ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ಮೊದಲಿಗೆ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡೂ ಪಂದ್ಯಗಳನ್ನು ಗೆದ್ದು ಭಾರತವನ್ನು ಕ್ಲೀನ್‌ಸ್ವೀಪ್ ಮಾಡಿದೆ.
ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 30 ರನ್‌ಗಳ ಗೆಲುವನ್ನು ಕಂಡಿದ್ದ ಭಾರತ ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 408 ರನ್‌ಗಳ ಗೆಲುವನ್ನು ಕಂಡು ಭಾರತದ ನೆಲದಲ್ಲಿ 25 ವರ್ಷಗಳ ಬಳಿಕ ಟೆಸ್ಟ್ ಸರಣಿಯೊಂದನ್ನು ಗೆದ್ದಿದೆ.
ಈ ಮೂಲಕ ಭಾರತ ಕಳೆದ ವರ್ಷ ನ್ಯೂಜಿಲೆಂಡ್ ಹಾಗೂ ಈ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗಳಲ್ಲಿ ಒಂದೇ ಒಂದು ಗೆಲುವನ್ನು ಸಹ ದಾಖಲಿಸಲಾಗದೇ ವೈಟ್‌ವಾಷ್ ಅವಮಾನಕ್ಕೊಳಗಾಗಿದೆ.
ಹೀಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ವಿಶ್ವದ ಬೆಸ್ಟ್ ಕ್ರಿಕೆಟ್ ಸ್ಕ್ವಾಡ್ ಎನಿಸಿಕೊಳ್ಳುತ್ತಿದ್ದ ಭಾರತ ತಂಡ ಇಂತಹ ಹೀನಾಯ ಪರಿಸ್ಥಿತಿಗೆ ಬಂದು ತಲುಪಿದ್ದನ್ನು ಕಂಡ ಭಾರತ ಕ್ರಿಕೆಟ್ ಅಭಿಮಾನಿಗಳು ಗಂಭೀರ್‌ರನ್ನು ತಂಡದಿಂದ ಕಿತ್ತೊಗೆಯಿರಿ ಎಂಬ ಆಕ್ರೋಶವನ್ನು ಮತ್ತೊಮ್ಮೆ ಆಚೆ ಹಾಕಿದ್ದಾರೆ.
ಗಂಭೀರ್ ಕೋಚ್ ಆಗಿ ನೇಮಕಗೊಂಡಾಗಲೇ ಭಾರತದ ಕುಸಿತ ಶುರು ಎಂದು ಊಹಿಸಿದ್ದ ಅನೇಕ ಕ್ರಿಕೆಟ್ ಅಭಿಮಾನಿಗಳು ಇದೀಗ ಅವರ ಊಹೆಯಂತೆ ಗಂಭೀರ್ ವಿಫಲರಾಗಿರುವುದನ್ನು ಕಂಡು ಕಾಲೆಳೆದಿದ್ದಾರೆ. ಮೊನ್ನೆ ಗುವಾಹಟಿ ಕ್ರೀಡಾಂಗಣದಲ್ಲಿ ತಂಡ ಸೋತಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಗಂಭೀರ್ ರಾಜೀನಾಮೆ ಕೊಟ್ಟು ತೊಲಗಿ ಎಂದು ಕಿರುಚಿದ್ದಾರೆ.
ಗಂಭೀರ್ ಮೈದಾನದಲ್ಲಿರುವಾಗಲೇ ಅಭಿಮಾನಿಗಳು ಹೀಗೆ ಕಿರುಚಿದ್ದು, ಗಂಭೀರ್ ತಲೆ ತಗ್ಗಿಸಿದ್ದಾರೆ. ಅತ್ತ ಮೊಹಮ್ಮದ್ ಸಿರಾಜ್ ಅಭಿಮಾನಿಗಳತ್ತ ಕೈಬೀಸಿ ಆ ರೀತಿ ಕೂಗದಂತೆ ಮನವಿ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಗಂಭೀರ್ ಬೃಹತ್ ವೈಫಲ್ಯಕ್ಕೆ ಸಿಕ್ಕ ತಕ್ಕ ಪ್ರತಿಫಲ ಇದಾಗಿದೆ.
ಕೊಪ್ಪಳ: ಹಾಸ್ಟೆಲ್ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಬಾಲಕಿ; 7 ಮಂದಿ ವಿರುದ್ಧ ಪೋಕ್ಸೊ ದಾಖಲು!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


