ಚಾಮರಾಜನಗರ: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪ ಮಾಡಿದ ಚಿನ್ನಯ್ಯ ಸದ್ಯ ಎಸ್‌ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಪಟ್ಟಿದ್ದಾರೆ.
ಸದ್ಯ ಬೆಳ್ತಂಗಡಿಯಲ್ಲಿ ಚಿನ್ನಯ್ಯನ ವಿಚಾರಣೆ ನಡೆಯುತ್ತಿದ್ದು, ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇನ್ನು ಒಂದೆಡೆ ಚಿನ್ನಯ್ಯನ ಬಂಧನವಾಗಿದ್ದರೆ, ಮತ್ತೊಂದೆಡೆ ಆತನ ಹಿನ್ನೆಲೆಯನ್ನು ಹಲವು ಮಂದಿ ಕೆದಕಲಾರಂಭಿಸಿದ್ದಾರೆ.
ಮಾಧ್ಯಮಗಳೂ ಸಹ ಆತನ ಹುಟ್ಟೂರಿಗೆ ತೆರಳಿ ಆತನ ಕುರಿತು ಸ್ಥಳೀಯರ ಅಭಿಪ್ರಾಯಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.
ಈ ವೇಳೆ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಚಿನ್ನಯ್ಯ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಈ ಆರೋಪದ ಕುರಿತು ಟಿವಿ9 ಜತೆ ಚಾಮರಾಜನಗರದ ಹಳ್ಳಿಯೊಂದರಲ್ಲಿರುವ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಮಾತನಾಡಿದ್ದು, ತಾವು ಯಾವ ಧರ್ಮಕ್ಕೂ ಸಹ ಮತಾಂತರಗೊಂಡಿಲ್ಲ, ಇಂದಿಗೂ ತಾವು ಮಂಜುನಾಥ ಸ್ವಾಮಿಯನ್ನೇ ಪೂಜೆ ಮಾಡುತ್ತೇವೆ, ಬೇಕಿದ್ದರೆ ಇಲ್ಲಿನ ಸ್ಥಳೀಯ ಚರ್ಚ್‌ಗಳಲ್ಲಿ ಕೇಳಿ ನೋಡಿ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ ತಮ್ಮ ಮನೆಗೆ ಮಾಧ್ಯಮದವರು ಬರುತ್ತಿರುವುದನ್ನು ಕಂಡು ಮನೆ ಮಾಲೀಕರು ಕಿಡಿಕಾರಿದ್ದಾರೆ, ತಮಗೆ ಕಷ್ಟವಾಗುತ್ತಿದೆ, ಮನೆಯವರೂ ಸಹ ತಮ್ಮ ಜತೆಯಲ್ಲಿ ಇಲ್ಲ, ಅವರ ಜತೆ ಮಾತನಾಡುವುದಕ್ಕೂ ಸಹ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಮೈಸೂರು ದಸರಾ 2025: ಎರಡನೇ ತಂಡದ ಗಜಪಡೆಯ ತೂಕ ಪರೀಕ್ಷೆ; ಯಾರು ಹೆಚ್ಚು?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


