ಮೈಸೂರು: ಇಂದು ( ಜೂನ್ 27 ) ಮೊದಲ ಆಷಾಢ ಶುಕ್ರವಾರದ ಆಚರಣೆ ನಡೆಯುತ್ತಿದ್ದು, ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ಜರುಗುತ್ತಿವೆ. ಅದರಲ್ಲೂ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಅದ್ದೂರಿಯಾಗಿ ಆಷಾಢ ಆಚರಣೆ ನಡೆಯಲಿದ್ದು, ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.
ಜಿಲ್ಲಾ ಪೊಲೀಸರು ಈ ವೇಳೆ ಯಾವುದೇ ಅಹಿತಕರ ಘಟನೆಗಳು ಆಗದಿರಲಿ ಎಂದು ಮುನ್ನೆಚ್ಚರಿಕಾ ಕ್ರಮ ವಹಿಸಿ ಈ ಬಾರಿ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದು, ದರ್ಶನದ ವ್ಯವಸ್ಥೆಯೂ ಸಹ ನೂತನವಾಗಿದೆ. ಅವುಗಳ ಕುರಿತಾದ ಮಾಹಿತಿ ಮುಂದಿದೆ.
ಈ ಬಾರಿ ಬೆಟ್ಟದಲ್ಲಿ ಮೂರು ತರದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಚಿತ ದರ್ಶನ, 300 ರೂ ದರ್ಶನ ಮತ್ತು 2000 ರೂ ದರ್ಶನಕ್ಕೆ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಲಾಗಿದೆ. ಲಲಿತ ಮಹಲ್ ಮೈದಾನದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ಉಚಿತ ದರ್ಶನದ ಭಕ್ತರಿಗೆ ಪ್ರತ್ಯೇಕ ಬಸ್, 300 ರೂ ಟಿಕೆಟ್ ಪಡೆದು ಹೋಗುವರಿಗೆ ಪ್ರತ್ಯೇಕ ಬಸ್ ಮತ್ತು ಎರಡು ಸಾವಿರ ರೂ ಟಿಕೆಟ್ ಪಡೆದು ಹೋಗುವವರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮೂರು ವಿಭಾಗ ಮಾಡಿ ದರ್ಶನಕ್ಕೆ ಪ್ರತ್ಯೇಕ ಸರದಿ ಸಾಲನ್ನೂ ಕೂಡ ಮಾಡಲಾಗಿದೆ. ಉಚಿತ ದರ್ಶನಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೂ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ಸಿಟಿ ಬಸ್ ನಿಲ್ದಾಣನಿಂದ ಬರುವ ಪುರುಷರು ಟಿಕೆಟ್ ಕೊಟ್ಟು ಬರಬೇಕಾಗುತ್ತದೆ.
ಲಲಿತಾ ಮಹಲ್ ಬಳಿಯಿಂದ ಹೋಗುವ ಸಾಮಾನ್ಯ ಭಕ್ತಾಧಿಗಳಿಗೆ ಉಚಿತವಾಗಿರುತ್ತದೆ. ಶುಕ್ರವಾರದಿಂದ ಭಾನುವಾರದವರೆಗೂ 300, 2000ರೂ ಟಿಕೆಟ್ ಕೊಟ್ಟು ಹೋಗುವ ಭಕ್ತಾಧಿಗಳಿಗೆ ಮೂರು ದಿನಗಳೂ ಬಸ್ ಉಚಿತವಾಗಿರುತ್ತದೆ. ಬೆಟ್ಟಕ್ಕೆ ಬರುವ ಭಕ್ತರಿಗೆ ಡ್ರೈಫ್ರೂಟ್ಸ್ ಮತ್ತು ನಂದಿನ ಬಾದಾಮಿ ಹಾಲನ್ನೂ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದಂತೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. 2 ಸಾವಿರ ವಿಶೇಷ ಟಿಕೆಟ್ ಹೊಂದಿರುವ ಭಕ್ತರನ್ನು ಕರೆತರುವ ಬಸ್ಸು ಮಹಿಷಾಸುರ ಪ್ರತಿಮೆವರೆಗೂ ಬರಲಿದೆ.
Fact Check: ಬೈಕ್ ಟ್ಯಾಕ್ಸಿ ಪರ ನಿಂತ ಲಾಯರ್ ಜಗದೀಶ್ ಮುಖ ಕಿತ್ತುಹೋಗುವ ಹಾಗೆ ಹೊಡೆದ ಆಟೊ ಡ್ರೈವರ್ಸ್!
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


