ಹೊಸದಿಲ್ಲಿ: ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಗಂಭೀರ ಆರೋಪವನ್ನು ಮಾಡಿದ್ದು, ಕರ್ನಾಟಕದ ಕ್ಷೇತ್ರವೊಂದರಲ್ಲಿ ಅಕ್ರಮ ನಡೆದಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಪಕ್ಷಕ್ಕೆ ಮೋಸ ಮಾಡಲು ಚುನಾವಣಾ ಆಯೋಗ ಅನುವು ಮಾಡಿಕೊಟ್ಟಿದ್ದು, ಕರ್ನಾಟಕದ ಒಂದು ಕ್ಷೇತ್ರದಲ್ಲಿ ಹೇಗೆ ಸಾವಿರಾರು ಹೊಸ ಮತದಾರರು ಸೇರ್ಪಡೆಗೊಳ್ಳಲು ಸಾಧ್ಯ? ಅದೂ ಸಹ 40, 45, 50 ಹಾಗೂ 55 ವರ್ಷಗಳ ಹೊಸ ಮತದಾರರು ಸೇರ್ಪಡೆಗೊಳ್ಳಲು ಹೇಗೆ ಸಾಧ್ಯ ಎಂದಿದ್ದಾರೆ. ಅಲ್ಲದೇ ತಮ್ಮ ಬಳಿ ಸಾಕ್ಷಿ ಇದ್ದು, ಎಲ್ಲವನ್ನೂ ತೆರೆದಿಡಲಿದ್ದೇವೆ ಎಂದು ಹೇಳಿದ್ದಾರೆ.
ಹೀಗೆ ರಾಹುಲ್ ಗಾಂಧಿ ರಾಜ್ಯದ ಒಂದು ಲೋಕಸಭಾ ಕ್ಷೇತ್ರದ ವಿರುದ್ಧ ಮಾಡಿರುವ ಗಂಭೀರ ಆರೋಪವನ್ನು ಡಿಕೆ ಶಿವಕುಮಾರ್ ಸತ್ಯ ಎಂದಿದ್ದಾರೆ. ಚುನಾವಣೆಯಾದ ದಿನದಿಂದಲೂ ತಂಡವೊಂದು ಇದರ ಕುರಿತು ಕೆಲಸ ಮಾಡಿದ್ದು, ಅದರಿಂದ ಕಲೆಹಾಕಿದ ಮಾಹಿತಿಯನ್ನು ರಾಹುಲ್ ಗಾಂಧಿಯವರಿಗೆ ತಾನೇ ತಲುಪಿಸಿದೆ ಎಂದಿದ್ದಾರೆ.
ರಾಹುಲ್ ಗಾಂಧಿ ಓರ್ವ ಜವಾಬ್ದಾರಿಯುತ ವಿಪಕ್ಷ ನಾಯಕ, ಸುಖಾಸುಮ್ಮನೆ ಅವರು ಇಂತಹ ಆರೋಪಗಳನ್ನು ಮಾಡುವುದಿಲ್ಲ ಎಂದ್ದಾರೆ.
ಭಾರತದಲ್ಲಿ ಲಾಂಚ್ ಆದ ‘ರಿಯಲ್‌ಮಿ 15 5G ಸಿರೀಸ್’: ಇದರ ವಿಶೇಷತೆ ಏನು?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


