ಬೆಂಗಳೂರು: ಕಾಂಗ್ರೆಸ್‌ನ ಶಾಸಕರಾದ ಬಿಆರ್ ಪಾಟೀಲ್ ಹಾಗೂ ರಾಜು ಕಾಗೆ ಆರೋಪದಿಂದ ಪಕ್ಷದಲ್ಲಿನ ಆಂತರಿಕೆ ಭಿನ್ನಮತ ಬಹಿರಂಗವಾಗಿದ್ದು, ಸದ್ಯ ಸಹಕಾರ ಸಚಿವ ಕೆಎನ್ ರಾಜಣ್ಣ ಅವರ ಹೇಳಿಕೆಗಳು ರಾಜ್ಯ ಕಾಂಗ್ರೆಸ್ ಅನ್ನು ಮತ್ತಷ್ಟು ಮುಜುಗರಕ್ಕೀಡಾಗಿದೆ.
ಕೆಎನ್ ರಾಜಣ್ಣ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದು, ಸದ್ಯ ಅವರ ಈ ಹೇಳಿಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಇದ್ದ ಚರ್ಚೆಗಳನ್ನು ಹೆಚ್ಚಾಗುವಂತೆ ಮಾಡಿದೆ.
ಈ ಕುರಿತು ಇದೀಗ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿದ್ದು, ರಾಜಣ್ಣನವರು ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ರಾಜ್ಯ ರಾಜಕಾರಣದಲ್ಲಿ ಮಹಾ ಬದಲಾವಣೆಯಾಗಲಿದೆ ಎಂದಿದ್ದಾರೆ, ಅವರಿಗೆ ಯಾವುದೋ ಮಾಹಿತಿ ಇರಬೇಕು, ಇಲ್ಲದಿದ್ದರೆ ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಆ ಮಾತನ್ನು ಹೇಳುವುದಕ್ಕೆ ಸಾಧ್ಯವಿಲ್ಲ ಎಂದರು.
ಇನ್ನು ತನಗೆ ಈ ಕುರಿತ ಯಾವುದೇ ಮಾಹಿತಿ ಇಲ್ಲ ಎಂದಿರುವ ಪರಮೇಶ್ವರ್ ಉಳಿದವರಿಗೆ ಏನು ಮಾಹಿತಿ ಇದೆಯೋ ಅದರ ಮೇಲೆ ಅವರ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎಂದರು.
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Fact Check: ಬೈಕ್ ಟ್ಯಾಕ್ಸಿ ಪರ ನಿಂತ ಲಾಯರ್ ಜಗದೀಶ್ ಮುಖ ಕಿತ್ತುಹೋಗುವ ಹಾಗೆ ಹೊಡೆದ ಆಟೊ ಡ್ರೈವರ್ಸ್!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


