Monday, September 21, 2026
spot_img
More
    spot_img
    HomeLatest newsಹೆಚ್ಚಾಯಿತು ಕಾಂಗ್ರೆಸ್‌ ಒಳಜಗಳ: ಪಕ್ಷವನ್ನು ಡಿಕೆಶಿ ಕಟ್ಟಿದ್ದಲ್ಲ ಎಂದ ಬಿ.ಕೆ ಹರಿಪ್ರಸಾದ್‌

    ಹೆಚ್ಚಾಯಿತು ಕಾಂಗ್ರೆಸ್‌ ಒಳಜಗಳ: ಪಕ್ಷವನ್ನು ಡಿಕೆಶಿ ಕಟ್ಟಿದ್ದಲ್ಲ ಎಂದ ಬಿ.ಕೆ ಹರಿಪ್ರಸಾದ್‌

    ಬೆಂಗಳೂರು: ಕಾಂಗ್ರೆಸ್‌‍ ಪಕ್ಷವನ್ನು ನಾನಾಗಲೀ ಡಿ.ಕೆ.ಶಿವಕುಮಾರ್‌ ಅವರಾಗಲಿ ಕಟ್ಟಿದ್ದಲ್ಲ. ಹಿರಿಯರು ನಮಗೆ ಬಿಟ್ಟು ಹೋಗಿರುವ ಪಕ್ಷ. ಇದನ್ನು ಹಾಳುಮಾಡದೇ ಮುಂದಿನ ಪೀಳಿಗೆಗೆ ಉಳಿಸಬೇಕಿರುವುದು ನಮ ಜವಾಬ್ದಾರಿ ಎಂದು ಹಿರಿಯ ಕಾಂಗ್ರೆಸ್ಸಿಗ ಬಿ.ಕೆ.ಹರಿಪ್ರಸಾದ್‌ ತಿರುಗೇಟು ನೀಡಿದ್ದಾರೆ.

    Advertisement

    ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೈದ್ಧಾಂತಿಕತೆಗೆ ಬದ್ಧನಾಗಿ ಕಾಂಗ್ರೆಸ್‌‍ನಲ್ಲಿದ್ದೇನೆ. ಅದರ ಹೊರತಾಗಿ ಬೇರೆ ಯಾವ ಕಾರಣಗಳಿಗೂ ಅಲ್ಲ. ಬಹಳಷ್ಟು ಜನರಿಗೆ ಕಾಂಗ್ರೆಸ್‌‍ನ ಆಳವಾದ ಇತಿಹಾಸ ಗೊತ್ತಿಲ್ಲ. 1969ರ ಬಳಿಕ ಈ ಪಕ್ಷದಿಂದ ಶಾಸಕನಾಗುವುದು, ಸಚಿವರಾಗುವುದು, ಸಂಸದರಾಗುವ ಆಲೋಚನೆಗಳಿದ್ದಷ್ಟೇ ಸೀಮಿತವಾಗಿದ್ದಾರೆ. ಆದರೆ ಕಾಂಗ್ರೆಸ್‌‍ ಅಧಿಕಾರಕ್ಕೆ ಮಾತ್ರ ಉಳಿದಿರುವ ಪಕ್ಷವಲ್ಲ ಎಂದರು.

    ದೇಶದ ಶೇ. 60ರಷ್ಟು ಜನ ಕಾಂಗ್ರೆಸ್‌‍ ಪಕ್ಷವನ್ನು ಬೆಂಬಲಿಸಿದ್ದಾರೆ. ಪಕ್ಷದ ಸಿದ್ಧಾಂತ ಎಂಬ ವಿಚಾರ ಬಂದರೆ, ನಾನು ಯಾರೊಂದಿಗೂ ರಾಜೀ ಆಗುವುದಿಲ್ಲ. ಮುಲಾಜಿಲ್ಲದೆ ಸೈದ್ಧಾಂತಿಕ ವಿಚಾರಗಳನ್ನು ಮಾತನಾಡುತ್ತೇನೆ ಎಂದು ಹೇಳಿದರು.

    ಕೆಲವೊಮ್ಮೆ ಅರಿವಿಲ್ಲದಂತೆ ಕೆಲವು ಬೆಳವಣಿಗೆಗಳಾಗುತ್ತವೆ. ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಇದು ಸಹಜ. ನಾನು ಯುವ ಕಾಂಗ್ರೆಸ್‌‍ನ ರಾಷ್ಟ್ರೀಯ ಪದಾಧಿಕಾರಿಯಾಗಿದ್ದಾಗ ಕೆ.ಎನ್‌. ರಾಜಣ್ಣ ಯುವ ಕಾಂಗ್ರೆಸ್‌‍ ರಾಜ್ಯ ಉಪಾಧ್ಯಕ್ಷರಾಗಿದ್ದರು. ಡಿ.ಕೆ.ಶಿವಕುಮಾರ್‌ ಜಿಲ್ಲಾಧ್ಯಕ್ಷರಾಗಿದ್ದರು. ಎಲ್ಲರ ನಿಲುವುಗಳು ಗೊತ್ತಿದೆ. ಎಲ್ಲರೂ ಕಾಂಗ್ರೆಸ್ಸಿಗರೇ. ಅವರು ಏನು ಹೇಳಿದ್ದರು, ಎಂಬುದನ್ನು ನಾನು ತಿಳಿಸಿದ್ದೇನೆ. ಅದಕ್ಕೆ ಡಿ.ಕೆ.ಶಿವಕುಮಾರ್‌ ಕೂಡ ಉತ್ತರ ನೀಡಿದ್ದಾರೆ. ಅಲ್ಲಿಗೆ ವಿಷಯ ಮುಗಿಯಿತು ಎಂದರು.

    ಇನ್ನು ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟಿಸುವುದನ್ನು ವಿರೋಧಿಸುತ್ತಿರುವುದು ಸರಿಯಲ್ಲ. ಇದು ಮಹಾರಾಜರ ಕಾರ್ಯಕ್ರಮ ಅಲ್ಲ, ಇದು ಸರ್ಕಾರದ ಕಾರ್ಯಕ್ರಮ. ರಾಜಮನೆತನದ ಒಳಗೆ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಬಾನು ಮುಷ್ತಾಕ್‌ ಭಾಗವಹಿಸುವುದಿಲ್ಲ. ದಸರಾ ಆಚರಣೆಯನ್ನು ವಿಶಾಲ ಮನೋಭಾವದಿಂದ ನೋಡಬೇಕಿದೆ ಎಂದರು.

    ಮಹಾರಾಜರು 1918ರಲ್ಲೇ ಸಮಾಸಮಾಜದ ಕನಸು ಕಂಡವರು. ಆ ಪರಂಪರೆಯನ್ನು ನಾವು ಗೌರವಿಸಬೇಕಿದೆ. ಬಾನು ಮುಷ್ತಾಕ್‌ ದೇಶಕ್ಕೆ ಗೌರವ ತಂದುಕೊಟ್ಟ ಮಹಿಳೆ. ಅವರಿಗೆ ಅಂತರಾಷ್ಟ್ರೀಯ ಮಟ್ಟದ ಬೂಕರ್‌ ಪ್ರಶಸ್ತಿ ಸಿಕ್ಕಿದೆ. ಆರ್‌ಎಸ್‌‍ಎಸ್‌‍ನ ಯಾರಿಗೂ ಬೂಕರ್‌ ಪ್ರಶಸ್ತಿ ಸಿಕ್ಕಿಲ್ಲ. ಈ ಕಾರಣಕ್ಕೆ ಹೊಟ್ಟೆ ಉರಿಯಿಂದ ಬಾನುಮುಷ್ತಕ್‌ರನ್ನು ವಿರೋಧಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಮೈಸೂರು ದಸರಾ 2025: ಎರಡನೇ ತಂಡದ ಗಜಪಡೆಯ ತೂಕ ಪರೀಕ್ಷೆ; ಯಾರು ಹೆಚ್ಚು?

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading