ರಾಷ್ಟ್ರೀಯ ಹೆದ್ದಾರಿ-7660 ಅಗಲೀಕರಣ (ಬೈಂದೂರು ನಿಂದ ನಾಗೋಡಿ): ಮೊದಲ 37.85 ಕಿ.ಮೀ.ಗಳಿಗೆ 2-ವಧಗಳ ಅಗಲೀಕರಣ ಯೋಜನೆಯನ್ನು ತ್ವರಿತಗೊಳಿಸುವುದು.
- ರಾಷ್ಟ್ರೀಯ ಹೆದ್ದಾರಿ-169 ಅಗಲೀಕರಣ (ನೆಲ್ಲಿಸರದಿಂದ ತೀರ್ಥಹಳ್ಳಿ): ಮಂಜೂರಾದ 4-ಪಧಗಳ ಅಗಲೀಕರಣ ಕೆಲಸದ ಆದ್ಯತೆಯ ಅನುಷ್ಠಾನ.
- ತೀರ್ಥಹಳ್ಳಿ ಪಟ್ಟಣ ಬೈಪಾಸ್: ನಗರಕ್ಕೆ ಪೂರ್ಣ 18 ಕಿ.ಮೀ. ಬೈವಾಸ್ ರಚಿಸಲು ಅಸ್ತಿತ್ವದಲ್ಲಿರುವ PWD ಬೈಪಾಸ್ ಅನ್ನು ರಾಷ್ಟ್ರೀಯ ಹೆದ್ದಾರಿ-169A ನೊಂದಿಗೆ ಸಂಪರ್ಕಿಸುವ ಪ್ರಸ್ತಾವನೆ.
- ಇತರ ಯೋಜನೆಗಳು: ರಾಷ್ಟ್ರೀಯ ಹೆದ್ದಾರಿ-369E (ಸಾಗರದಿಂದ ಮರಕುಟುಕ), ರಾಷ್ಟ್ರೀಯ ಹೆದ್ದಾರಿ-766C (ಬೈಂದೂರು- ರಾಣೆಬೆನ್ನೂರು), ಮತ್ತು ರಾಷ್ಟ್ರೀಯ ಹೆದ್ದಾರಿ-69 (ಚೂರಿಕಟ್ಟೆಯಿಂದ ಆನಂದಪುರ) ಗಾಗಿ ಜೋಡಣೆ ಯೋಜನೆಗಳ ತಕ್ಷಣದ ಅನುಮೋದನೆಗಾಗಿ ವಿನಂತಿ.
- ಪ್ರಮುಖ ದುರಸ್ತಿ ಕಾರ್ಯ: ತೀರ್ಧಹಳ್ಳಿ ಮತ್ತು ಮೇಗರವಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ-169A ನ ಹಳಸಿದ ಭಾಗದಲ್ಲಿ ನಿಯತಕಾಲಿಕ ದುರಸ್ತಿ (PR) ಕಾಮಗಾರಿಗಳಿಗೆ ಅನುಮೋದನೆ.
- ರಾಜ್ಯ ಹೆದ್ದಾರಿ-25 ಮತ್ತು 254 ಹೊಸಪೇಟೆ-ಮರಿಯಮ್ಮನಹಳ್ಳಿ-ಹಗರಿ ಬೊಮ್ಮನಹಳ್ಳಿ-ಇಟ್ಟಿಗೆ-ಹರಪನಹಳ್ಳಿ-ಹರಿಹರ- ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಹೊನ್ನಾಳಿ-ಶಿವಮೊಗ್ಗ-ಮುಡುಬ-ಕುದುರೆಗುಂಡಿ-ಬಾಳೇಹೊನ್ನೂರು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವುದು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


