ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ಹೋದಾಗ ಅಲ್ಲಿ ರೌಡಿಗಳ ಗುಂಪೊಂದು ನಟ ಪ್ರಥಮ್‌ಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಹಲ್ಲೆ ಮಾಡಲು ಯತ್ನಿಸಿದೆ. ಡ್ರ್ಯಾಗರ್ ತೆಗೆದು ಕೊಚ್ಚಿ ಹಾಕುವುದಾಗಿ ಧಮ್ಕಿ ಹಾಕಿದೆ.
ಇಷ್ಟೆಲ್ಲ ಇದೇ ತಿಂಗಳ 22ರಂದು ನಡೆದಿದ್ದರೂ ವಿಷಯ ಆಚೆ ಬಂದದ್ದು ಮಾತ್ರ ಮೊನ್ನೆ ಜುಲೈ 26ರಂದು. ಹೀಗೆ ಮಾರಕಾಸ್ತ್ರಗಳನ್ನು ತೆಗೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರೂ ಪ್ರಥಮ್ ಮಾತ್ರ ಒಂದೇ ಒಂದು ದೂರನ್ನೂ ಕೊಟ್ಟಿಲ್ಲ. ಅಲ್ಲದೇ ಪೊಲೀಸರೇ ಕರೆ ಮಾಡಿದರೂ ನಾನಾಗಿ ದೂರು ಕೊಡುವವರೆಗೂ ಏನೂ ಮಾಡಬೇಡಿ ಎಂದು ಕೊಲೆ ಯತ್ನ ಮಾಡಿದ ಕಿಡಿಗೇಡಿಗಳ ಪರವೇ ಮಾತನಾಡಿದ್ದಾರೆ.
ಇನ್ನು ಇಷ್ಟೆಲ್ಲ ಕರ್ಮಕಾಂಡ ಹೊರಬಂದದ್ದು ಪ್ರಥಮ್‌ಗೆ ಲಾಯರ್ ಜಗದೀಶ್ ಕರೆ ಮಾಡಿ ಅದನ್ನು ರೆಕಾರ್ಡ್ ಮಾಡಿಕೊಂಡು ಹರಿಬಿಟ್ಟಾಗ. ಆದರೆ ಪ್ರಥಮ್ ಜಗದೀಶ್ ಜೊತೆ ಮಾತನಾಡುವಾಗ ಯಾವುದೇ ಕಾರಣಕ್ಕೂ ಈ ವಿಷಯ ಆಚೆ ಹೋಗಬಾರದು ಎಂದು ಕೇಳಿಕೊಂಡಿದ್ದರು. ಆದರೆ ಜಗದೀಶ್ ಅದನ್ನು ಬಹಿರಂಗಪಡಿಸಿಬಿಟ್ಟಿದ್ದಾರೆ. ಇದಕ್ಕೆ ಪ್ರಥಮ್ ಜನರನ್ನು ನಂಬಬಾರದು ಎಂದು ಕಿಡಿಕಾರಿದ್ದಾರೆ.
ಈ ಕುರಿತು ಇದೀಗ ಜಗದೀಶ್ ಪ್ರತಿಕ್ರಿಯಿಸಿದ್ದು, ಆಡಿಯೊವನ್ನು ಬಹಿರಂಗಪಡಿಸಿದ್ದು, ಕೊಲೆ ಬೆದರಿಕೆ ಹಾಕಿದ ಗುಂಪು ಮತ್ತೆ ಪ್ರಥಮ್ ಮೇಲೆ ದಾಳಿ ನಡೆಸಿ ಏನಾದರೂ ಹೆಚ್ಚು ಕಡಿಮೆ ಆದರೆ ವಿಷಯ ಗೊತ್ತಿದ್ದರೂ ಯಾಕೆ ಹೇಳಲಿಲ್ಲ ಎಂದು ಪೊಲೀಸರು ನನ್ನನ್ನು ಪ್ರಶ್ನಿಸುತ್ತಾರೆ. ಓರ್ವ ವಕೀಲನಾಗಿ ನಾನು ಮಾಡಿದ್ದು ಸರಿ ಇದೆ ಎಂದು ಸಮರ್ಥಿಸಿಕೊಂಡರು.
ಅಲ್ಲದೇ ಘಟನೆ ನಡೆದು ಎರಡು ದಿನವಾದರೂ ದೂರು ನೀಡದ ನೀವು ಒಳ್ಳೆ ಹುಡುಗ ಪ್ರಥಮ್ ಅಂತ ಹಾಕೊಂಡಿದ್ದೀರ, ಅದನ್ನು ತೆಗೆದು ಮೀಟರ್ ಇಲ್ಲದ ಹುಡುಗ ಪ್ರಥಮ್ ಎಂದು ಹಾಕ್ಕೊ ಎಂದು ಟೀಕಿಸಿದ್ದಾರೆ. ಒಬ್ಬ ಹೀರೊ ಅಂತೀರ ಹೀರೊ ಸಮಾಜಕ್ಕೆ ಸಂದೇಶ ಕೊಡಬೇಕು. ಹೆಚ್ಚು ಕಡಿಮೆಯಾಗಿದ್ದರೆ ನಿಮ್ಮ ಮರ್ಡರ್ ಆಗಬೇಕಿತ್ತು ಎಂದು ಕಿಡಿಕಾರಿದ್ದಾರೆ.
ಕೊಲೆಗೆ ಯತ್ನ: ಹೆಸರು ತಗೊಂಡ್ರೆ ಬೆಂಕಿ ಹೊತ್ತಿಕೊಳ್ಳುತ್ತೆ ಎಂದ ಪ್ರಥಮ್; ದರ್ಶನ್ ಬೇಲ್‌ಗೆ ಕೌಂಟರ್?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


