ಅಮೆರಿಕಾದಲ್ಲಿ ಭಾರತೀಯನೊಬ್ಬನಿಗೆ ಅವಮಾನವಾಗಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಅಗಿದೆ. ಮಳಿಗೆಯೊಂದಕ್ಕೆ ನಡೆದುಕೊಂಡು ಬರುತ್ತಿದ್ದ ಭಾರತೀಯನನ್ನು ಕಂಡ ಅಮೆರಿಕಾದ ಸ್ಥಳೀಯ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದು, ಈ ವಿಡಿಯೊದಲ್ಲಿ ಭಾರತೀಯನಿಗೆ ತಾನು ಮಾಡಿದ ಅವಮಾನವನ್ನು ಚಿತ್ರೀಕರಿಸಿಕೊಂಡಿದ್ದಾನೆ.
ಈ ವಿಡಿಯೊದಲ್ಲಿ ಭಾರತೀಯನನ್ನು ಕಂಡು ಕೂಡಲೇ ನೀನೇಕೆ ನಮ್ಮ ದೇಶದಲ್ಲಿದ್ದೀಯ, ನೀನೇಕೆ ಅಮೆರಿಕಾದಲ್ಲಿದ್ದೀಯ? ಎಂದು ಪ್ರಶ್ನಿಸಿರುವ ಸ್ಥಳೀಯ ನೀವು ನಮ್ಮ ದೇಶದಲ್ಲಿರುವುದು ನನಗೆ ಇಷ್ಟವಿಲ್ಲ, ನೀವು ತುಂಬಾ ಜನ ಇಲ್ಲಿ ಇದ್ದೀರ, ಅಮೆರಿಕಾದ ತುಂಬಾ ಭಾರತೀಯರ ಪ್ರವಾಹವೇ ತುಂಬಿಕೊಂಡಿದೆ, ಇದರಿಂದ ನಮಗೆ ಸಾಕಾಗಿ ಹೋಗಿದೆ, ನೀವು ಅಮೆರಿಕಾ ಬಿಟ್ಟು ವಾಪಸ್ ಭಾರತಕ್ಕೆ ಹೋಗಬೇಕು ಆಯ್ತಾ? ಎಂದು ಪ್ರಶ್ನಿಸುವ ಮೂಲಕ ಅವಮಾನಿಸಿದ್ದಾನೆ.
ಇದನ್ನು ಕೇಳುತ್ತಿದ್ದಂತೆ ಏನು ಮಾತನಾಡದ ಭಾರತೀಯ ಸ್ಥಳದಿಂದ ಬೇರೆಡೆಗೆ ಸಾಗಿದ್ದಾನೆ. ಬಳಿಕ ಸ್ಥಳೀಯ ಅವಾಚ್ಯ ಶಬ್ದಗಳಿಂದ ಭಾರತೀಯನ ವರ್ಣಭೇದ ಮಾಡಿದ್ದು, ಸದ್ಯ ಈ ವಿಡಿಯೊಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕಾರಣವೇ ಇಲ್ಲದೇ ದೇಶ ಬಿಟ್ಟು ಹೋಗು ಎನ್ನುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದು, ಸದ್ಯ ಈ ವಿಡಿಯೊ ಚರ್ಚೆಗಳನ್ನು ಹುಟ್ಟುಹಾಕಿದೆ.
ಸಿಐಡಿ ತನಿಖೆಯಲ್ಲಿ ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಕಾರಣ ಬಯಲು: ಕೊಹ್ಲಿ ಹೆಸರು ಬಳಸಿ ಮಹಾ ತಪ್ಪು ಮಾಡಿದ್ದು ಈತನೇ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


