Wednesday, September 2, 2026
spot_img
More
    spot_img
    HomeLatest newsಭಾರತದಲ್ಲಿ ಲಾಂಚ್ ಆದ ‘ರಿಯಲ್‌ಮಿ 15 5G ಸಿರೀಸ್’: ಇದರ ವಿಶೇಷತೆ ಏನು?

    ಭಾರತದಲ್ಲಿ ಲಾಂಚ್ ಆದ ‘ರಿಯಲ್‌ಮಿ 15 5G ಸಿರೀಸ್’: ಇದರ ವಿಶೇಷತೆ ಏನು?

    ರಿಯಲ್‌ಮಿ ತನ್ನ ಬಹುನಿರೀಕ್ಷಿತ ನಂಬರ್ ಸಿರೀಸ್ ಸಾಧನಗಳಾದ realme 15 Pro 5G ಮತ್ತು realme 15 5G ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿಕೊಂಡಿದೆ. ‘AI Party Phone’ ಎಂಬ ಹೊಸ ಟ್ಯಾಗ್‌ಲೈನ್‌ನೊಂದಿಗೆ ಪರಿಚಯವಾಗಿರುವ ಈ ಸಿರೀಜ್ ಫೋನ್ ಗಳು ಜುಲೈ 30, 2025ರಿಂದ ಮಾರಾಟಕ್ಕೆ ಲಭ್ಯವಾಗಲಿವೆ. ಜೊತೆಗೆ, realme Buds T200 ಆಡಿಯೋ ಉತ್ಪನ್ನವೂ ಆಗಸ್ಟ್ 1, 2025 ರಿಂದ ಖರೀದಿಸಲು ಸಾಧ್ಯವಾಗುತ್ತದೆ. Buds T200 ಮೌಲ್ಯ ₹1,999, ಬೂದು, ಬಿಳಿ, ನೇರಳೆ ಮತ್ತು ಹಸಿರು ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

    Advertisement

    ‘Realme 15 Pro 5G’ ರೂಪಾಂತರಗಳು ಮತ್ತು ಬೆಲೆ ವಿವರಗಳು

    ‘Realme 15 Pro 5G’ ಸ್ಮಾರ್ಟ್‌ಫೋನ್ ಭಾರತದಲ್ಲಿ ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದ್ದು, ಉಪಯೋಗದ ಅಗತ್ಯಕ್ಕೆ ಅನುಗುಣವಾಗಿ RAM ಮತ್ತು ಸ್ಟೋರೇಜ್ ಆಯ್ಕೆ ಮಾಡಬಹುದಾಗಿದೆ.ಈ ಎಲ್ಲಾ ರೂಪಾಂತರಗಳೂ ಪವರ್‌ಫುಲ್ ಕಾರ್ಯಕ್ಷಮತೆ, ಆಧುನಿಕ ಫೀಚರ್‌ಗಳು ಹಾಗೂ ಆಕರ್ಷಕ ಡಿಸೈನ್ ಹೊಂದಿವೆ. ರೂಪಾಂತರಗಳ ಬೆಲೆ ವಿವರಗಳು ಈಂತಿವೆ:

    8GB RAM + 128GB ಸ್ಟೋರೇಜ್ – ₹31,999

    8GB RAM + 256GB ಸ್ಟೋರೇಜ್ – ₹33,999

    12GB RAM + 256GB ಸ್ಟೋರೇಜ್ – ₹35,999

    12GB RAM + 512GB ಸ್ಟೋರೇಜ್ – ₹38,999

    ‘ರಿಯಲ್‌ಮಿ 15 5G’ ರೂಪಾಂತರಗಳು ಮತ್ತು ಬೆಲೆ ವಿವರಗಳು

    ರಿಯಲ್‌ಮಿ 15 5G ಫೋನ್‌ನ್ನು ಕಂಪನಿಯು ಮೂರು ವಿಭಿನ್ನ ರೂಪಾಂತರಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ.ಈ ಎಲ್ಲ ರೂಪಾಂತರಗಳೂ ಉತ್ತಮ ಕಾರ್ಯಕ್ಷಮತೆ, ಸುಧಾರಿತ ಡಿಸ್ಪ್ಲೇ ಹಾಗೂ ನವೀನ AI ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ. ಉಪಯೋಗದ ಅಗತ್ಯ ಮತ್ತು ಬಜೆಟ್‌ ಆಧಾರದ ಮೇಲೆ ಈ ಕೆಳಗಿನ ಆಪ್ಷನ್‌ಗಳನ್ನು ಆಯ್ಕೆಮಾಡಬಹುದು:

    8GB RAM + 128GB ಸ್ಟೋರೇಜ್ – ₹25,999

    8GB RAM + 256GB ಸ್ಟೋರೇಜ್ – ₹27,999

    12GB RAM + 256GB ಸ್ಟೋರೇಜ್ – ₹30,999

    ಈ ಫೋನ್‌ಗಳು ಜುಲೈ 30, 2025 ರಿಂದ ರಿಯಲ್‌ಮಿ ಇಂಡಿಯಾ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಆಯ್ದ ಆಫ್‌ಲೈನ್ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿರುವುದಾಗಿ ಕಂಪನಿ ಘೋಷಿಸಿದೆ.

    Realme 15 5G ಸಿರೀಸ್ ವೈಶಿಷ್ಟ್ಯಗಳು ಮತ್ತು ಪ್ರಮುಖ ಸ್ಪೆಸಿಫಿಕೇಶನ್‌ಗಳು


    ಡಿಸ್‌ಪ್ಲೇ:’Realme 15 5G’ ಮತ್ತು ‘Realme 15 Pro 5G’ ಎರಡೂ ಫೋನ್‌ಗಳು 6.8-ಇಂಚಿನ 1.5K AMOLED ಡಿಸ್‌ಪ್ಲೇಯೊಂದಿಗೆ ಲಭ್ಯವಿದ್ದು, ಕೆಳಗಿನ ತಂತ್ರಜ್ಞಾನಗಳನ್ನು ಒಳಗೊಂಡಿವೆ:

    144Hz ರಿಫ್ರೆಶ್ ರೇಟ್

    2,500Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ರೇಟ್

    6,500 ನಿಟ್ಸ್ ಪೀಕ್ ಬ್ರೈಟ್‌ನೆಸ್

    Corning Gorilla Glass 7i ಪ್ರೊಟೆಕ್ಷನ್

    ಕ್ಯಾಮೆರಾ ಸೆಟಪ್:

    Realme 15 Pro 5G:

    50MP Sony IMX896 ಮೇನ್ ಸೆನ್ಸಾರ್

    50MP ಅಲ್ಟ್ರಾ ವೈಡ್ ಕ್ಯಾಮೆರಾ

    Realme 15 5G:

    50MP Sony IMX882 ಮೇನ್ ಸೆನ್ಸಾರ್

    8MP ಅಲ್ಟ್ರಾ ವೈಡ್ ಲೆನ್ಸ್

    ಸೆಲ್ಫಿ ಕ್ಯಾಮೆರಾ

    50MP ಫ್ರಂಟ್ ಕ್ಯಾಮೆರಾ ವಿಡಿಯೋ ಕಾಲ್‌ಗಳು ಮತ್ತು ಸೆಲ್ಫಿಗಳಿಗೆ

    AI ವೈಶಿಷ್ಟ್ಯಗಳು

    Realme 15 ಸಿರೀಸ್ ಭಾರತದಲ್ಲಿ ಮೊದಲ ಬಾರಿ ಪರಿಚಯಿಸಲಾದ ಆಧುನಿಕ AI Edit Genie ನೊಂದಿಗೆ ಲಭ್ಯವಿದೆ. ಇದರ ಮೂಲಕ ಬಳಕೆದಾರರು ವಾಯ್ಸ್ ಕಮಾಂಡ್ ಮೂಲಕ ಫೋಟೋಗಳನ್ನು ಎಡಿಟ್ ಮಾಡಬಹುದು.

    ಸಾಫ್ಟ್‌ವೇರ್ ಮತ್ತು ಮೆಮೊರಿ:

    Android 15 ಆಧಾರಿತ Realme UI 6

    12GB LPDDR4X RAM

    512GB UFS 3.1 ಸ್ಟೋರೇಜ್ ಬೆಂಬಲ

    ಸುರಕ್ಷತಾ ವೈಶಿಷ್ಟ್ಯಗಳು:

    IP66 + IP68 + IP69 ರೇಟಿಂಗ್‌: ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್,ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್

    ನೆಟ್‌ವರ್ಕ್ ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಸುಲಭ ಟಿಪ್ಸ್‌ಗಳನ್ನು ಟ್ರೈ ಮಾಡಿ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading