ಬೆಂಗಳೂರು: ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಉಂಟಾಗಿದ್ದ ನಿರಂತರ ಏರಿಕೆ ಇದೀಗ ನಿನ್ನೆ 100 ರೂನಷ್ಟು ಹೆಚ್ಚಿದ್ದ ಇದರ ಬೆಲೆ ಇವತ್ತು 71ರೂ ಕಡಿಮೆಗೊಂಡಿದೆ. ವರ್ಷಾಂತ್ಯದ ಈ ವಾರದ ಆರಂಭದಲ್ಲಿ ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆ ಇಳಿಕೆಯ ಹಾದಿ ಹಿಡಿದಿದೆ. ಸತತ 7 ದಿನಗಳ ಕಾಲ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದ ಹಳದಿ ಲೋಹದ ಬೆಲೆ ಇಂದು ದಿಢೀರ್ ಕುಸಿತ ಕಂಡಿದೆ.
ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯು ಇಂದು ಆಭರಣ ಪ್ರಿಯರಿಗೆ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ. ಸತತ ಏರಿಕೆಯ ನಂತರ ಇಂದು 22 ಕ್ಯಾರಟ್ ಆಭರಣ ಚಿನ್ನದ ದರದಲ್ಲಿ ಹತ್ತು ಗ್ರಾಂಗೆ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಒಟ್ಟು ಬೆಲೆ ₹1,29,900 ಕ್ಕೆ ತಲುಪಿದೆ.
ಇನ್ನು ಹೂಡಿಕೆದಾರರ ನೆಚ್ಚಿನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆಯು ಹತ್ತು ಗ್ರಾಂಗೆ ₹1,41,710 ರಷ್ಟಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಕಳೆದೆರಡು ದಿನಗಳಿಂದ ಪ್ರತಿ ಗ್ರಾಂಗೆ ₹13,000 ಗಡಿ ದಾಟಿದ್ದ ಚಿನ್ನದ ದರವು ಇಂದು ₹12,990 ಕ್ಕೆ ಇಳಿಕೆಯಾಗುವ ಮೂಲಕ ಮಾರುಕಟ್ಟೆಯಲ್ಲಿ ಸ್ಥಿರತೆಯ ಮುನ್ಸೂಚನೆ ನೀಡಿದೆ.
ಚಿನ್ನದ ಬೆಲೆ cಯಾಗಿದ್ದರೆ, ಬೆಳ್ಳಿಯ ಬೆಲೆ ಮಾತ್ರ ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ. ಇಂದು ಪ್ರತಿ 100 ಗ್ರಾಂ ಬೆಳ್ಳಿಯ ಬೆಲೆ ₹4 ರಷ್ಟು ಏರಿಕೆಯಾಗಿದ್ದು, ₹25,800 ತಲುಪಿದೆ. ತಮಿಳುನಾಡು ಮತ್ತು ಕೇರಳದ ಕೆಲವು ನಗರಗಳಲ್ಲಿ ಬೆಳ್ಳಿ ಬೆಲೆ ಮೊದಲ ಬಾರಿಗೆ ₹28,100ರ ಗಡಿ ದಾಟುವ ಮೂಲಕ ಹೊಸ ದಾಖಲೆ ಬರೆದಿದೆ. ಆದಾಗ್ಯೂ, ಕೆಲವು ಸಗಟು ಮಾರುಕಟ್ಟೆಗಳಲ್ಲಿ ಕೆಜಿಗೆ ₹4,000 ವರೆಗೆ ತಗ್ಗಿರುವ ವರದಿಗಳೂ ಇವೆ.
ದೇಶಾದ್ಯಂತ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ದರಗಳು ಸ್ಥಿರತೆಯತ್ತ ಮುಖ ಮಾಡಿವೆ. ಭಾರತೀಯ ಮಾರುಕಟ್ಟೆಯ ಇಂದಿನ ಅಂಕಿಅಂಶಗಳ ಪ್ರಕಾರ,
ಅತ್ಯಂತ ಶುದ್ಧವಾದ 24 ಕ್ಯಾರಟ್ ಬಂಗಾರದ ಬೆಲೆ ಪ್ರತಿ ಗ್ರಾಂಗೆ ₹14,171 ರಷ್ಟಿದೆ.
22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,990 ಕ್ಕೆ ತಲುಪಿದೆ.
ಇವುಗಳ ಜೊತೆಗೆ 18 ಕ್ಯಾರಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ₹10,628 ರಂತೆ ವಹಿವಾಟು ನಡೆಸುತ್ತಿದೆ.
ಬೆಳ್ಳಿಯ ಬೆಲೆಯು ಪ್ರತಿ ಗ್ರಾಂಗೆ ₹258 ರಲ್ಲಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,41,710
ನಾಗ್ಪುರ ₹1,41,710
ಮುಂಬೈ ₹1,41,710
ಚೆನ್ನೈ ₹1,41,710
ಕೋಲ್ಕತ್ತಾ ₹1,41,710
ಪಾಟ್ನಾ ₹1,41,760
ಸೂರತ್ ₹1,41,760
ಚಂಡೀಗಢ ₹1,41,860
ಲಕ್ನೋ ₹1,41,860
ರಾಜ್ಯದಲ್ಲಿ ಕಿಡ್ನಿ ಬೇಡಿಕೆ ಹೆಚ್ಚಳ;4,922 ರೋಗಿಗಳ ಜೀವ ಕಾಯುವ ಪಟ್ಟಿಯಲ್ಲಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


