ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಮ್ಯಾಕ್ಸ್ ಇಂದು (ಡಿಸೆಂಬರ್ 25) ಬಿಡುಗಡೆಗೊಂಡಿದ್ದು, ಮೊದಲ ಪ್ರದರ್ಶನ ಮುಕ್ತಾಯವಾದ ಕೂಡಲೇ ಬ್ಲಾಕ್‌ಬಸ್ಟರ್ ಟ್ಯಾಗ್ ಗಿಟ್ಟಿಸಿಕೊಂಡಿದೆ. ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಪೂರ್ಣ ಪ್ರಮಾಣದ ನಾಯಕನಾಗಿ ಸುದೀಪ್ ನಟಿಸಿದ್ದ ಕಾರಣ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿಯೇ ಬಿಡುಗಡೆಯಾಗಿದೆ.
ಇನ್ನು ಇಂದು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ರಜೆ ಇರುವ ಕಾರಣ ಬುಧವಾರವಾದರೂ ಮುಂಗಡ ಬುಕಿಂಗ್ ಭರ್ಜರಿಯಾಗಿ ನಡೆದಿದೆ. ಮ್ಯಾಕ್ಸ್ ಚಿತ್ರದ ಒಟ್ಟು 1,08,000 ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿದ್ದು, ಕಳೆದ ವಾರವಷ್ಟೇ ಬಿಡುಗಡೆಗೊಂಡಿದ್ದ ಯುಐ ಚಿತ್ರವನ್ನು ಮ್ಯಾಕ್ಸ್ ಹಿಂದಿಕ್ಕಿದೆ.
ಇನ್ನು ಬಿಡುಗಡೆಗೂ ಮುನ್ನ ಅತಿಹೆಚ್ಚು ಟಿಕೆಟ್‌ಗಳು ಮಾರಾಟವಾದ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿರುವ ಮ್ಯಾಕ್ಸ್ ಮೊದಲ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರವಿದ್ದು, ದಾಖಲೆಯನ್ನು ತನ್ನ ಹೆಸರಿನಲ್ಲಿ ಹೊಂದಿದೆ.
ಮುಂಗಡ ಬುಕಿಂಗ್‌ನಲ್ಲಿ ಅತಿಹೆಚ್ಚು ಟಿಕೆಟ್‌ಗಳು ಮಾರಾಟಗೊಂಡ ಕನ್ನಡ ಚಿತ್ರಗಳ ಟಾಪ್ 5 ಪಟ್ಟಿ
- ಕಾಟೇರ – 1,32,000 ಟಿಕೆಟ್‌ಗಳು
- ಮ್ಯಾಕ್ಸ್ – 1,08,000 ಟಿಕೆಟ್‌ಗಳು
- ಯುಐ – 96000 ಟಿಕೆಟ್‌ಗಳು
- ಮಾರ್ಟಿನ್ – 42000 ಟಿಕೆಟ್‌ಗಳು
- ಭೀಮ – 24000 ಟಿಕೆಟ್‌ಗಳು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


