ಹಲ್ಲು ನೋವಿಗೆ ಪ್ರಮುಖ ಕಾರಣ ಹಲ್ಲಿನ ಕುಳಿ (Dental Cavity) ಅಥವಾ ಕ್ಯಾರೀಸ್. ಸಕ್ಕರೆ ಮತ್ತು ಆಮ್ಲೀಯ ಆಹಾರಗಳ ಅತಿಯಾದ ಸೇವನೆಯು ಹಲ್ಲಿನ ಮೇಲ್ಪದರವನ್ನು (Enamel) ಸವೆಯುವಂತೆ ಮಾಡಿ, ಕ್ರಮೇಣ ಕುಳಿಗಳನ್ನು ಸೃಷ್ಟಿಸುತ್ತದೆ. ಇದು ಹಲ್ಲಿನ ಆಳವಾದ ಭಾಗದಲ್ಲಿ ನೋವು ಮತ್ತು ಸೋಂಕಿಗೆ ಕಾರಣವಾಗುತ್ತದೆ.
ಹಲ್ಲಿನ ಸ್ವಚ್ಛತೆಯನ್ನು ಸರಿಯಾಗಿ ನಿರ್ವಹಿಸದಿರುವುದು, ವಿಶೇಷವಾಗಿ ರಾತ್ರಿ ಊಟದ ನಂತರ ಹಲ್ಲುಜ್ಜದೆ ಇರುವುದು, ಹಲ್ಲು ಬಹುಬೇಗ ಹುಳುಕಾಗಲು ಕಾರಣವಾಗುತ್ತದೆ. ಹಲ್ಲಿನ ಸಂದಿಗಳಲ್ಲಿ ಉಳಿದ ಆಹಾರದ ಕಣಗಳು ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಅನುವು ಮಾಡಿಕೊಡುತ್ತವೆ. ಈ ಬ್ಯಾಕ್ಟೀರಿಯಾಗಳು ಹಲ್ಲಿನ ಆರೋಗ್ಯವನ್ನು ಹಾಳುಮಾಡುವುದರ ಜೊತೆಗೆ, ತಡೆದುಕೊಳ್ಳಲಾಗದಷ್ಟು ತೀವ್ರ ನೋವನ್ನು ಉಂಟುಮಾಡುತ್ತವೆ.
ಈ ಸಮಯದಲ್ಲಿ ತಕ್ಷಣವೇ ನಮಗೆ ನೆನಪಾಗುವುದು ದಂತವೈದ್ಯರು! ಆದರೆ ಮಧ್ಯರಾತ್ರಿಯಲ್ಲಿ ಅಥವಾ ತುರ್ತು ಸಂದರ್ಭಗಳಲ್ಲಿ ವೈದ್ಯರ ಬಳಿ ಹೋಗಲು ಸಾಧ್ಯವಿಲ್ಲ. ಅಂತಹ ಸಮಯದಲ್ಲಿ, ಕೆಲವೊಂದು ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋವನ್ನು ತಾತ್ಕಾಲಿಕವಾಗಿ ಶಮನಗೊಳಿಸಬಹುದು. ಹಾಗಾದರೆ, ಈ ಹಲ್ಲು ನೋವಿಗೆ ಪ್ರಮುಖ ಕಾರಣಗಳು ಯಾವುವು ಮತ್ತು ಮನೆಯಲ್ಲೇ ಮಾಡಬಹುದಾದ ಪರಿಹಾರ ಕ್ರಮಗಳೇನು ಎಂಬುದನ್ನು ತಿಳಿಯೋಣ.
ಹಲ್ಲು ನೋವು ನಿವಾರಣೆಗೆ 6 ತಕ್ಷಣದ ಮನೆಮದ್ದುಗಳು ಮತ್ತು ಪರಿಹಾರಗಳು
ಹಲ್ಲು ನೋವು ಇದ್ದಕ್ಕಿದ್ದಂತೆ ಶುರುವಾದಾಗ ತಕ್ಷಣದ ಪರಿಹಾರಕ್ಕಾಗಿ ವೈದ್ಯರೇ ಸಲಹೆ ನೀಡುವ ಈ ನೈಸರ್ಗಿಕ ಮತ್ತು ತಾತ್ಕಾಲಿಕ ಕ್ರಮಗಳನ್ನು ಅನುಸರಿಸಿ:
1.ಉಪ್ಪು ನೀರು ಮುಕ್ಕಳಿಕೆ ;ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಒಂದು ಸಣ್ಣ ಚಮಚ ಉಪ್ಪು ಬೆರೆಸಿ.ಈ ಉಪ್ಪಿನ ನೀರನ್ನು ಬಾಯಿಯಲ್ಲಿ ಹಾಕಿ 30 ಸೆಕೆಂಡುಗಳ ಕಾಲ ಮುಕ್ಕಳಿಸಿ ಉಗುಳುವುದರಿಂದ ಹಲ್ಲು ಮತ್ತು ವಸಡು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಉಪ್ಪಿನ ನೀರು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ನಿವಾರಕವಾಗಿ ಕೆಲಸ ಮಾಡುತ್ತದೆ.
2.ಲವಂಗ ತೈಲ (ನೈಸರ್ಗಿಕ ನೋವು ನಿವಾರಕ);ಲವಂಗ ತೈಲವು ನೈಸರ್ಗಿಕ ನೋವು ನಿವಾರಕ ಗುಣಗಳನ್ನು ಹೊಂದಿದೆ.ಒಂದು ಹತ್ತಿ ಉಂಡೆಯಲ್ಲಿ ಲವಂಗದ ತೈಲವನ್ನು ನೆನೆಸಿ, ಅದನ್ನು ನೇರವಾಗಿ ನೋವಿರುವ ಹಲ್ಲಿನ ಮೇಲೆ ಇಡಿ.
3.ಪುದೀನಾ ಎಣ್ಣೆ ಮತ್ತು ತೆಂಗಿನೆಣ್ಣೆ;ಪುದೀನಾ ಸೊಪ್ಪಿನಲ್ಲಿರುವ ಮೆಂಥಾಲ್ ಸಂಯುಕ್ತವು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.ಐದಾರು ಹನಿ ಪುದೀನಾ ಎಣ್ಣೆಯನ್ನು ಅಷ್ಟೇ ಪ್ರಮಾಣದ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ಹತ್ತಿ ಉಂಡೆಯನ್ನು ಅದ್ದಿ ನೋವಿರುವ ಹಲ್ಲಿಗೆ ಹಚ್ಚಿ.
4.ತುಳಸಿ ಎಲೆಗಳ ರಸ;ತುಳಸಿ ಎಲೆಗಳು ಸಹ ಸೋಂಕು ನಿವಾರಕ ಗುಣಗಳನ್ನು ಹೊಂದಿವೆ.ನೋವಿರುವ ಜಾಗಕ್ಕೆ ತುಳಸಿ ಎಲೆಗಳ ರಸವನ್ನು ತೆಗೆದು ಹಚ್ಚುವುದರಿಂದ ನೋವು ಶಮನವಾಗುತ್ತದೆ.
5.ತಾತ್ಕಾಲಿಕ ನೋವು ನಿವಾರಕ ಮಾತ್ರೆಗಳು;ಐಬುಪ್ರೋಫಿನ್ (Ibuprofen) ಅಥವಾ ಪ್ಯಾರಸಿಟಮಾಲ್ (Paracetamol) ನಂತಹ ಮಾತ್ರೆಗಳು ತುರ್ತು ಸಂದರ್ಭದಲ್ಲಿ ತಾತ್ಕಾಲಿಕ ಪರಿಹಾರವನ್ನು ನೀಡುತ್ತವೆ. (ವೈದ್ಯರ ಸಲಹೆ ಪಡೆದು ಬಳಸುವುದು ಉತ್ತಮ).
6.ಐಸ್ ಪ್ಯಾಕ್ ಬಳಕೆ;ಐಸ್ ಪ್ಯಾಕ್ ಅನ್ನು ನೋವಿರುವ ಕೆನ್ನೆಯ ಭಾಗದ ಮೇಲೆ ಇಡುವುದರಿಂದ ಆ ಜಾಗದಲ್ಲಿನ ಊತ ಮತ್ತು ನೋವು ಕಡಿಮೆಯಾಗುತ್ತದೆ.
7.ಜೇಷ್ಠ ಮಧು (Liquorice) ಬಳಕೆ;ಹಲ್ಲು ನೋವು ಮತ್ತು ವಸಡಿನ ಸಮಸ್ಯೆಗಳಿಗೆ ಜೇಷ್ಠ ಮಧು (Liquorice) ಸಹ ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ.ರಾತ್ರಿ ಮಲಗುವ ಮುನ್ನ, ಒಂದು ಸಣ್ಣ ತುಂಡು ಜೇಷ್ಠ ಮಧುವನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ,ಬೆಳಿಗ್ಗೆ ಎದ್ದ ತಕ್ಷಣ ಆ ನೀರಿನಿಂದ ಚೆನ್ನಾಗಿ ಬಾಯಿ ಮುಕ್ಕಳಿಸಿ ಉಗುಳಬೇಕು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


