ಪಾಟ್ನಾ: ಮೊನ್ನೆ ( ಜುಲೈ 25 ) ನಗರದಲ್ಲಿ ಹೇಯ ಕೃತ್ಯವೊಂದು ನಡೆದಿದ್ದು, ಚಲಿಸುತ್ತಿದ್ದ ಆಂಬುಲೆನ್ಸ್ನಲ್ಲೇ ಯುವತಿ ಮೇಲೆ ಮೂವರಿಂದ ನಾಲ್ವರು ಅತ್ಯಾಚಾರ ಎಸಗಿದ ಘಟನೆ ನಡೆದಿದೆ.
ಗಯಾ ಜಿಲ್ಲೆಯಲ್ಲಿ ನಡೆಯುತ್ತಿದ್ದ ಗೃಹ ರಕ್ಷಕ ದಳದ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸಿದ್ದ 26 ವರ್ಷದ ಯುವತಿ ದೈಹಿಕ ದೃಢತೆ ಟೆಸ್ಟ್ ವೇಳೆ ತಲೆ ತಿರುಗಿ ಬಿದ್ದಿದ್ದು, ಕೂಡಲೇ ಅಧಿಕಾರಿಗಳು ಆಂಬುಲೆನ್ಸ್ ವ್ಯವಸ್ಥೆ ಮಾಡಿ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದ್ದಾರೆ.
ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಜ್ಞಾಹೀನಳಾಗಿದ್ದ ತನ್ನ ಮೇಲೆ ಮೂವರಿಂದ ನಾಲ್ಕು ಮಂದಿ ಅತ್ಯಾಚಾರವೆಸಗಿದರು ಎಂದು ಯುವತಿ ಆರೋಪ ಮಾಡಿದ್ದಾಳೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆಗೆ ಎಸ್ಐಟಿ ರಚನೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಆಂಬುಲೆನ್ಸ್ ಚಾಲಕ ವಿನಯ್ ಕುಮಾರ್ ಹಾಗೂ ಟೆಕ್ನಿಷಿಯನ್ ಅಜಿತ್ ಕುಮಾರ್ ಇಬ್ಬರನ್ನು ಬಂಧಿಸಿದೆ.
ಬಿಎಂಟಿಸಿ ಬಸ್ನಲ್ಲೇ ಹೃದಯಾಘಾತ; 25 ವರ್ಷದ ಯುವಕ ಸಾವು
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


