ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿಯನ್ನು ರದ್ದುಗೊಳಿಸಿ ನ್ಯಾಯಾಲಯ ತೀರ್ಪುಗೊಳಿಸಿದ್ದು, ಈ ನಿರ್ಣಯಕ್ಕೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗ್ಗದ ಖರ್ಚಿನಲ್ಲಿ ಬೈಕ್ ಟ್ಯಾಕ್ಸಿ ಮೂಲಕ ಪ್ರಯಾಣ ಮಾಡುತ್ತಿದ್ದ ಮಂದಿ ಈ ನಡೆಯನ್ನು ಖಂಡಿಸಿದ್ದಾರೆ.
ಕಡಿಮೆ ಗಳಿಸುವ ಅದೆಷ್ಟೋ ಜನರಿಗೆ ಅನುಕೂಲ ಒದಗಿಸಿದ್ದ ಬೈಕ್ ಟ್ಯಾಕ್ಸಿ ರದ್ದು ಮಾಡಿದ್ದನ್ನು ರೀಲ್ಸ್ ಮೂಲಕವೂ ಸಹ ಅನೇಕ ಮಂದಿ ವಿರೋಧಿಸಿದ್ದರು. ಇನ್ನು ಲಾಯರ್ ಜಗದೀಶ್ ಬೈಕ್ ಟ್ಯಾಕ್ಸಿ ಪರ ಹೋರಾಟ ಮಾಡಿ ಮತ್ತೆ ಜಾರಿಗೆ ಬರುವಂತೆ ಮಾಡುವುದಾಗಿ ವಿಡಿಯೊ ಮಾಡಿ ಹಂಚಿಕೊಂಡಿದ್ದರು.
ಇದರ ವಿರುದ್ಧ ಸಾಮಾನ್ಯವಾಗಿ ಆಟೊ ಚಾಲಕರು ಕಾಮೆಂಟ್ ಮಾಡಿದ್ದರು. ಇನ್ನು ಇದಕ್ಕೆ ಸಂಬಂಧಿಸಿದಂತೆ ಲಾಯರ್ ಜಗದೀಶ್ ಅವರ ಮೇಲೆ ಆಟೊ ಚಾಲಕರು ಹಲ್ಲೆ ನಡೆಸಿದ್ದಾರೆ ಎಂಬ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ ಲಾಯರ್ ಜಗದೀಶ್ ಅವರ ಮುಖ ಕಿತ್ತುಹಾಗುವ ಹಾಗೆ ಹೊಡೆದಿದ್ದಾರೆ ಎಂಬ ಮಾತುಗಳನ್ನು ಸಾರ್ವಜನಿಕರು ಹೇಳುತ್ತಿರುವ ಆಡಿಯೊ ಸಹ ಇದೆ.
ಈ ವಿಡಿಯೊವನ್ನು ಕರ್ನಾಟಕ ಸ್ಟೋರಿಸ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಆಟೊ ಚಾಲಕರ ವಿರುದ್ಧ ನೀಡಿದ ಹೇಳಿಕೆಗೆ ಲಾಯರ್ ಜಗದೀಶ್ ಜೊತೆ ಆಟೊ ಚಾಲಕರು ಫೈಟ್ ಎಂದು ಬರೆದುಕೊಂಡಿದ್ದಾರೆ. ಆದರೆ ಅಸಲಿಯತ್ತಿಗೆ ಇದು ಜನವರಿ ತಿಂಗಳಿನ ವಿಡಿಯೊ. ಜಗದೀಶ್ ತಮ್ಮ ಕಾಂಪ್ಲೆಕ್ಸ್ ಮುಂದೆ ರಸ್ತೆ ಬ್ಲಾಕ್ ಮಾಡಿಕೊಂಡು ಅಣ್ಣಮ್ಮ ಕೂರಿಸಿದ್ದರ ಕುರಿತಾಗಿ ಪ್ರಶ್ನಿಸಿದ್ದಕ್ಕೆ ಸ್ಥಳೀಯರ ಜೊತೆ ನಡೆದಿದ್ದ ಜಗಳವಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಜಗದೀಶ್ ನಡುವೆ ಈ ಮಾರಾಮಾರಿ ನಡೆದಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


