ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ಯಾವ ಹಂತಕ್ಕೆ ತಲುಪಿದೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಒಂದು ಸಣ್ಣ ವಿಡಿಯೋ ಕನ್ನಡಿ ಹಿಡಿದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ನಡೆಸಿದ ‘ಲೈವ್ ಎಕ್ಸ್‌ಪೆರಿಮೆಂಟ್’ ಈಗ ದೆಹಲಿ ನಿವಾಸಿಗಳಲ್ಲಿ ನಡುಕ ಹುಟ್ಟಿಸಿದೆ.
ಕಾರಿನ ಕಿಟಕಿ ತೆರೆದಿದ್ದೇ ತಡ; 500 ದಾಟಿದ ಎಕ್ಯೂಐ (AQI)!
ವೈರಲ್ ವಿಡಿಯೋದ ಪ್ರಕಾರ, ವ್ಯಕ್ತಿಯು ಕಾರಿನ ಒಳಗಿರುವಾಗ ಮಾಲಿನ್ಯದ ಮಟ್ಟ 179 ರಷ್ಟಿತ್ತು. ಕಾರಿನ ಎಸಿ ಫಿಲ್ಟರ್‌ಗಳಿಂದಾಗಿ ಗಾಳಿ ತುಸು ಸುಧಾರಿತ ಸ್ಥಿತಿಯಲ್ಲಿತ್ತು. ಆದರೆ, ವ್ಯಕ್ತಿಯು ಕಾರಿನ ಗಾಜನ್ನು ಕೆಳಗಿಳಿಸಿದ ತಕ್ಷಣ ಗಾಳಿಯ ಗುಣಮಟ್ಟ ಸೂಚ್ಯಂಕವು (AQI) ರಾಕೆಟ್ ವೇಗದಲ್ಲಿ ಏರತೊಗಿತು. ಕೇವಲ 5 ರಿಂದ 10 ಸೆಕೆಂಡುಗಳಲ್ಲಿ ಆ ಸಾಧನದ ಗರಿಷ್ಠ ಮಿತಿಯಾದ 500 ಕ್ಕೆ ತಲುಪಿ ಅಲ್ಲಿಗೆ ಸ್ಥಗಿತಗೊಂಡಿತು. ಗಾಳಿಯು ವಾಸ್ತವದಲ್ಲಿ 500ಕ್ಕಿಂತಲೂ ಅಧಿಕ ವಿಷಕಾರಿ ಅಂಶಗಳನ್ನು ಹೊಂದಿದೆ ಎಂಬುದನ್ನು ಈ ಪ್ರಯೋಗ ಸಾಬೀತುಪಡಿಸಿದೆ.
ಕಣ್ಣಿಗೆ ಕಾಣದ ಮೃತ್ಯು
ಈ ವಿಡಿಯೋದ ಅತ್ಯಂತ ಆಘಾತಕಾರಿ ಅಂಶವೆಂದರೆ, ಹೊರಗಿನ ವಾತಾವರಣವು ಬರಿಗಣ್ಣಿಗೆ ಸಾಮಾನ್ಯವಾಗಿಯೇ ಕಾಣಿಸುತ್ತಿತ್ತು. ಯಾವುದೇ ದಟ್ಟವಾದ ಮಂಜು ಅಥವಾ ಹೊಗೆ ಇಲ್ಲದಿದ್ದರೂ ಗಾಳಿಯಲ್ಲಿ ಅಡಗಿರುವ ‘ಪಿಎಂ 2.5’ (PM 2.5) ನಂತಹ ಸೂಕ್ಷ್ಮ ವಿಷಕಾರಿ ಕಣಗಳು ಉಸಿರಾಟಕ್ಕೆ ಯೋಗ್ಯವಾಗಿಲ್ಲ ಎಂಬುದು ಸಾಬೀತಾಗಿದೆ.
“ನನ್ನ ಸಾವನ್ನು ನೋಡಿ ನನಗೇ ನಗು ಬರುತ್ತಿದೆ”
ಮಾಲಿನ್ಯದ ಮಟ್ಟವು ಯಂತ್ರದ ಮಿತಿಯನ್ನು ಮೀರಿದಾಗ ಆ ವ್ಯಕ್ತಿ ಅಸಹಾಯಕತೆಯಿಂದ ನಗುತ್ತಾ, “ಅಪ್ನಿ ಹೀ ಮೌತ್ ಪೇ ಹಸಿ ಆ ರಹೀ ಹೈ” (ನನ್ನ ಸಾವನ್ನು ನೋಡಿ ನನಗೇ ನಗು ಬರುತ್ತಿದೆ) ಎಂದು ಹೇಳುವ ಮಾತುಗಳು ಇಡೀ ದೆಹಲಿಯ ಜನತೆಯ ಅಳಲನ್ನು ಪ್ರತಿಬಿಂಬಿಸುತ್ತಿವೆ.
ತಜ್ಞರು ನೀಡುವ ಎಚ್ಚರಿಕೆ ಏನು?
ದೆಹಲಿಯ ಈ ಪರಿಸ್ಥಿತಿಗೆ ಪ್ರಮುಖವಾಗಿ ನಾಲ್ಕು ಕಾರಣಗಳನ್ನು ಪಟ್ಟಿ ಮಾಡಲಾಗಿದೆ:
ವಾಹನಗಳ ಹೊರಸೂಸುವಿಕೆ: ಅತಿಯಾದ ವಾಹನ ಸಂಚಾರದಿಂದ ಹೊರಬರುವ ವಿಷಕಾರಿ ಹೊಗೆ.
ಕೃಷಿ ತ್ಯಾಜ್ಯ ದಹನ: ನೆರೆ ರಾಜ್ಯಗಳ ರೈತರು ಬೆಳೆ ಕಟಾವಿನ ನಂತರ ತ್ಯಾಜ್ಯ ಸುಡುವುದು.
ನಿರ್ಮಾಣ ಕಾರ್ಯ: ನಗರದಾದ್ಯಂತ ನಡೆಯುತ್ತಿರುವ ಕಾಮಗಾರಿಗಳಿಂದ ಏಳುವ ಧೂಳು.
ಹವಾಮಾನ: ಮಂದಗತಿಯ ಗಾಳಿ ಮತ್ತು ತೇವಾಂಶದಿಂದಾಗಿ ಮಾಲಿನ್ಯದ ಕಣಗಳು ನೆಲಮಟ್ಟದಲ್ಲೇ ಉಳಿಯುವುದು.
ಪ್ರಸ್ತುತ ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ಅತ್ಯಂತ ಗಂಭೀರ (Severe) ಹಂತವನ್ನು ತಲುಪಿದ್ದು, ಈ ವಿಡಿಯೋ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಬಂಗಾರ ಪ್ರಿಯರಿಗೆ ಬಂಪರ್ ಆಫರ್: 7 ದಿನದ ಏರಿಕೆಗೆ ಬ್ರೇಕ್, ಬರೋಬ್ಬರಿ 7,100 ರೂ. ಇಳಿಕೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


