ಬೆಂಗಳೂರು;ಇಂದು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಬೆಂಗಳೂರಿನಲ್ಲಿ ಭವ್ಯವಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪ್ರತಿಷ್ಠಿತ 2025ರ ಕೆಂಪೇಗೌಡ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 52 ಸಾಧಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸಮಾಜ ಸೇವೆ, ಮಾಧ್ಯಮ, ನ್ಯಾಯ, ಆಡಳಿತ, ವೈದ್ಯಕೀಯ, ಸಾಹಿತ್ಯ, ಸಂಗೀತ ಸೇರಿದಂತೆ ಅನೇಕ ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಲಾಗಿದೆ.ಈ ಬಾರಿ ಖ್ಯಾತ ಗಾಯಕಿ ಸಂಗೀತಾ ಕಟ್ಟಿ, ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ್ಯ, ಸುಪ್ರೀಂ ಕೋರ್ಟ್ ವಕೀಲರಾದ ಶ್ಯಾಮಸುಂದರ್, ನ್ಯೂಸ್ ಫಸ್ಟ್ ಸೀನಿಯರ್ ಕ್ಯಾಮೆರಾಮನ್ ಅವಿರಾಜ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್, ಸಿದ್ಧಯ್ಯ ಸೇರಿದಂತೆ 52 ಸಾಧಕರಿಗೆ ನಗದು ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಇಂದು ಸಂಜೆ 6 ಗಂಟೆಗೆ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ರಾಜಕುಮಾರ್ ಗಾಜಿನ ಮನೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ವಿವರ ಇಲ್ಲಿದೆ
ನಂದಕುಮಾರ್ (ಹೆಲಿಕಾಫ್ಟರ್ ಪೈಲೆಟ್), ಎಂ.ಜಿ.ರಾಜಗೋಪಾಲ್ (ಕೆಎಎಸ್‌ಎಸ್‌ಐಎ-ಅಧ್ಯಕ್ಷರು), ಅರುಣ್ ಪೈ (ಸಮಾಜ ಸೇವೆ), ಡಾ.ವೆಂಕಟಪ್ಪ (ಕಣ್ವ ಆಸ್ಪತ್ರೆ), ದೀಪಕ್ ತಿಮ್ಮಯ್ಯ (ಜರ್ನಲಿಸ್ಟ್), ಸತೀಶ್ (ದಿ ಹಿಂದೂ ಪತ್ರಿಕೆ), ಮಾರಸಪ್ಪ ರವಿ (ಛಾಯಾಚಿತ್ರಗ್ರಾಹಕ), ದರ್ಶನ್ ಗೌಡ , ಅವಿರಾಜ್ (ನ್ಯೂಸ್ ಫಸ್ಟ್), ಶ್ಯಾಮ್ ಸುಂದರ್ ( ಸುಪ್ರೀಂ ಕೋರ್ಟ್ ವಕೀಲರು), ಪ್ರೊ.ಮಿಶ್ರಾ ( ಆರ್ಕಿಟೆಕ್ಟ್), ಬಿ.ಎಸ್. ಪಾಟೀಲ್ (ನಿವೃತ್ತ ಐಎಎಸ್), ಸಿದ್ದಯ್ಯ(ನಿವೃತ್ತ ಐಎಎಸ್), ರವಿಚಂದರ್, ಉಮಾಶಂಕರ್ (ನಿವೃತ್ತ ಐಎಎಸ್), ಜೈಕಾರ್ ಜಯರೋಮೆ (ನಿವೃತ್ತ ಐಎಎಸ್) ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಯಾನಂದ್ (ಡಿಎಸ್ ಮ್ಯಾಕ್ಸ್ ಡೆವಲಪರ್ಸ್), ಕಲ್ಪನಾ ಶಿವಣ್ಣ (ಮಾಗಡಿ), ಚಂದ್ರಶೇಖರ್ ರಾಜು (ಬ್ಲೆಂಡ್ ಸ್ಕೂಲ್), ವರ್ಮಾ (ಎ.ಸಿ.ಇ ಕಂಪೆನಿ ಆರ್ಕಿಟೆಕ್ಟ್), ಹರ್ಷ ಬಿನ್ ಹಂಪನಾ ನಾಗರಾಜು (ಆರ್ಕಿಟೆಕ್ಟ್), ಕೆ.ಎಂ.ನಾಗರಾಜು, ಟಿ.ಎಸ್. ಲೂಕಸ್ (ಸ್ಕೌಟ್ಸ್ ಆಂಡ್ ಗೌಡ್ಸ್), ಪದ್ಮಶ್ರೀ, ಎಂ.ಚಂದ್ರರೆಡ್ಡಿ, ಎ.ಆರೋಗ್ಯಪ್ಪ, ವಿ.ಎಸ್.ಪ್ಯಾಟ್ರಿಕ್ ರಾಜು, ಸಂಗೀತ ಕಟ್ಟಿ, ಡಾ.ಗೌರಿ ಸುಬ್ರಮಣ್ಯ (ಮುಕ್ತಿ ನಾಗ), ವಿದ್ವಾನ್ ಆರ್.ಕೆ.ಶಂಕರ್, ಎಚ್.ಆರ್.ಭಾರ್ಗವ್, ಎಚ್.ತಿಮ್ಮರಾಜ್ ಅರಸ್, ರಾಜೇಶ್ ರೈ ಚಟ್ಲ, ಭಾವನಾ ನಾಗಯ್ಯ, ಮಹೇಶ್ ಭೂಪತಿ, ಧನುಷ್ ಎಂ., ಎಂ.ಅಭಿಮನ್ಯು (ಕರಗ) ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕು.ವಾನ್ಯವಿ ಬಿ.ಎಸ್., ಡಾ.ವಾಸು(ಈದಿನ ಡಾಟ್‌ಕಾಂ), ರಾಧಿಕಾ ಸ್ವಾಮಿ (ನೃತ್ಯೋಮ ಡ್ಯಾನ್ಸ್ ಅಕಾಡಮಿ), ರವಿಗೌಡ ಜಕ್ಕೂರು, ವಿದೂಷಿ ರೇಖಾ ಜಗದೀಶ್(ಲಲಿತಾ ಕಲಾನಿಕೇತನ), ದ್ಯಾಮಣ್ಣ ಎಂ.ಶಾಸ್ತ್ರಿ(ಜ್ಯೋತಿಷಿ), ಡಾ.ಬಿ.ಪಿ.ಆರಾಧ್ಯ(ಜ್ಯೋತಿಷಿ), ಮರಿಮಲ್ಲಯ್ಯ, ಡಾ.ಸಿ ಶಿವರಾಜು (ಸಂಸ್ಕೃತ ಪ್ರೊಫೆಸರ್), ಬಿ.ಎಂ.ಶಿವರುದ್ರಯ್ಯ, ವೈ.ಕೆ.ಬೆನ್ನೂರು, ಬನ್ನೇರುಘಟ್ಟ, ನಂದಿತಾ ಸುಬ್ಬರಾವ್, ಅತೀಕ್ ಅಹ್ಮದ್ ಬೇಗ್, ಸಂಗೀತಾ ಜೈನ್(ಹೆಲ್ತ್‌ಕ್ಯಾಂಪ್), ಎನ್.ದೇವರಾಜು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರೆ ಮಾಡಿದಾಗ ಬರುತ್ತಿದ್ದ ಅಮಿತಾಬ್ ಸೈಬರ್ ವಂಚನೆ ಕಾಲರ್ ಟ್ಯೂನ್ ಕಿರಿಕಿರಿಗೆ ಬಿತ್ತು ಬ್ರೇಕ್
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


