Friday, September 18, 2026
spot_img
More
    spot_img
    HomeStateDistrictಮಂಗಳೂರು ಟೆಕ್ ಪಾರ್ಕ್ ಯೋಜನೆ: 11 ಸಾವಿರ ಉದ್ಯೋಗ ಸೃಷ್ಟಿ

    ಮಂಗಳೂರು ಟೆಕ್ ಪಾರ್ಕ್ ಯೋಜನೆ: 11 ಸಾವಿರ ಉದ್ಯೋಗ ಸೃಷ್ಟಿ

    ಬೆಂಗಳೂರು ನಗರದ ಹೊರಗೆ ಉದ್ಯಮಗಳನ್ನು ಸ್ಥಾಪನೆ ಮಾಡಬೇಕು ಎಂಬುದು ರಾಜ್ಯದ ವಿವಿಧ ಜಿಲ್ಲೆಗಳ ಜನರ ಬೇಡಿಕೆ, ಸರ್ಕಾರದ ಚಿಂತನೆ ಇದಕ್ಕೆ ಪೂರಕ ಎಂಬಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂತಹ ಕ್ರಮಗಳಲ್ಲಿ ಒಂದು ಮಂಗಳೂರು ಟೆಕ್ ಪಾರ್ಕ್.

    Advertisement

    ಸುಮಾರು 11,000 ಉದ್ಯೋಗವನ್ನು ಸೃಷ್ಟಿ ಮಾಡುವ ಮಂಗಳೂರು ಟೆಕ್ ಪಾರ್ಕ್ ಯೋಜನೆಗೆ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಕೆಲವು ದಿನಗಳ ಹಿಂದೆ ಟೆಂಡರ್ ಕರೆದಿದೆ. ಸುಮಾರು 135 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ.

    ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಈ ಯೋಜನೆಯನ್ನು ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಎಫ್ಒಟಿ) ಮಾದರಿಯಲ್ಲಿ ಕಾರ್ಯಗತಗೊಳಿಸಲು ಮುಂದಾಗಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ.

    ಕರ್ನಾಟಕ ಸರ್ಕಾರದ Beyond Bengaluru ಪರಿಕಲ್ಪನೆಯಲ್ಲಿ ಮಂಗಳೂರು ನಗರದಲ್ಲಿ ಬೃಹತ್ ಟೆಕ್ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಕಿಯೋನಿಕ್ಸ್ ಮಾಹಿತಿ ಪ್ರಕಾರ ಟೆಂಡರ್ ಪ್ರಕ್ರಿಯೆ ಡಿಸೆಂಬರ್ 2025ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಯೋಜನೆಗಾಗಿಯೇ ರಾಷ್ಟ್ರೀಯ ಹೆದ್ದಾರಿ-66ರಿಂದ ಕೆಲವೇ ಕಿ.ಮೀ.ದೂರದಲ್ಲಿ 3.285 ಎಕರೆ ಜಮೀನು ಮೀಸಲಿಡಲಾಗಿದೆ.

    ಯೋಜನೆ ವಿಶೇಷತೆಗಳು; ಮಂಗಳೂರು ಟೆಕ್ ಪಾರ್ಕ್ ಯೋಜನೆ 11 ಸಾವಿರ ನೇರ ಉದ್ಯೋಗ ಸೃಷ್ಟಿ ಗುರಿಯನ್ನು ಹೊಂದಿದೆ. ಗ್ರೇಡ್-ಎ ಕಚೇರಿ ನಿರ್ಮಾಣ, ಕೆಫಿಟೇರಿಯಾ, ಮೀಟಿಂಗ್ ರೂಂ, ಕಾನ್ಫರೆನ್ಸ್ ಹಾಲ್, ಪಾರ್ಕಿಂಗ್ ಲಾಟ್ ಹೀಗೆ ವಿವಿಧ ಸೌಲಭ್ಯವನ್ನು ನಿರ್ಮಾಣ ಮಾಡಬೇಕಿದೆ.

    ಫುಡ್ ಕೋರ್ಟ್, ರಿಟೇಲ್ ಶಾಪ್, ಹೋಟೆಲ್, ಸರ್ವೀಸ್ ಅಪಾರ್ಟ್‌ಮೆಂಟ್, ಕಾರ್ಯಕ್ರಮ ನಡೆಸಲು ಹಾಲ್ ಹೀಗೆ ವಿವಿಧ ಸೌಲಭ್ಯವನ್ನು ಅದೇ ಆವರಣದಲ್ಲಿ ಒದಗಿಸಲಾಗುತ್ತದೆ. ಒಟ್ಟು ಪ್ರದೇಶ 3,52,156 ಚದರ ಅಡಿ ಆಗಿದ್ದು, ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳ ಮೂಲಕ ಅದನ್ನು ಹೆಚ್ಚಿಸಿಕೊಳ್ಳುವ ಆಯ್ಕೆಯನ್ನು ಟೆಂಡರ್ ಪಡೆದವರು ಹೊಂದಿದ್ದಾರೆ. ನಿರ್ಮಾಣದ ಅವಧಿಯನ್ನು ಮೂರು ವರ್ಷಗಳೆಂದು ಅಂದಾಜಿಸಲಾಗಿದೆ ಎಂದು ಟೆಂಡರ್ ನಿಯಮ ಹೇಳಿದೆ.

    ಕಿಯೋನಿಕ್ಸ್ ಅಧಿಕಾರಿಗಳ ಪ್ರಕಾರ ಯೋಜನಾ ಪ್ರದೇಶ ಮಂಗಳೂರು ನಗರದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಕ್ಯಾಂಪಸ್‌ಗೆ ಸಮೀಪದಲ್ಲಿದೆ. ಇಲ್ಲಿ ವೇಗವಾಗಿ ವಾಣಿಜ್ಯ ವಲಯದ ಬೆಳವಣಿಗೆ ನಡೆಯುತ್ತಿದೆ. ದೊಡ್ಡ ನಗರಗಳಿಗಿಂತ ಕಡಿಮೆ ಕಾರ್ಯಾಚರಣಾ ವೆಚ್ಚ ಆಗುವುದರಿಂದ ಐಟಿ, ಐಟಿಎಸ್ ಮತ್ತು ಕೋ ವರ್ಕಿಂಗ್ ಸ್ಪೇಸ್‌ ಸಂಸ್ಥೆಗಳ ಬೇಡಿಕೆ ಹೆಚ್ಚುತ್ತಿದೆ.

    ಮಂಗಳೂರು ನಗರದಲ್ಲಿ ವಾಣಿಜ್ಯ ಚಟುವಟಿಕೆಗೆ ಇದು ಇನ್ನಷ್ಟು ಉತ್ತೇಜನ ನೀಡಲಿದೆ. ನಗರದಲ್ಲಿ ಈಗಾಗಲೇ 15,000ಕ್ಕೂ ಹೆಚ್ಚು ಐಟಿ ವೃತ್ತಿಪರರು, 200ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳು ಮತ್ತು 50–60 ಸ್ವದೇಶಿ ತಂತ್ರಜ್ಞಾನ ಸಂಸ್ಥೆಗಳಿದ್ದು, ಇನ್ಫೋಸಿಸ್, ಕಾಗ್ನಿಜೆಂಟ್‌ ಮತ್ತು ಟೆಕ್ ಮಹೀಂದ್ರಾ ಮೊದಲಾದ ಕಚೇರಿಗಳಿವೆ.

    ಐಟಿ–ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಈ ಯೋಜನೆ ರಾಜ್ಯದಾದ್ಯಂತ ಬಲವಾದ ಉದ್ಯಮ ಸ್ಥಾಪನೆಯ ಸರ್ಕಾರದ ಬದ್ಧತೆಯ ಪ್ರತಿಬಿಂಬವಾಗಿದೆ. ಮಂಗಳೂರು ಬ್ಲೂಬೆರಿ ಹಿಲ್ಸ್‌ನಲ್ಲಿ ಹೊಸ ತಂತ್ರಜ್ಞಾನ ಉದ್ಯಾನವನ (ಟೆಕ್ನಾಲಜಿ ಪಾರ್ಕ್) ಅಭಿವೃದ್ಧಿಗಾಗಿ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. 11,000ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಇದು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

    ಮಂಗಳೂರು ದೇಶದ ಪಶ್ಚಿಮ ಕರಾವಳಿಯಲ್ಲಿ ಕೈಗಾರಿಕಾ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ಪ್ರಮುಖ ಬಂದರು, ತೈಲ ಶೋಧನಾ ಘಟಕ ಮತ್ತು ಅನೇಕ ಕೈಗಾರಿಕಾ ಪಾರ್ಕ್‌ಗಳಿವೆ. ಸುರತ್ಕಲ್, ಮಣಿಪಾಲದಲ್ಲಿ ಉನ್ನತ ಆರೋಗ್ಯ, ಶಿಕ್ಷಣ ನೀಡುವ ಸಂಸ್ಥೆಗಳಿವೆ.

    5 ರಾಷ್ಟ್ರೀಯ ಹೆದ್ದಾರಿಗಳು, 2 ರೈಲು ನಿಲ್ದಾಣಗಳು ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ, ಪ್ರಸ್ತಾವಿತ ರಿಂಗ್ ರೋಡ್, ಬೆಂಗಳೂರು–ಮಂಗಳೂರು ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳ ಮೂಲಕ ನಗರ ಇನ್ನಷ್ಟು ಸುಧಾರಣೆಯಾಗುತ್ತಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading