Thursday, July 9, 2026
spot_img
More
    spot_img
    HomeLatest newsಬೆಂಗಳೂರು: 26 ವರ್ಷದ ಗಗನಸಖಿ ಮೇಲೆ 60 ವರ್ಷದ ಪೈಲಟ್‌ನಿಂದ ಅತ್ಯಾಚಾರ

    ಬೆಂಗಳೂರು: 26 ವರ್ಷದ ಗಗನಸಖಿ ಮೇಲೆ 60 ವರ್ಷದ ಪೈಲಟ್‌ನಿಂದ ಅತ್ಯಾಚಾರ

    ಬೆಂಗಳೂರು: 60 ವರ್ಷದ ಪೈಲಟ್‌ ಒಬ್ಬರ ವಿರುದ್ಧ ತನ್ನದೇ ಸಹೋದ್ಯೋಗಿ ಗಗನಸಖಿ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪ ಕೇಳಿಬಂದಿದೆ.

    Advertisement

    ನಗರದ ಖಾಸಗಿ ಹೊಟೇಲ್‌ನಲ್ಲಿ ವಿಶ್ರಾಂತಿಗೆಂದು ತಂಗಿದ್ದಾಗ ಈ ಘಟನೆ ನಡೆದಿದೆ ಎಂದು ಸ್ವತಃ ಗಗನಸಖಿ ಆರೋಪ ಮಾಡಿದ್ದಾರೆ. 26 ವರ್ಷದ ಗಗನಸಖಿ ಸೇರಿದಂತೆ ಇಬ್ಬರು ಪೈಲಟ್‌ಗಳು ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಬೆಂಗಳೂರಿಗೆ ಖಾಸಗಿ ವಿಮಾನದಲ್ಲಿ ಬಂದು ಪ್ರಯಾಣಿಕರೆಲ್ಲ ತೆರಳಿದ ಬಳಿಕ ನಗರದ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದರು. ಮರುದಿನ ಅವರು ಪುಟ್ಟಪರ್ತಿಗೆ ತೆರಳಬೇಕಿತ್ತು.

    ಈ ಸಂದರ್ಭದಲ್ಲಿ 60 ವರ್ಷದ ಪೈಲಟ್‌ ರೋಹಿತ್‌ ಸರನ್‌ ತನ್ನನ್ನು ಧೂಮಪಾನ ಮಾಡಲೆಂದು ಹೊರಗೆ ಕರೆದುಕೊಂಡು ಹೋಗುವ ನೆಪದಲ್ಲಿ ತನ್ನ ಕೋಣೆಯ ಬಳಿಗೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ಮಾಡಿದರು ಎಂದು ಸಂತ್ರಸ್ತೆ ವಾಪಸ್‌ ಪುಟ್ಟಪರ್ತಿ ತಲುಪಿದ ಬಳಿಕ ಘಟನೆ ಬಗ್ಗೆ ಕಂಪನಿಗೆ ದೂರು ನೀಡಿದ್ದಾರೆ.

    ನವೆಂಬರ್‌ 18ರಂದು ಈ ಘಟನೆ ನಡೆದಿದ್ದು, ಹೈದರಾಬಾದ್‌ನ ಬೇಗಂಪೇಟೆ ಪೊಲೀಸ್ ಠಾಣೆಯಲ್ಲಿ ನವೆಂಬರ್‌ 20ರಂದು ಜೀರೊ ಎಫ್‌ಐಆರ್‌ ದಾಖಲಾಗಿದೆ.

    ಮೈಸೂರು: ಸರ್ಕಾರಿ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಛತೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading