ಗಾಜಾ ಮೇಲೆ ಇಸ್ರೇಲ್ ಆಕ್ರಮಣ ಮುಂದುವರಿದಿದ್ದು, ಈಗಲೂ ಸಾಲು ಸಾಲು ದಾಳಿಗಳನ್ನು ನಡೆಸುತ್ತಲೇ ಇದೆ. ನಿನ್ನೆ ( ಜುಲೈ 1 ) ಸಹ ಗಾಜಾದ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, ಪತ್ರಕರ್ತರು ಇಂಟರ್‌ನೆಟ್‌ಗಾಗಿ ಭೇಟಿ ನೀಡುವ ಕೆಫೆ ಮೇಲೆ ದಾಳಿ ನಡೆಸಿದೆ.
ಹೌದು, ಇಸ್ರೇಲ್ ದಾಳಿಗೆ ಮಸಣವಾಗಿರುವ ಗಾಜಾದಲ್ಲಿ ಅಲ್ ಬಾಕಾ ಎಂಬ ಕೆಫೆ ಸದ್ಯ ಇಂಟರ್‌ನೆಟ್ ಸಿಗುವ ಕೆಲ ಸ್ಥಳಗಳಲ್ಲಿ ಒಂದಾಗಿತ್ತು. ಈ ಸಲುವಾಗಿ ಪತ್ರಕರ್ತರು ಇಸ್ರೇಲ್ ದಾಳಿಯ ತೀವ್ರತೆಯನ್ನು ವರದಿ ಮಾಡಲು ಈ ಕೆಫೆಗೆ ಬರುತ್ತಿದ್ದರು. ಈ ಕೆಫೆ ಮೇಲೆ ದಾಳಿ ನಡೆದಿದ್ದು, 33 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಪೈಕಿ 2023ರ ದಾಳಿಯಲ್ಲಿ ಬದುಕುಳಿದಿದ್ದ ಪತ್ರಕರ್ತ ಇಸ್ಮಾಯಿಲ್ ಅಬು ಹತಬ್ ಸಹ ಒಬ್ಬರು. ಇದೇ ದಾಳಿಯಲ್ಲಿ ಮತ್ತೋರ್ವ ಪ್ಯಾಲೆಸ್ಟೀನ್ ಜನಪ್ರಿಯ ಪತ್ರಕರ್ತ ಬಯನ್ ಅಬು ಸುಲ್ತಾನ್ ಎಂಬುವವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದಾಳಿಯ ಬಳಿಕ ಮತ್ತೆ ಇಸ್ರೇಲ್ ಪತ್ರಕರ್ತರನ್ನು ಗುರಿಯನ್ನಾಗಿಸಿ ದಾಳಿ ನಡೆಸಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇಸ್ರೇಲ್ ಗಾಜಾ ಮೇಲಿನ ದಾಳಿಯನ್ನು ಪತ್ರಕರ್ತರು ಸುದ್ದಿ ಮಾಡಬಾರದು ಎಂಬ ನಿಟ್ಟಿನಲ್ಲಿ ಈ ಕೃತ್ಯ ಎಸಗುತ್ತಿದ್ದು, 2023ರ ಅಕ್ಟೋಬರ್ 7ರಿಂದ ಇಲ್ಲಿಯವರೆಗೂ ಒಟ್ಟು 228 ಪತ್ರಕರ್ತರು ಇಸ್ರೇಲ್ ದಾಳಿಗೆ ಅಸುನೀಗಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಜತೆಗೆ ಚರ್ಚಿಸುತ್ತೇವೆ; ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


