ಮ್ಯಾಂಚೆಸ್ಟರ್: ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಮುಕ್ತಾಯವಾಗಿದೆ. ದಿನದಾಟದಂತ್ಯಕ್ಕೆ ಎರಡನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿರುವ ಭಾರತ 137 ರನ್ಗಳ ಹಿನ್ನಡೆ ಅನುಭವಿಸಿದೆ.
ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 358 ರನ್ಗಳಿಗೆ ಆಲ್ಔಟ್ ಆಗಿತ್ತು. ಇನ್ನು ಇಂಗ್ಲೆಂಡ್ ಜೋ ರೂಟ್ ಹಾಗೂ ನಾಯಕ ಬೆನ್ ಸ್ಟೋಕ್ಸ್ ಅಬ್ಬರದ ಶತಕಗಳ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 669 ರನ್ ಬಾರಿಸಿತು.
ಬೌಲಿಂಗ್ನಲ್ಲಿ ನೆಲಕಚ್ಚಿದ್ದ ಭಾರತ ಎರಡನೇ ಇನ್ನಿಂಗ್ಸ್ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ಇಬ್ಬರೂ ಸಹ ಡಕ್ಔಟ್ ಆಗುವ ಮೂಲಕ ತಂಡಕ್ಕೆ ಕೆಟ್ಟ ಆರಂಭವನ್ನು ನೀಡಿದರು. ಈ ಮೂಲಕ ಯಾವುದೇ ರನ್ ಗಳಿಸದೇ 2 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಮೂರನೇ ವಿಕೆಟ್ಗೆ ಜತೆಯಾದ ಕೆಎಲ್ ರಾಹುಲ್ ಹಾಗೂ ನಾಯಕ ಶುಭ್ಮನ್ ಗಿಲ್ ತಂಡದ ಮಾನ ಉಳಿಸಿದ್ದಾರೆ.
ರಾಹುಲ್ ಅಜೇಯ 87 ರನ್ ಕಲೆಹಾಕಿದರೆ, ನಾಯಕ ಶುಭ್ಮನ್ ಗಿಲ್ ಅಜೇಯ 78 ರನ್ ಕಲೆಹಾಕಿದ್ದಾರೆ. ಇನ್ನು ನಾಳೆ ಬೆಳಗ್ಗೆ ಹೊಸ ಚೆಂಡಿನೊಂದಿಗೆ ಆಟ ಆರಂಭವಾಗಲಿದ್ದು, ಭಾರತ ವಿಕೆಟ್ ಉಳಿಸಿಕೊಂಡು ಡ್ರಾ ಮಾಡಿಕೊಳ್ಳುವುದೇ ಸಾಧನೆಯಾಗಿದೆ.
ಬಿಎಂಟಿಸಿ ಬಸ್ನಲ್ಲೇ ಹೃದಯಾಘಾತ; 25 ವರ್ಷದ ಯುವಕ ಸಾವು
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


