Sunday, September 20, 2026
spot_img
More
    spot_img
    HomeSportsCricket1 ಎಸೆತಕ್ಕೆ 1 ರನ್‌, ಕ್ಯಾಚ್‌ ಮಿಸ್; ನೈಟ್‌ ರೈಡರ್ಸ್‌ ವಿರುದ್ಧ ವಾಷಿಂಗ್ಟನ್‌ಗೆ ರೋಚಕ ಜಯ

    1 ಎಸೆತಕ್ಕೆ 1 ರನ್‌, ಕ್ಯಾಚ್‌ ಮಿಸ್; ನೈಟ್‌ ರೈಡರ್ಸ್‌ ವಿರುದ್ಧ ವಾಷಿಂಗ್ಟನ್‌ಗೆ ರೋಚಕ ಜಯ

    ಪ್ರಸ್ತುತ ನಡೆಯುತ್ತಿರುವ ಮೇಜರ್‌ ಕ್ರಿಕೆಟ್‌ ಲೀಗ್‌ ಟೂರ್ನಿಯಲ್ಲಿ ನಿನ್ನೆ ( ಜೂನ್‌ 26 ) ದಲ್ಲಾಸ್‌ನಲ್ಲಿ ನಡೆದ ಲಾಸ್‌ ಏಂಜಲೀಸ್‌ ನೈಟ್‌ ರೈಡರ್ಸ್‌ ಹಾಗೂ ವಾಷಿಂಗ್ಟನ್‌ ಫ್ರೀಡಂ ತಂಡಗಳ ನಡುವಿನ ಪಂದ್ಯ ಲಾಸ್ಟ್‌ ಬಾಲ್‌ ಥ್ರಿಲ್ಲರ್‌ ಆಗಿ ಮುಕ್ತಾಯಗೊಂಡಿದೆ.

    Advertisement

    ವಾಷಿಂಗ್ಟನ್‌ ಫ್ರೀಡಂ ತಂಡ ಕೊನೆಯ ಎಸೆತದಲ್ಲಿ 1 ರನ್‌ ಬೇಕಿದ್ದಾಗ ರೋಚಕ ಗೆಲುವು ದಾಖಲಿಸಿದೆ. ಪಂದ್ಯದ ಕೊನೆಯ ಎಸೆತದಲ್ಲಿ ಒಂದು ರನ್‌ ಬೇಕಿದ್ದಾಗ ಆಂಡ್ರೆ ರಸೆಲ್‌ ಎಸೆದ ಎಸೆತಕ್ಕೆ ಗ್ಲೆನ್‌ ಫಿಲಿಪ್ಸ್‌ ಹೊಡೆತ ಬಾರಿಸಿದರು. ಹೋಲ್ಡರ್‌ ಕ್ಯಾಚ್‌ ಹಿಡಿಯಲು ಎರಡು ಬಾರಿ ಯತ್ನಿಸಿದರಾದರೂ ಚೆಂಡು ನೆಲಕ್ಕೆ ಬಿತ್ತು. ಈ ಮೂಲಕ ಅತಿ ರೋಚಕವಾಗಿ ಪಂದ್ಯದಲ್ಲಿ ವಾಷಿಂಗ್ಟನ್‌ ಫ್ರೀಡಂ ಗೆಲುವು ಕಂಡಿತು.

    ಪಂದ್ಯದಲ್ಲಿ ಟಾಸ್‌ ಗೆದ್ದ ವಾಷಿಂಗ್ಟನ್‌ ಫ್ರೀಡಂ ಫೀಲ್ಡಿಂಗ್‌ ಆರಿಸಿಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಲಾಸ್‌ ಏಂಜಲೀಸ್‌ ನೈಟ್‌ ರೈಡರ್ಸ್‌ ಆಂಡ್ರೆ ಫ್ಲೆಚರ್‌ ಶತಕದ ನೆರವಿನಿಂದ 4 ವಿಕೆಟ್‌ ನಷ್ಟಕ್ಕೆ 213 ರನ್‌ ಕಲೆಹಾಕಿ ವಾಷಿಂಗ್ಟನ್‌ ಫ್ರೀಡಂ ತಂಡಕ್ಕೆ ಗೆಲ್ಲಲು 214 ರನ್‌ಗಳ ಗುರಿಯನ್ನು ನೀಡಿತ್ತು.

    ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ವಾಷಿಂಗ್ಟನ್‌ ಫ್ರೀಡಂ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 214 ರನ್‌ ಬಾರಿಸಿತು.

    ಭಾರತ vs ಇಂಗ್ಲೆಂಡ್‌ ದ್ವಿತೀಯ ಟೆಸ್ಟ್;‌ ಇಂಗ್ಲೆಂಡ್‌ ತಂಡ ಸೇರಿಕೊಂಡ ಡೇಂಜರಸ್‌ ಆಟಗಾರ!

    ಎಐ ಅಡ್ವೋಕೇಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading