ಸದ್ಯ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ಪುರುಷರ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಲೀಡ್ಸ್ ಅಂಗಳದಲ್ಲಿ ಮೊದಲ ಟೆಸ್ಟ್ ಪಂದ್ಯ ಈಗಾಗಲೇ ನಡೆದಿದ್ದು, ಈ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತು ಕೆಟ್ಟ ಆರಂಭ ಪಡೆದುಕೊಂಡಿದೆ.
ಹೀಗೆ ಭಾರತ ಹೀನಾಯ ಸೋಲು ಕಂಡ ಬೆನ್ನಲ್ಲೇ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ನೆಟ್ಟಿಗರು ಹಾಗೂ ಭಾರತ ಕ್ರಿಕೆಟ್ ಪ್ರೇಮಿಗಳು ಕಿಡಿಕಾರಿದ್ದಾರೆ. ಗಂಭೀರ್ ಕೋಚ್ ಆಗಿ ಆಯ್ಕೆಯಾದಾಗಿನಿಂದ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಗ್ಗರಿಸಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಇದೇ ಸಂದರ್ಭದಲ್ಲಿ ಈ ಹಿಂದಿನ ಕೋಚ್‌ಗಳಾದ ರಾಹುಲ್ ದ್ರಾವಿಡ್ ಹಾಗೂ ರವಿಶಾಸ್ತ್ರಿ ಬಗ್ಗೆ ಸಹ ಚರ್ಚೆಗಳು ನಡೆಯುತ್ತಿದ್ದು, ಮೂವರೂ ಕೋಚ್‌ಗಳ ಅಡಿಯಲ್ಲಿ ಭಾರತ ಎಷ್ಟು ಪಂದ್ಯಗಳನ್ನಾಡಿದೆ ಹಾಗೂ ಈ ಪೈಕಿ ಎಷ್ಟು ಪಂದ್ಯಗಳಲ್ಲಿ ಗೆದ್ದಿದೆ ಎಂಬ ಅಂಕಿಅಂಶ ಸಹ ವೈರಲ್ ಆಗಿದೆ. ಹಾಗಿದ್ದರೆ ಯಾವ ಕೋಚ್ ಅಡಿಯಲ್ಲಿ ಭಾರತ ಎಷ್ಟೆಷ್ಟು ಪಂದ್ಯಗಳನ್ನು ಗೆದ್ದಿದೆ ಎಂಬ ಮಾಹಿತಿ ಮುಂದಿದೆ.
ರವಿಶಾಸ್ತ್ರಿ ಕೋಚಿಂಗ್ ಅಡಿಯಲ್ಲಿ 43 ಪಂದ್ಯಗಳನ್ನಾಡಿದ್ದ ಭಾರತ 25 ಪಂದ್ಯಗಳಲ್ಲಿ ಗೆದ್ದು, 13 ಪಂದ್ಯಗಳಲ್ಲಿ ಸೋತು, 5 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ರಾಹುಲ್ ದ್ರಾವಿಡ್ ಮಾರ್ಗದರ್ಶನದ ಅಡಿಯಲ್ಲಿ 24 ಪಂದ್ಯಗಳನ್ನಾಡಿದ್ದ ಟೀಮ್ ಇಂಡಿಯಾ 14 ಪಂದ್ಯಗಳಲ್ಲಿ ಗೆದ್ದು, 7 ಪಂದ್ಯಗಳಲ್ಲಿ ಸೋತಿತ್ತು ಹಾಗೂ 3 ಪಂದ್ಯಗಳು ಡ್ರಾ ಆಗಿದ್ದವು.,
ಗೌತಮ್ ಗಂಭೀರ್ ಕೋಚ್ ಆದಾಗಿನಿಂದ ಭಾರತ 11 ಪಂದ್ಯಗಳಲ್ಲಿ ಆಡಿದ್ದು, ಕೇವಲ 3 ಪಂದ್ಯಗಳಲ್ಲಿ ಗೆದ್ದಿದ್ದು, 7 ಪಂದ್ಯಗಳನ್ನು ಸೋತಿದೆ ಹಾಗೂ ಇನ್ನುಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
Fact Check: ಬೈಕ್ ಟ್ಯಾಕ್ಸಿ ಪರ ನಿಂತ ಲಾಯರ್ ಜಗದೀಶ್ ಮುಖ ಕಿತ್ತುಹೋಗುವ ಹಾಗೆ ಹೊಡೆದ ಆಟೊ ಡ್ರೈವರ್ಸ್!
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


