Monday, November 2, 2026
spot_img
More
    spot_img
    HomeLatest news60 ಮುಸ್ಲಿಂ ನಾಯಕರ ಜತೆ ಆರ್‌ಎಸ್‌ಎಸ್‌ ಭಾಗವತ್‌ ಸಭೆ

    60 ಮುಸ್ಲಿಂ ನಾಯಕರ ಜತೆ ಆರ್‌ಎಸ್‌ಎಸ್‌ ಭಾಗವತ್‌ ಸಭೆ

    ಹೊಸದಿಲ್ಲಿ: ಸುಮಾರು 60 ಮುಸಲ್ಮಾನ ನಾಯಕರು ಆರೆಸ್ಸೆಸ್ ಸರಸಂಘಚಾಲಕ ಮೋಹನ್‌ ಭಾಗ್ವತ್ ಅವರನ್ನು ಭೇಟಿಯಾಗಿ ವಿವಿಧ ಸಮುದಾಯಗಳ ನಡುವಣ ಪರಸ್ಪರ ದ್ವೇಷ ಆಸೂಯೆ ಕೊನೆಗೊಳಿಸುವ ಮಾರ್ಗೋಪಾಯಗಳ ಕುರಿತು ಚರ್ಚಿಸಿದ್ದಾರೆ.

    ಎಲ್ಲಾ ಮತ ಧರ್ಮಗಳು ಸಮಾನವೆಂದು ಭಾಗತ್ ಮುಸಲ್ಮಾನ ನಾಯಕರೊಂದಿಗೆ ಮಾತುಕತೆ ಸಂದರ್ಭ ಸಾರಿದ್ದಾರೆ. ಈ ಮಾತುಕತೆಯನ್ನು ಆಯೋಜಿಸಿದ ಅಖಿಲ ಭಾರತ ಇಮಾಮ್ ಸಂಘಟನೆ (ಎಐಐಒ) ಮುಖ್ಯಸ್ಥ ಅಹಮದ್ ಇಲ್ಯಾಸಿ ಈ ಮಾಹಿತಿ ನೀಡಿದ್ದಾರೆ. ದಿಲ್ಲಿಯ ಹರ್ಯಾಣ ಭವನದಲ್ಲಿ ಮೂರು ತಾಸು ಕಾಲ ನಡೆದ ಮಾತುಕತೆ ವೇಳೆ ದ್ವೇಷಾಸೂಯೆ ಕೊನೆಗಾಣಿಸಿ, ಪರಸ್ಪರ ಕೋಮು ಸೌಹಾರ್ದವನ್ನು ಎತ್ತಿಹಿಡಿವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಯಿತು. ಇದೊಂದು ವಿಶಿಷ್ಟ ಉಪಕ್ರಮ ಮತ್ತು ಮುಂದಿನ ದಿನಗಳಲ್ಲಿ ಇಂತಹ ಹಲವು ಸಭೆ-ಮಾತುಕತೆಗಳು ನಡೆವ ನಿರೀಕ್ಷೆಯಿದೆ ಎಂದು ಇಲ್ಯಾಸಿ ತಿಳಿಸಿದ್ದಾರೆ.

    ಆರೆಸ್ಸೆಸ್ ತನ್ನ ನೂರನೇ ವರ್ಷವನ್ನು ಆಚರಿಸುತ್ತಿರುವ ವಿಶೇಷ ಸನ್ನಿವೇಶ ಮತ್ತು ಎಐಐಒ 50ನೇ ವರ್ಷಾಚರಿಸುತ್ತಿರುವ ಕ್ಷಣಗಳಲ್ಲೇ ,ಕೋಮು ಸೌಹಾರ್ದಕ್ಕಾಗಿ ಮಾತುಕತೆ-ಚರ್ಚೆ ನಡೆದದ್ದು ನಿಜಕ್ಕೂ ವಿಶಿಷ್ಟವೆಂದು ಇಲ್ಯಾಸಿ ಬಣ್ಣಿಸಿದ್ದಾರೆ. ಎಲ್ಲಾ ಮಸೀದಿಗಳ ಮುಖ್ಯಸ್ಥರು, ಮೌಲ್ವಿಗಳು ಮತ್ತು ದೇವಾಲಯಗಳ ಅರ್ಚಕರು ತಮ್ಮ ಸಮುದಾಯಗಳ ಜನರನ್ನು ಕರೆದು ಸೌಹಾರ್ದತೆ ಬಗ್ಗೆ ಮಾತುಕತೆ ನಡೆಸಬೇಕೆಂದು ತೀರ್ಮಾನಿಸಲಾಯಿತು.

    ಬಿಎಂಟಿಸಿ ಬಸ್‌ನಲ್ಲೇ ಹೃದಯಾಘಾತ; 25 ವರ್ಷದ ಯುವಕ ಸಾವು

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search