ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಬಿಜೆಪಿ ತನ್ನ ಘಟಕಗಳು, ವ್ಯಕ್ತಿಗಳು, ಟ್ರಸ್ಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಂದ 20 ಸಾವಿರ ರೂ.ಗಿಂತ ಅಧಿಕ ಮೊತ್ತದ ಒಟ್ಟು 2,244 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದರೆ ಕಾಂಗ್ರೆಸ್ 289 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ.
ಇದು 2023-24 ಹಣಕಾಸು ವರ್ಷದಲ್ಲಿ ಪಡೆದ ದೇಣಿಗೆಯ ಮೂರು ಪಟ್ಟು ಅಧಿಕ. ಕಾಂಗ್ರೆಸ್ ಪಕ್ಷ ಈ ರೀತಿಯ 288.9 ಕೋಟಿ ರೂಪಾಯಿಗಳನ್ನು ಪಡೆದಿದ್ದು, 2022-23ರಲ್ಲಿ ಈ ಪ್ರಮಾಣ 79.9 ಕೋಟಿ ರೂಪಾಯಿ ಆಗಿತ್ತು.
ಭಾರತೀಯ ಚುನಾವಣಾ ಆಯೋಗ (ಇಸಿಐ) ತನ್ನ ವೆಬ್‍ಸೈಟ್‍ನಲ್ಲಿ ಪಕ್ಷಗಳು ನೀಡಿದ ಮಾಹಿತಿಯನ್ನು ನೀಡಿದೆ.2022-23 ರ ಹಣಕಾಸು ವರ್ಷದಲ್ಲಿ ಬಿಜೆಪಿ 719.85 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದರೆ ಕಾಂಗ್ರೆಸ್ 79.92 ಕೋಟಿ ರೂ. ಸ್ವೀಕರಿಸಿತ್ತು. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಿಜೆಪಿಗೆ ಸಿಕ್ಕಿದ ದೇಣಿಗೆ ಪ್ರಮಾಣ 212% ಏರಿಕೆಯಾಗಿದೆ.
ಅಂದರೆ ಬಿಜೆಪಿ ಪಡೆದ ಒಟ್ಟು ದೇಣಿಗೆಯ ಮೂರನೇ ಒಂದರಷ್ಟು ಭಾಗ ಮತ್ತು ಕಾಂಗ್ರೆಸ್ ದೇಣಿಗೆಯ ಅರ್ಧದಷ್ಟು ಭಾಗ ಈ ಟ್ರಸ್ಟ್‍ನಿಂದ ಬಂದಿದೆ. ಈ ಟ್ರಸ್ಟ್‍ಗೆ ದೇಣಿಗೆ ನೀಡಿದ ಅಗ್ರಗಣ್ಯ ಕಂಪನಿಗಳ ಪೈಕಿ ಮೆಘಾ ಎಂಜಿನಿಯರಿಂಗ್ ಅಂಡ್ ಇನ್ಸಾಲಿಮಿಟೆಡ್, ಸೆರಮ್ ಇನ್ಸಿಟ್ಯೂಟ್, ಆರ್ಸೆಲರ್ ಮಿತ್ತಲ್ ಗ್ರೂಪ್ ಮತ್ತು ಭಾರ್ತಿ ಏರ್‍ಟೆಲ್ ಸೇರಿವೆ.
ಬಿಜೆಪಿ ಹಾಗೂ ಕಾಂಗ್ರೆಸ್ ಘೋಷಿಸಿರುವ ಒಟ್ಟು ದೇಣಿಗೆಗಳಲ್ಲಿ ಎಲೆಕ್ಟೋರಲ್ ಬಾಂಡ್ ಮೂಲಕ ಪಡೆದ ಹಣ ಸೇರಿಲ್ಲ. ನಿಯಮಾನುಸಾರ ಈ ರಾಜಕೀಯ ಪಕ್ಷಗಳು ತಮ್ಮ ವಾರ್ಷಿಕ ಪರಿಶೋಧಿತ ವರದಿಗಳಲ್ಲಿ ಮಾತ್ರ ಇದನ್ನು ಉಲ್ಲೇಖಿಸಬೇಕಾಗುತ್ತದೆ. ದೇಣಿಗೆ ವರದಿಗಳಲ್ಲಿ ಇವುಗಳನ್ನು ಉಲ್ಲೇಖಿಸುವಂತಿಲ್ಲ. 2024ರ ಫೆಬ್ರವರಿಯಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ್ದು, ರಾಜಕೀಯ ಪಕ್ಷಗಳು ದೇಣಿಗೆಯನ್ನು ನೇರವಾಗಿ ಅಥವಾ ಚುನಾವಣಾ ಟ್ರಸ್ಟ್ ಮಾರ್ಗದಲ್ಲಿ ಸ್ವೀಕರಿಸಬೇಕು ಎಂದು ಸೂಚಿಸಿತ್ತು.
ಲೋಕಸಭೆ ಚುನಾವಣೆ ಹಿನ್ನೆಲೆ ಹರಿದು ಬಂದ ದೇಣಿಗೆ
ಬಿಜೆಪಿಯ 2023-24 ರ ದೇಣಿಗೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ದಾಖಲೆಯ 212% ನಷ್ಟು ಏರಿಕೆ ಕಂಡಿದೆ. ಜನರಲ್ ಎಲೆಕ್ಷನ್ ಇದ್ದ ಕಾರಣ ಈ ಏರಿಕೆ ಸಹಜವಾಗಿದ್ದು, 2018-19 ರ ಚುನಾವಣೆ ಮುನ್ನವೂ ಬಿಜೆಪಿಗೆ 742 ಕೋಟಿ ರೂ ಸಂಗ್ರಹವಾಗಿತ್ತು, ಕಾಂಗ್ರೆಸ್ ಗೆ 146.8 ಕೋಟಿ ಒಟ್ಟಾಗಿತ್ತು.
ಎಲೆಕ್ಟೋರಲ್ ಟ್ರಸ್ಟ್ ಮೂಲಕ 850 ಕೋಟಿ ರೂ ಬಿಜೆಪಿಗೆ ಒಟ್ಟಾಗಿದ್ದರೆ, ಈ ಪೈಕಿ 723 ಕೋಟಿ ಪ್ರುಡೆಂಟ್ ನಿಂದ ಬಂದಿದೆ, 127 ಕೋಟಿ ಟ್ರಿಂಪ್ ಎಲೆಕ್ಟೋರಲ್ ಟ್ರಸ್ಟ್ ಹಾಗೂ 17.2 ಕೋಟಿ ರೂ ಇನ್ ಜಿಗರ್ಟಿಗ್ ಟ್ರಸ್ಟ್ ಮೂಲಕ ಬಂದಿದೆ. ಕಾಂಗ್ರೆಸ್ ಗೆ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಏಕೈಕ ಡೋನರ್ ಆಗಿದ್ದು 156 ಕೋಟೊ ರೂ ಈ ಮೂಲಕ ಬಂದಿದೆ.
ಆದರೆ ಕೆಲ ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡ್ ಮೂಲಕ ಪಡೆದ ದೇಣಿಗೆಯನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸಿವೆ. ಇವುಗಳಲ್ಲಿ ಬಿಆರ್‍ಎಸ್ ಚುನಾವಣಾ ಬಾಂಡ್ ಮೂಲಕ 495.5 ಕೋಟಿ, ಡಿಎಂಕೆ 60 ಕೋಟಿ ಹಾಗೂ ವೈಎಸ್‍ಆರ್ ಕಾಂಗ್ರೆಸ್ 125.5 ಕೋಟಿ ರೂಪಾಯಿ ದೇಣಿಗೆ ಪಡೆದಿವೆ. ಜೆಎಂಎಂ ಚುನಾವಣಾ ಎಡ್ ಮೂಲಕ 11.5 ಕೋಟಿ ರೂಪಾಯಿ ಪಡೆದಿದ್ದು, ‘ದೇಣಿಗೆಗಳಾಗಿ 64 ಲಕ್ಷ ರೂಪಾಯಿ ಗಳಿಸಿದೆ. ಬಿಜೆಪಿ ಪಡೆದ ದೇಣಿಗೆ ಶೇಕಡ 212ರಷ್ಟು ಏರಿಕೆಯಾಗಿದೆ.
ಯಾವ ಪಕ್ಷಕ್ಕೆ ಎಷ್ಟು ದೇಣಿಗೆ? ( ರೂಪಾಯಿಗಳಲ್ಲಿ )
ಬಿಜೆಪಿ -2244
ಬಿಆರ್‍ಎಸ್ -80
ಕಾಂಗ್ರೆಸ್ -289
ವೈಎಸ್‍ಆರ್‍ಸಿಪಿ – 184
ಟಿಡಿಪಿ- 100
ಡಿಎಂಕೆ- 60
ಎಎಪಿ- 11
ಟಿಎಂಸಿ -6
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


