Thursday, March 19, 2026
spot_img
More
    spot_img
    HomeLatest newsಬಂಗಾರ ಪ್ರಿಯರಿಗೆ ಹೊಸ ವರ್ಷದ ಬಂಪರ್ ಗಿಫ್ಟ್: ದಿಢೀರ್ 3,200 ರೂ. ಇಳಿಕೆ ಕಂಡ ಚಿನ್ನದ...

    ಬಂಗಾರ ಪ್ರಿಯರಿಗೆ ಹೊಸ ವರ್ಷದ ಬಂಪರ್ ಗಿಫ್ಟ್: ದಿಢೀರ್ 3,200 ರೂ. ಇಳಿಕೆ ಕಂಡ ಚಿನ್ನದ ಬೆಲೆ

    ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಸಂಭ್ರಮದ ಹೊತ್ತಲ್ಲಿ ಬಂಗಾರ ಪ್ರಿಯರಿಗೆ ಮಾರುಕಟ್ಟೆಯಿಂದ ಬಂಪರ್ ಸುದ್ದಿಯೊಂದು ಸಿಕ್ಕಿದೆ. ಕಳೆದ ಹಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆ ಈಗ ದಿಢೀರ್ ಇಳಿಕೆ ಕಾಣುವ ಮೂಲಕ ಗ್ರಾಹಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಮದುವೆ ಸೀಸನ್ ಆರಂಭವಾಗುತ್ತಿರುವ ಈ ಹೊತ್ತಿನಲ್ಲಿ ಚಿನ್ನದ ದರ ತಗ್ಗಿರೋದು ಶಾಪಿಂಗ್ ಪ್ಲಾನ್ ಮಾಡಿರುವವರಿಗೆ ದೊಡ್ಡ ರಿಲೀಫ್ ನೀಡಿದೆ.

    ಇತ್ತೀಚೆಗೆ 22 ಕ್ಯಾರೆಟ್‌ನ ಒಂದು (8 ಗ್ರಾಂ) ಚಿನ್ನದ ಬೆಲೆ 1 ಲಕ್ಷ ರೂಪಾಯಿಯ ಗಡಿ ದಾಟಿ ಜನಸಾಮಾನ್ಯರ ನಿದ್ದೆಗೆಡಿಸಿತ್ತು. ಆದರೆ ಸದ್ಯದ ಮಾರುಕಟ್ಟೆ ವರದಿಯ ಪ್ರಕಾರ, 8 ಗ್ರಾಂ ಚಿನ್ನದ ಬೆಲೆ 99,640 ರೂಪಾಯಿ ತಲುಪಿದೆ. ಲಕ್ಷದ ಗಡಿಯಿಂದ ಸ್ವಲ್ಪವೇ ಕೆಳಬಂದಿರುವುದು ಮಧ್ಯಮ ವರ್ಗದ ಜನರಲ್ಲಿ ಸಂಭ್ರಮ ಮೂಡಿಸಿದೆ.ಬೆಳ್ಳಿ ಬೆಲೆ ಇಂದು ತಟಸ್ಥವಾಗಿದ್ದು, 240 ರೂ ಆಗಿದ್ದು, ಕೆಜಿಗೆ 2,40,000 ರೂ ಇದೆ.

    ಹಳೆಯ ವರ್ಷದ ಅಂತ್ಯದಲ್ಲಿ ಚಿನ್ನದ ಬೆಲೆ ಕಂಡಿದ್ದ ಏರಿಕೆಯನ್ನು ನೆನಸಿಕೊಂಡರೆ, 2026ರ ಈ ಆರಂಭಿಕ ಕುಸಿತವು ಶುಭ ಸೂಚನೆಯಾಗಿದೆ.ಚಿನ್ನವು ಕಷ್ಟಕಾಲದ ‘ಬೆಸ್ಟ್ ಫ್ರೆಂಡ್’ ಆಗಿರುವುದರಿಂದ, ಬೆಲೆ ಇಳಿದಾಗ ಹಣ ಹೂಡುವುದು ಬುದ್ಧಿವಂತಿಕೆ ಎನ್ನುವ ಮಾತು ಈಗ ಮತ್ತೊಮ್ಮೆ ಪ್ರಸ್ತುತವೆನಿಸುತ್ತಿದೆ.ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಇಂದಿಗೆ 1 ಗ್ರಾಂಗೆ ರೂ. 13,588 ಆಗಿದೆ, ನಿನ್ನೆ ರೂ. 13,620 ಇದ್ದುದರಿಂದ ರೂ. 32 ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದಿಗೆ ರೂ. 1,35,880 ಆಗಿದ್ದು, ನಿನ್ನೆ ರೂ. 1,36,200 ಇದ್ದುದರಿಂದ ರೂ. 320 ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದಿಗೆ ರೂ. 13,58,800 ಆಗಿದ್ದು, ನಿನ್ನೆ ರೂ. 13,62,000 ಇದ್ದುದರಿಂದ ರೂ. 3,200 ಇಳಿಕೆಯಾಗಿದೆ.

    ಚಿನ್ನದ ವಿಧ ಇಂದಿನ ಬೆಲೆ (10 ಗ್ರಾಂ)

    24 ಕ್ಯಾರೆಟ್ (ಅಪ್ಪಟ ಚಿನ್ನ) ₹ 1,35,880 ₹ 320 ಇಳಿಕೆ

    22 ಕ್ಯಾರೆಟ್ (ಆಭರಣ ಚಿನ್ನ) ₹ 1,24,550 ₹ 300 ಇಳಿಕೆ

    18 ಕ್ಯಾರೆಟ್ ₹ 1,01,910 ₹ 240 ಇಳಿಕೆ

    ಪ್ರಮುಖ ನಗರಗಳಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ (10 ಗ್ರಾಂಗೆ)

    ಬೆಂಗಳೂರು ₹1,35,880

    ನಾಗ್ಪುರ ₹1,35,880

    ಮುಂಬೈ ₹1,35,880

    ಚೆನ್ನೈ ₹1,36,910

    ಕೋಲ್ಕತ್ತಾ ₹1,35,880

    ಪಾಟ್ನಾ ₹1,35,930

    ಸೂರತ್‌ ₹1,35,930

    ಚಂಡೀಗಢ ₹1,36,030

    ಲಕ್ನೋ ₹1,36,030

    ಬರಿ ಕ್ಯಾಲೆಂಡರ್ ಬದಲಾದ್ರೆ ಸಾಲದು, ಬದುಕು ಬದಲಾಗಲಿ: 2026ಕ್ಕಾಗಿ ಇಲ್ಲಿವೆ ಸೂಪರ್ ರೆಸಲ್ಯೂಷನ್ಸ್‌


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಗರ್ಭಧಾರಣೆ ಘೋಷಿಸಿದ ತಿಂಗಳಲ್ಲೇ ಯೂಟ್ಯೂಬರ್ ಪತ್ನಿ ಹತ್ಯೆ—ಪತಿಯ ಭೀಕರ ಕೃತ್ಯ!

    ತೆಲಂಗಾಣದಲ್ಲಿ ನಡೆದ ಈ ದಾರುಣ ಘಟನೆ ದೇಶದಾದ್ಯಂತ ಆತಂಕ ಮೂಡಿಸಿದೆ. “ಯೂಟ್ಯೂಬರ್ ಪತ್ನಿ ಹತ್ಯೆ” ಪ್ರಕರಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತನ್ನ ಗರ್ಭಧಾರಣೆಯನ್ನು ಸ್ವತಃ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ...

    ಐಪಿಎಲ್ 2026: ಇಶಾನ್ ಕಿಶನ್ ಕೈಗೆ SRH ನಾಯಕತ್ವ—ಅಭಿಷೇಕ್ ಶರ್ಮಾಗೆ ಹೊಸ ಜವಾಬ್ದಾರಿ!

    ಐಪಿಎಲ್ 2026 ಕುರಿತು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ! “ಐಪಿಎಲ್ 2026 ಇಶಾನ್ ಕಿಶನ್ SRH ನಾಯಕ” ಎಂಬ ಸುದ್ದಿ ಈಗ ಕ್ರಿಕೆಟ್ ವಲಯದಲ್ಲಿ ಸದ್ದು ಮಾಡುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು,...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading