ಪ್ರಸ್ತುತ ನಡೆಯುತ್ತಿರುವ ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 42 ಪಂದ್ಯಗಳು ನಿನ್ನೆ ( ಏಪ್ರಿಲ್ 24 ) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಮುಕ್ತಾಯವಾದವು.
ಈ ಪಂದ್ಯದಲ್ಲಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡು ಅಂಕ ಸಂಪಾದಿಸುವ ಮೂಲಕ ಒಟ್ಟು 12 ಅಂಕಗಳನ್ನು ಪಡೆದುಕೊಂಡಿದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಇನ್ನು ಸೋತ ರಾಜಸ್ಥಾನ್ ರಾಯಲ್ಸ್ ಏಳನೇ ಸೋಲನ್ನು ಕಾಣುವ ಮೂಲಕ ಕೇವಲ ಎರಡು ಪಂದ್ಯಗಳಲ್ಲಿ ಗೆದ್ದು 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿದೆ.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್‌ಗೆ ಇನ್ನಷ್ಟು ಸನಿಹವಾಗಿದೆ. ಈ ಪಂದ್ಯದ ಮುಕ್ತಾಯದ ಬಳಿಕ ಎಲ್ಲ ತಂಡಗಳಿಗೂ ಆಡಲು ಇನ್ನು 5 ಹಾಗೂ 6 ಪಂದ್ಯಗಳು ಮಾತ್ರ ಬಾಕಿ ಇದ್ದು, ಈ ಪೈಕಿ ಪ್ಲೇಆಫ್ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬ ಮಾಹಿತಿ ಈ ಕೆಳಕಂಡಂತಿದೆ..
ಸದ್ಯದ ಪರಿಸ್ಥಿತಿಯಲ್ಲಿ ಪ್ಲೇಆಫ್ ಪ್ರವೇಶಿಸಲು ಪ್ರತಿ ಬಾರಿಯ ಹಾಗೆ ಈ ಬಾರಿಯೂ ಸಹ ಕನಿಷ್ಟ 16 ಅಂಕ ಅತ್ಯಗತ್ಯ ಎಂದುಕೊಂಡರೂ
ಗುಜರಾತ್ ಟೈಟನ್ಸ್ – 6 ಪಂದ್ಯಗಳಲ್ಲಿ 2 ಪಂದ್ಯ ಲ್ಲಬೇಕು
ಡೆಲ್ಲಿ ಕ್ಯಾಪಿಟಲ್ಸ್ – 6 ಪಂದ್ಯಗಳಲ್ಲಿ 2 ಪಂದ್ಯ ಗೆಲ್ಲಬೇಕು
ಆರ್‌ಸಿಬಿ – 5 ಪಂದ್ಯಗಳಲ್ಲಿ 2 ಪಂದ್ಯ ಗೆಲ್ಲಬೇಕು
ಪಂಜಾಬ್ ಕಿಂಗ್ಸ್ – 6 ಪಂದ್ಯಗಳಲ್ಲಿ 3 ಪಂದ್ಯ ಗೆಲ್ಲಬೇಕು
ಮುಂಬೈ ಇಂಡಿಯನ್ಸ್ – 5 ಪಂದ್ಯಗಳಲ್ಲಿ 3 ಪಂದ್ಯ ಗೆಲ್ಲಬೇಕು
ಲಕ್ನೋ ಸೂಪರ್ ಜೈಂಟ್ಸ್ – 5 ಪಂದ್ಯಗಳಲ್ಲಿ 3 ಪಂದ್ಯ ಗೆಲ್ಲಬೇಕು
ಕೊಲ್ಕತ್ತಾ ನೈಟ್ ರೈಡರ್ಸ್ – 6 ಪಂದ್ಯಗಳಲ್ಲಿ 5 ಪಂದ್ಯ ಗೆಲ್ಲಬೇಕು
ಸನ್‌ರೈಸರ್ಸ್ ಹೈದರಾಬಾದ್ – 6 ಪಂದ್ಯಗಳಲ್ಲಿ 6 ಪಂದ್ಯ ಗೆಲ್ಲಬೇಕು
ಚೆನ್ನೈ ಸೂಪರ್ ಕಿಂಗ್ಸ್ – 6 ಪಂದ್ಯಗಳಲ್ಲಿ 6 ಪಂದ್ಯ ಗೆಲ್ಲಬೇಕಿದೆ.
ಆದರೆ ರಾಜಸ್ಥಾನ್ ರಾಯಲ್ಸ್ ಈಗಾಗಲೇ 9 ಪಂದ್ಯಗಳನ್ನಾಡಿದ್ದು ಕೇವಲ 2 ಪಂದ್ಯಗಳಲಿ ಮಾತ್ರ ಗೆದ್ದಿದ್ದು ಇನ್ನುಳಿದ 5 ಪಂದ್ಯದಲ್ಲಿ ಗೆದ್ದರೂ ಒಟ್ಟು 14 ಅಂಕಗಳಾಗಲಿದ್ದು, ಪ್ಲೇಆಫ್ ಪ್ರವೇಶ ಸಾಧ್ಯವೇ ಇಲ್ಲ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


