ಹೊಸದಿಲ್ಲಿ: ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಸದ್ದು ಮಾಡಿದ್ದ ಕೆಎಂಎಫ್‌ನ ನಂದಿನಿ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಬೃಹತ್ ಗ್ರಾಹಕರನ್ನು ಹೊಂದುವತ್ತ ಬೃಹತ್ ಹೆಜ್ಜೆ ಇಟ್ಟಿದೆ.
ದಿನಕ್ಕೆ 50 ಸಾವಿರ ಲೀಟರ್ ನಂದಿನಿ ಹಾಲು ಮಾರಾಟವಾಗಿದ್ದು, ದೆಹಲಿಯಲ್ಲಿ ಬೃಹತ್ ಮಾರುಕಟ್ಟೆ ಹೊಂದಿರುವ ಅಮೂಲ್‌ಗೆ ಸದ್ಯ ಹೊಸ ತಲೆ ನೋವು ಶುರುವಾಗಿದೆ.
ಇನ್ನು ನಂದಿನಿ ದೆಹಲಿ ಮಾರುಕಟ್ಟೆ ಪ್ರವೇಶಿಸಿದಾಗ ಭಾರೀ ವಿರೋಧ ವ್ಯಕ್ತವಾಗಿತ್ತು. ನಂದಿನಿ ಬೇಡ ಎಂದು ಹಲವೆಡೆ ನಂದಿನಿ ಹಾಲನ್ನು ಚರಂಡಿ ಹಾಗೂ ರಸ್ತೆಯಲ್ಲಿ ಸುರಿಯಲಾಗಿತ್ತು. ಆದರೂ ನಂದಿನಿ ಮೊದಲ ತಿಂಗಳು 5 ಸಾವಿರ ಲೀಟರ್ ಮಾರಾಟವಾಗುವ ಮೂಲಕ ಭರವಸೆ ಹುಟ್ಟುಹಾಕಿತ್ತು.
ನಂತರ 10 ಸಾವಿರ ಲೀಟರ್ ಮುಟ್ಟಿದ ನಂದಿನಿ ಆರು ತಿಂಗಳಲ್ಲಿ 25 ಸಾವಿರ ಮಾರಾಟವಾಗುವ ಹಂತ ತಲುಪಿತ್ತು. ಸದ್ಯ ದಿನಕ್ಕೆ 50 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದ್ದು, ಅತಿ ಬೇಗನೆ ಒಂದು ಲಕ್ಷ ಲೀಟರ್ ಮಾರಾಟವಾಗುವ ಎಲ್ಲ ತಯಾರಿಗಳು ನಡೆಯುತ್ತಿವೆ.
ಕೊಲೆಗೆ ಯತ್ನ: ಹೆಸರು ತಗೊಂಡ್ರೆ ಬೆಂಕಿ ಹೊತ್ತಿಕೊಳ್ಳುತ್ತೆ ಎಂದ ಪ್ರಥಮ್; ದರ್ಶನ್ ಬೇಲ್‌ಗೆ ಕೌಂಟರ್?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


