ಧರ್ಮಸ್ಥಳ: ಧರ್ಮಸ್ಥಳದಲ್ಲಿ ಅಸಹಜ ಸಾವುಗಳು ನಡದಿವೆ ಎಂಬ ಆರೋಪದ ಮೇಲೆ ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ತಂಡ ರಚನೆಯಾದಾಗಿನಿಂದ ಧರ್ಮಸ್ಥಳದಲ್ಲಿ ಹುದುಗಿಹೋಗಿದ್ದ ಅದೆಷ್ಟೋ ಪ್ರಕರಣಗಳ ಬಗ್ಗೆ ಮಾಹಿತಿ ಜನರಿಗೆ ತಿಳಿದಂತಾಗಿದೆ.
ಅದೇ ರೀತಿ ಮತ್ತೊಂದು ಪ್ರಕರಣದ ಕುರಿತ ಮಾಹಿತಿಯನ್ನು ಇದೀಗ ಬೆಂಗಳೂರು ಪೋಸ್ಟ್ ಡಾಟ್ ಕಾಮ್ ವೆಬ್‌ತಾಣ ಪ್ರಕಟಿಸಿದೆ. ಹೌದು, 2012ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿದ್ದ 17 ವರ್ಷದ ಹೇಮಾವತಿ @ ಹೇಮಲತಾ ಎಂಬಾಕೆ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಸಹೋದರ ದೂರು ನೀಡಿದರೂ ಪೊಲೀಸರು ತನಿಖೆ ನಡೆಸಿಲ್ಲ ಎಂಬ ಆರೋಪ ಎಸ್‌ಐಟಿ ರಚನೆಯಾದ ಕೇಳಿಬಂದಿದೆ.
ನಿತಿನ್ ದೇವಾಡಿಗ ಎಂಬಾತ ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಾಸಂತಿ ಎಂಬಾಕೆ ಅಂಗನವಾಡಿ ಕೆಲಸ ಕಲಿಯಲು ಹೋಗಿದ್ದ ತನ್ನ ಸಹೋದರಿಯನ್ನು ಧರ್ಮಸ್ಥಳ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಳು. ಮೊದಲ ಬಾರಿಗೆ ಕರೆದುಕೊಂಡು ಹೋದಾಗ ಸಹೋದರಿ ವಾಪಸ್ ಬಂದಿದ್ದಳು. ಆದರೆ ಎರಡನೇ ಬಾರಿಗೆ ಹೇಮಲತಾ ವಾಪಸ್ ಬರಲೇ ಇಲ್ಲ. ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಪ್ರಕರಣ ದಾಖಲಿಸಲಿಲ್ಲ, ವಾಸಂತಿಯನ್ನು ಕರೆದು ವಿಚಾರಣೆ ಮಾಡಿದರೂ ಆಕೆಯವ ವಿರುದ್ದ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.
ಹೀಗೆ ಆರೋಪ ಕೇಳಿಬಂದ ಕಾರಣ ಎಸ್‌ಐಟಿ ಸ್ವೀಕೃತಿಯನ್ನು ಕೊಟ್ಟಿದ್ದು, ಈ ಸೀಕೃತಿ ಕಂಡ ಬಳಿಕ ಪುಂಜಾಲಕಟ್ಟೆ ಪೊಲೀಸರು ಆಗಸ್ಟ್ 14ರಂದು ಹೇಮಲತಾ ನಾಪತ್ತೆ ದೂರು ಸ್ವೀಕರಿಸಿದ್ದಾರೆ. ಅಲ್ಲದೇ ಮೂರು ಬಾರಿ ಹೇಮಲತಾ ಕುಟುಂಬವನ್ನು ಸಂಪರ್ಕಿಸಿ ಆಕೆಯ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಇನ್ನು ಬೆಂಗಳೂರು ಪೋಸ್ಟ್ ಮೂಲಗಳು ತಿಳಿಸಿರುವ ಪ್ರಕಾರ ಪೊಲೀಸರು ಆರೋಪಿ ವಾಸಂತಿ ಮನೆಗೂ ಸಹ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಪೊಲೀಸರು ಮತ್ತೆ ಆಕೆಯ ಮನೆಗೆ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾಂಗ್ರೆಸ್‌ಗೆ? ಆಹ್ವಾನ ಕೊಟ್ಟ ಡಿಕೆಶಿಗೆ ಅಪ್ಪು ಪತ್ನಿ ಹೇಳಿದ್ದೇನು?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


