ಭಯದಿಂದಲೋ ಅಥವಾ ಅಭ್ಯಾಸದಿಂದಲೋ ಕೆಲವರು ರಾತ್ರಿ ಇಡೀ ದೀಪಗಳನ್ನು ಆನ್ ಮಾಡಿಯೇ ಮಲಗುತ್ತಾರೆ. ಆದರೆ ವೈದ್ಯರು ಹೇಳುವ ಪ್ರಕಾರ ಇದು ಕೇವಲ ಕೆಟ್ಟ ಅಭ್ಯಾಸವಲ್ಲ, ಇದು ಆರೋಗ್ಯಕ್ಕೆ ದೊಡ್ಡ ಹಾನಿ ಮಾಡುವ ಮಾರ್ಗ!
ಇತ್ತೀಚೆಗೆ ಹಾರ್ವರ್ಡ್ ವಿಶ್ವವಿದ್ಯಾಲಯವು ನಡೆಸಿದ ಶಾಕಿಂಗ್ ಅಧ್ಯಯನವು ಈ ಸತ್ಯವನ್ನು ಬಯಲು ಮಾಡಿದೆ ನಾವು ರಾತ್ರಿ ಬಳಸುವ ಸಣ್ಣ ಪ್ರಮಾಣದ ಕೃತಕ ಬೆಳಕು (Artificial Light) ಸಹ ನಮ್ಮ ಹೃದಯದ ಆರೋಗ್ಯಕ್ಕೆ ಅತಿ ಅಪಾಯಕಾರಿ! ವಾಯು ಮತ್ತು ಶಬ್ದ ಮಾಲಿನ್ಯದಂತೆಯೇ, ಈ ‘ಬೆಳಕಿನ ಮಾಲಿನ್ಯ’ ಕೂಡ ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚು ಹಾನಿಕಾರಕ ಎಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.
ಡಾ. ಅಬೋಹಾಶೆಮ್ ನೇತೃತ್ವದ ತಂಡವು 10 ವರ್ಷಗಳ ಕಾಲ ಅಧ್ಯಯನ ನಡೆಸಿದ್ದು, ರಾತ್ರಿಯಲ್ಲಿ ಹೆಚ್ಚು ಬೆಳಕಿಗೆ ಒಡ್ಡಿಕೊಳ್ಳುವವರಲ್ಲಿ ಹೃದಯದ ಆರೋಗ್ಯಕ್ಕೆ ಅಪಾಯಕಾರಿ ಬದಲಾವಣೆಗಳನ್ನು ಗಮನಿಸಿದ್ದಾರೆ. ಈ ಕೃತಕ ದೀಪಗಳನ್ನು ಆನ್ ಮಾಡುವುದರಿಂದ ದೇಹದ ಸಿರ್ಕಾಡಿಯನ್ ರಿದಂ (Circadian Rhythm) ತೊಂದರೆಗೊಳಗಾಗುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಹಾಳುಮಾಡಿ, ಅಂತಿಮವಾಗಿ ಅನೇಕ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ರಾತ್ರಿ ನೆಮ್ಮದಿಯ ನಿದ್ರೆಗಾಗಿ, ದೀಪ ಆಫ್ ಮಾಡಿ ಮಲಗುವುದೇ ಅತ್ಯುತ್ತಮ!
ರಾತ್ರಿ ಲೈಟ್ ಆನ್ ಮಾಡುವುದರಿಂದ ಆಗುವ ಪರಿಣಾಮ :
1.ಖಿನ್ನತೆ ಮತ್ತು ಆತಂಕ ಹೆಚ್ಚಳ
ರಾತ್ರಿ ಬೆಳಕಿಗೆ ಒಡ್ಡಿಕೊಳ್ಳುವುದು ನಿದ್ರೆಗೆ ಭಂಗ ತರುತ್ತದೆ, ಇದು ಮಾನಸಿಕ ಅಸಮತೋಲನಕ್ಕೆ ಕಾರಣವಾಗುತ್ತದೆ.ಹೆಚ್ಚಿನ ಬೆಳಕಿರುವ ಪ್ರದೇಶಗಳಲ್ಲಿ ವಾಸಿಸುವವರು ಖಿನ್ನತೆ (Depression) ಮತ್ತು ಆತಂಕಕ್ಕೆ (Anxiety) ಒಳಗಾಗುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಮನಸ್ಥಿತಿಯನ್ನು ಸ್ಥಿರವಾಗಿಡಲು ಸಹಾಯ ಮಾಡುವ ಮೆಲಟೋನಿನ್ ಹಾರ್ಮೋನ್‌ನ ಕೊರತೆಯಾಗುವುದು.
2.ಹೃದಯ ಬಡಿತ ಹೆಚ್ಚಳ ಮತ್ತು ನಿದ್ರಾಭಂಗ
ಲೈಟ್ ಆನ್ ಇರುವ ಕೋಣೆಯಲ್ಲಿ ಮಲಗಿದಾಗ ನಿಮ್ಮ ಸ್ವನಿಯಂತ್ರಿತ ನರಮಂಡಲವು (Autonomic Nervous System) ಸಕ್ರಿಯವಾಗಿರುತ್ತದೆ, ಇದು ದೇಹದ ವಿಶ್ರಾಂತಿಗೆ ಅಡ್ಡಿಪಡಿಸುತ್ತದೆ.ಸಾಮಾನ್ಯವಾಗಿ ರಾತ್ರಿ ಹೃದಯ ಬಡಿತ ಕಡಿಮೆಯಾಗಿರಬೇಕು, ಆದರೆ ಬೆಳಕಿರುವ ಕೋಣೆಯಲ್ಲಿ ಮಲಗಿದರೆ ಹೃದಯ ಬಡಿತ ಹೆಚ್ಚಾಗುತ್ತದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
3.ಬೊಜ್ಜು ಮತ್ತು ತೂಕ ಹೆಚ್ಚಳದ ಅಪಾಯ
ಬೆಳಕಿನಲ್ಲಿ ನಿದ್ರಿಸುವುದರಿಂದ ನಿದ್ರೆಗೆ ಭಂಗ ಬರುತ್ತದೆ. ಇದು ಹಸಿವನ್ನು ನಿಯಂತ್ರಿಸುವ ಲೆಪ್ಟಿನ್ (Leptin) ಮತ್ತು ಗ್ರೆಲಿನ್ (Ghrelin) ಹಾರ್ಮೋನುಗಳಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ.ಈ ಅಸಮತೋಲನವು ಹೊತ್ತಲ್ಲದ ಹೊತ್ತಿನಲ್ಲಿ ಏನನ್ನಾದರೂ ತಿನ್ನಬೇಕೆಂಬ ಬಯಕೆಯನ್ನು ಹೆಚ್ಚಿಸಿ, ತೂಕ ಹೆಚ್ಚಳ (Weight Gain) ಮತ್ತು ಬೊಜ್ಜಿಗೆ ಕಾರಣವಾಗುತ್ತದೆ.
4.ಕ್ಯಾನ್ಸರ್ ಅಪಾಯ ಹೆಚ್ಚಳ
ಮೆಲಟೋನಿನ್ ಕೇವಲ ನಿದ್ರೆಗೆ ಮಾತ್ರವಲ್ಲ, ದೇಹದ ಜೀವಕೋಶಗಳನ್ನು ಸರಿಪಡಿಸಲು ಮತ್ತು ಕ್ಯಾನ್ಸರ್ ತಡೆಗಟ್ಟಲು ಸಹ ಸಹಾಯಕವಾಗಿದೆ.ರಾತ್ರಿಯಲ್ಲಿ ದೀಪ ಹಚ್ಚಿಕೊಂಡು ಮಲಗುವುದರಿಂದ ಮೆಲಟೋನಿನ್ ಮಟ್ಟ ಕಡಿಮೆಯಾಗುತ್ತದೆ. ಇದು ಸ್ತನ (Breast) ಮತ್ತು ಪ್ರಾಸ್ಟೇಟ್ (Prostate) ಕ್ಯಾನ್ಸರ್‌ನಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
5.ಬೆಳಗ್ಗೆ ಎದ್ದ ಮೇಲೂ ಸುಸ್ತು ಮತ್ತು ಆಯಾಸ
ಲೈಟ್ ಆನ್ ಮಾಡುವುದರಿಂದ ಕೋಣೆಯ ಉಷ್ಣಾಂಶ ಅಧಿಕವಾಗಿ ಸರಿಯಾಗಿ ನಿದ್ದೆ ಬರುವುದಿಲ್ಲ. ಇದರಿಂದ ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಸಿಕ್ಕಂತೆ ಆಗುವುದಿಲ್ಲ.ಯಾವಾಗ ಸರಿಯಾದ ನಿದ್ದೆಯಾಗುವುದಿಲ್ಲವೋ, ಆಗ ಬೆಳಗ್ಗೆ ಎದ್ದ ಮೇಲೆ ಕೂಡಾ ಸುಸ್ತು, ಆಯಾಸ ನಿಮ್ಮನ್ನು ಕಾಡುತ್ತದೆ.
ಲ್ಯಾಪ್‌ಟಾಪ್ ಮಡಿಲಲ್ಲಿಟ್ಟು ಕೆಲಸ ಮಾಡಬೇಡಿ: ಪುರುಷ-ಮಹಿಳೆಯರಲ್ಲಿ ಈ ಗಂಭೀರ ಸಮಸ್ಯೆಗಳು ಖಚಿತ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


