ಕ್ಯಾನ್ಬೆರಾ: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ಏಕದಿನ ಸರಣಿಯಲ್ಲಿ ಸೋಲನ್ನು ಅನುಭವಿಸಿದ ಬಳಿಕ ಇದೀಗ ಟಿ20 ಸರಣಿಯನ್ನಾಡುತ್ತಿದ್ದು, ಮೊದಲ ಪಂದ್ಯ ಮಳೆಗಾಹುತಿಯಾಗಿದೆ.
ಮನುಕಾ ಓವರ್ ಕ್ರೀಡಾಂಣದಲ್ಲಿ ಆಯೋಜನೆಯಾಗದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆರಿಸಿಕೊಂಡು ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಐದು ಓವರ್ ಆಡುವಷ್ಟರಲ್ಲಿ ಮಳೆಯ ಆಗಮನವಾಯಿತು.
ನಂತರ ಕೆಲ ಸಮಯದಲ್ಲಿಯೇ ಪಂದ್ಯ ಆರಂಭವಾಯಿತಾದರೂ ಹತ್ತನೇ ಓವರ್ ಸಮಯದಲ್ಲಿ ಮತ್ತೆ ಮಳೆ ಆಗಮಿಸಿತು. 9.4 ಓವರ್ಗಳಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 97 ರನ್ ಕಲೆಹಾಕಿತ್ತು. ಬಳಿಕ ಮಳೆ ನಿಲ್ಲದೇ ಇದ್ದ ಕಾರಣ ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ರದ್ದಾಯಿತು.
ಭಾರತದ ಪರ ಅಭಿಷೇಕ್ ಶರ್ಮಾ 19 (14) ರನ್, ಶುಬ್ಮನ್ ಗಿಲ್ ಅಜೇಯ 37 (20) ರನ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ 39 (24) ರನ್ ಬಾರಿಸಿದರು. ಆಸ್ಟ್ರೇಲಿಯಾ ಪರ ನಾಥನ್ ಎಲ್ಲಿಸ್ ಒಂದು ವಿಕೆಟ್ ಪಡೆದರು.
ಹೀಗೆ 5 ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಗೆ ಆಹುತಿಯಾಗಿದ್ದು, ಎರಡನೇ ಪಂದ್ಯ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 31ರಂದು ನಡೆಯಲಿದೆ.
ಭಾರತ vs ಆಸ್ಟ್ರೇಲಿಯಾ: ಮೊದಲ ಟಿ20ಗಿಲ್ಲ ಮ್ಯಾಕ್ಸ್ವೆಲ್; ಆಸ್ಟ್ರೇಲಿಯಾದ ಈ 5 ಆಟಗಾರರು ಪೂರ್ತಿ ಸರಣಿ ಆಡಲ್ಲ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


