Sunday, March 22, 2026
spot_img
More
    spot_img
    HomeLatest newsಲಡಾಖ್‌ನಲ್ಲಿ ರೊಚ್ಚಿಗೆದ್ದ ಜೆನ್‌ ಝಿ: ಬಿಜೆಪಿ ಬಾವುಟ ಹರಿದು, ಕಚೇರಿಗೆ ಬೆಂಕಿಯಿಟ್ಟ ಯುವ ಜನತೆ; ವಿಡಿಯೊ

    ಲಡಾಖ್‌ನಲ್ಲಿ ರೊಚ್ಚಿಗೆದ್ದ ಜೆನ್‌ ಝಿ: ಬಿಜೆಪಿ ಬಾವುಟ ಹರಿದು, ಕಚೇರಿಗೆ ಬೆಂಕಿಯಿಟ್ಟ ಯುವ ಜನತೆ; ವಿಡಿಯೊ

    ತನ್ನ ರಮಣೀಯ ವಾತಾವರಣ ಹಾಗೂ ಪ್ರವಾಸ ಪ್ರಿಯರ ಮೆಚ್ಚುಗೆಯ ಸ್ಥಳಗಳ ಮೂಲಕ ಹಿಮಾಲಯ ಭಾಗದ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಲಡಾಖ್‌ ನಿನ್ನೆ ( ಸೆಪ್ಟೆಂಬರ್‌ 24 ) ದೊಡ್ಡ ಮಟ್ಟದ ಹಿಂಸಾಚಾರದ ತಾಣವಾಗಿತ್ತು.

    ಜೆನ್‌ ಝಿಗಳು ಇದ್ದಕ್ಕಿದ್ದಂತೆ ಬಿಜೆಪಿ ಕಚೇರಿಗೆ ಬೆಂಕಿ ಇಟ್ಟು ಬಾವುಟ ಕಿತ್ತೆಸೆದಿದ್ದರು. ಲಡಾಖ್‌ ಪ್ರಾಂತ್ಯದ ಯುವ ಜನತೆ ಈ ಮಟ್ಟಕ್ಕೆ ರೊಚ್ಚಿಗೆದ್ದು ವರ್ತಿಸಲು ಕಾರಣ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವ ಕುರಿತ ವಿಚಾರವಾಗಿ.

    ಹೌದು, ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಹಾಗೂ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಲೇಹ್‌ನಲ್ಲಿ ಆರಂಭಗೊಂಡ ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದೆ. ಈ ಗಲಭೆಯಲ್ಲಿ 4 ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೇಪಾಳದ ಬಳಿಕ ಲಡಾಖ್‌ನಲ್ಲಿ ಯುವ ಜನತೆ ತಮ್ಮ ಅಸ್ತಿತ್ವಕ್ಕಾಗಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಇದನ್ನು ಟೀಕಿಸಿದ್ದಾರೆ.

    ಇನ್ನು ಈ ಪ್ರತಿಭಟನೆ ಸುಮಾರು ದಶಕದ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದು, ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಇಂದು ಯುವ ಜನತೆ ಬಿಜೆಪಿ ಕಚೇರಿಗೆ ನುಗ್ಗಿದ್ದಾರೆ ಎನ್ನಲಾಗಿದೆ.

    WhatsApp ಗುಡ್ ನ್ಯೂಸ್: ಇನ್ಮುಂದೆ ಬೇರೆ ಭಾಷೆಯ ಸಂದೇಶಗಳಿಗೂ ಚಾಟ್‌ನಲ್ಲಿಯೇ ಅನುವಾದ ಲಭ್ಯ!

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading