Tuesday, November 3, 2026
spot_img
More
    spot_img
    HomeLatest newsನೆಟ್‌ವರ್ಕ್ ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಸುಲಭ ಟಿಪ್ಸ್‌ಗಳನ್ನು ಟ್ರೈ ಮಾಡಿ

    ನೆಟ್‌ವರ್ಕ್ ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಸುಲಭ ಟಿಪ್ಸ್‌ಗಳನ್ನು ಟ್ರೈ ಮಾಡಿ

    ಇಂದಿನ ಯುಗದಲ್ಲಿ ಮೊಬೈಲ್ ಫೋನ್ ಬಳಕೆ ಹೇಗೆ ಸಾಮಾನ್ಯವಾಗಿದೆ ಅನ್ನೋದನ್ನು ವಿವರಿಸಲು ಬೇರೆಂದೂ ಹೇಳುವ ಅಗತ್ಯವಿಲ್ಲ. ನಾವು ಬೆಳಿಗ್ಗೆ ಎದ್ದು ಮೊದಲು ಮೊಬೈಲ್ ನೋಡುವುದರಿಂದ ಆರಂಭಿಸಿ, ರಾತ್ರಿ ಮಲಗುವವರೆಗೆ ನಾನಾ ಕಾರಣಗಳಿಗಾಗಿ ಫೋನ್ ಬಳಸುವದು ನಮ್ಮ ದಿನಚರಿಯಲ್ಲಿ ಅಂಬವಿಭಾಜ್ಯ ಭಾಗವಾಗಿದೆ. ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಾರೆ. ಆದರೆ, ಮೊಬೈಲ್ ಬಳಕೆಯೊಂದಿಗೆ ಉಂಟಾಗುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು ನೆಟ್‌ವರ್ಕ್ ತೊಂದರೆ. ಕರೆಗಳು ನಿರಂತರ ಕಡಿತಗೊಳ್ಳುವುದು, ಕರೆ ಸಿಗದಿರುವುದು ಅಥವಾ ಮೆಸೇಜ್ ಕಳಿಸಲು ಸಾಧ್ಯವಾಗದಿರುವುದು ಸಾಮಾನ್ಯ ಸಮಸ್ಯೆಗಳಾಗಿವೆ. ಇಂತಹ ಸಮಯದಲ್ಲಿ ನೀವು ಯಾರಿಗಾದರೂ ಸಂಪರ್ಕಿಸಲು ಬಯಸಿದರೆ, ಖಚಿತವಾಗಿ ಉತ್ತಮ ಮೊಬೈಲ್ ಸಿಗ್ನಲ್ ಇರಬೇಕು. ಇಲ್ಲದಿದ್ದರೆ, ಸಂವಹನ ಅಸಾಧ್ಯ. ಇನ್ನು ಮೊಬೈಲ್ ಫೋನ್‌ಗಳು ಕೇವಲ ಕರೆ ಅಥವಾ ಮೆಸೇಜ್‌ಗಳಿಗೆ ಮಾತ್ರ ಸೀಮಿತವಿಲ್ಲ. ಕೆಲಸ, ಮನರಂಜನೆ, ಇ-ಮೇಲ್, ಸೋಷಲ್ ಮೀಡಿಯಾ ಸೇರಿದಂತೆ ನೂರಾರು ಕಾರ್ಯಗಳಿಗೆ ಮೊಬೈಲ್‌ಗಳು ಅತ್ಯಗತ್ಯವಾಗಿವೆ.

    ನೆಟ್‌ವರ್ಕ್ ಸಮಸ್ಯೆ ಪರಿಹಾರಿಸಲು ಮತ್ತು ಇಂಟರ್ನೆಟ್ ವೇಗ ಹೆಚ್ಚಿಸಲು ಈ ಸುಲಭ ಟ್ರಿಕ್ ಟ್ರೈ ಮಾಡಿ

    ಒಳ್ಳೆಯ ಸ್ಥಳ ಹುಡುಕಿ:ಮನೆಯೊಳಗಿದ್ದರೆ, ಕಿಟಕಿಯ ಸಮೀಪ ಹೋಗಿ ಅಥವಾ ತೆರೆದ ಸ್ಥಳಕ್ಕೆ ಹೋಗಿ. ಕೆಲವೊಮ್ಮೆ ಗೋಡೆಯ ದಪ್ಪದಿಂದ ಸಿಗ್ನಲ್ ತಲುಪದೆ ಇರುವುದು.

    ಮೋಡ್ ಬದಲಾಯಿಸಿ:ನೀವು 5G ಅಥವಾ 4G ಬಳಸುತ್ತಿದ್ದರೆ, ತಾತ್ಕಾಲಿಕವಾಗಿ 3G ಅಥವಾ 2Gಗೆ ಬದಲಾಯಿಸಿ. ಕಡಿಮೆ ವೇಗದ ನೆಟ್‌ವರ್ಕ್‌ಗಳು ಕೆಲವೊಮ್ಮೆ ಉತ್ತಮ ಸಿಗ್ನಲ್ ಒದಗಿಸುತ್ತವೆ.

    ಫೋನ್ ಅನ್ನು ಏರ್‌ಪ್ಲೇನ್ ಮೋಡ್ ಹಾಕಿ :ಕೆಲವೇ ಸೆಕೆಂಡುಗಳ ಕಾಲ ಏರ್‌ಪ್ಲೇನ್ ಮೋಡ್ ಆನ್ ಮಾಡಿ, ಬಳಿಕ ಆಫ್ ಮಾಡಿ. ಇದರಿಂದ ಮೊಬೈಲ್‌ ಫೋನ್ ಹೊಸ ಟವರ್
    ನ್ನು ಸಂಪರ್ಕಿಸಲು ಪ್ರಯತ್ನಿಸುತ್ತದೆ.

    ಫೋನ್‌ ರೀಸ್ಟಾರ್ಟ್ ಮಾಡಿ:ಕೆಲವೊಮ್ಮೆ ಸಾಫ್ಟ್‌ವೇರ್ ತೊಂದರೆಗಳಿಂದ ಸಿಗ್ನಲ್ ಸಿಗದಿರುವ ಸಾಧ್ಯತೆ ಇರುತ್ತದೆ. ರೀಸ್ಟಾರ್ಟ್ ಮಾಡುವುದು ಈ ತೊಂದರೆ ಪರಿಹಾರಕ್ಕೆ ಸಹಾಯ ಮಾಡಬಹುದು.

    ಸಿಗ್ನಲ್ ಬೂಸ್ಟರ್ ಉಪಯೋಗಿಸಿ:ನಿಮಗೆ ನಿರಂತರ ಈ ಸಮಸ್ಯೆ ಎದುರಾಗುತ್ತಿದ್ದರೆ, ಸಿಗ್ನಲ್ ಬೂಸ್ಟರ್ ಮಾಡುವುದೂ ಒಳ್ಳೆಯ ಪರಿಹಾರವಾಗಬಹುದು.

    ವೈಫೈ ಕಾಲಿಂಗ್ ಸೌಲಭ್ಯ ಬಳಸಿ:ನಿಮ್ಮ ಮೊಬೈಲ್‌ ಸೇವಾ ಒದಗಿಸುವ ಸಂಸ್ಥೆ WiFi Calling ಆಯ್ಕೆ ನೀಡುತ್ತಿದ್ದರೆ, ಅದನ್ನು ಆನ್ ಮಾಡಿ. ಇದು ವೈಫೈ ಮೂಲಕ ಕರೆ ಮಾಡಲು ಸಹಾಯ ಮಾಡುತ್ತದೆ, ಮೊಬೈಲ್ ಸಿಗ್ನಲ್‌ ಇಲ್ಲದಿದ್ದರೂ ಸಹ.

    ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ರಿಸೆಟ್ ಮಾಡಿ:Settings > System > Reset > Reset Network Settings ಎನ್ನುವ ಆಯ್ಕೆಯಿಂದ ನಿಮ್ಮ ಮೊಬೈಲ್‌ನ ನೆಟ್‌ವರ್ಕ್ ಕಾನ್ಫಿಗರೇಶನ್ ಮರುಹೊಂದಿಸಿ.

    ಯುಐಡಿಎಐ ನಿಂದ ಹೊಸ ನಿರ್ಧಾರ: ಶಾಲೆಗಳಲ್ಲೇ ನಡೆಯಲಿದೆ ಮಕ್ಕಳ ಆಧಾರ್‌ ಬಯೋಮೆಟ್ರಿಕ್‌ ಅಪ್‌ಡೇಟ್

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search