Sunday, March 22, 2026
spot_img
More
    spot_img
    HomeEntertainmentನಾನು ಎಲ್ಲೇ ಹೋದರೂ ಕನ್ನಡದ ಹುಡುಗಿ; ವೇದಿಕೆ ಮೇಲೆ ರಶ್ಮಿಕಾಗೆ ಟಾಂಗ್‌ ಕೊಟ್ಟ ಶ್ರೀಲೀಲಾ

    ನಾನು ಎಲ್ಲೇ ಹೋದರೂ ಕನ್ನಡದ ಹುಡುಗಿ; ವೇದಿಕೆ ಮೇಲೆ ರಶ್ಮಿಕಾಗೆ ಟಾಂಗ್‌ ಕೊಟ್ಟ ಶ್ರೀಲೀಲಾ

    ಬೆಂಗಳೂರು: ಇದೇ ಜುಲೈ 18ರಂದು ಕನ್ನಡದ ಎರಡು ಪ್ರಮುಖ ಚಿತ್ರಗಳು ತೆರೆಗೆ ಬರುತ್ತಿದ್ದು, ಸದ್ದು ಮಾಡಲು ಸಜ್ಜಾಗಿವೆ. ಎರಡೂ ಸಿನಿಮಾಗಳೂ ಸ್ಟಾರ್‌ ನಟರ ಸಿನಿಮಾಗಳು ಅಲ್ಲದೇ ಇದ್ದರೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಯುವ ರಾಜ್‌ಕುಮಾರ್‌ ನಟನೆಯ ಎಕ್ಕ ಹಾಗೂ ಕಿರೀಟಿ ರೆಡ್ಡಿ ನಟನೆಯ ಜೂನಿಯರ್‌ ಈ ಶುಕ್ರವಾರ ತೆರೆಗೆ ಅಪ್ಪಳಿಸಲಿವೆ.

    ಇನ್ನು ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಟನೆಯ ಮೊದಲ ಚಿತ್ರ ಜೂನಿಯರ್‌ ಚಿತ್ರತಂಡ ತಮ್ಮ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದು, ನಟನೆ ಹಾಗೂ ಡಾನ್ಸ್‌ ಮೂಲಕ ಟ್ರೈಲರ್‌ನಲ್ಲೇ ತನ್ನ ಸಾಮರ್ಥ್ಯ ಪ್ರದರ್ಶಿಸಿರುವ ಕಿರೀಟಿ ಮೇಲೆ ಸಿನಿ ರಸಿಕರ ಕಣ್ಣಿದೆ.

    ಹೀಗೆ ವಿಶೇಷವೆನಿಸಿಕೊಂಡಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದು, ನಿನ್ನೆ ( ಜುಲೈ 13 ) ನಗರದಲ್ಲಿ ನಡೆದ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕನ್ನಡದ ಜನರಿಗೆ ಕೃತಜ್ಞತೆ ಸಲ್ಲಿಸಿದರು.

    ಮೊದಲಿಗೆ ತಮ್ಮ ಚಿತ್ರದ ತಾರಾಗಣದ ಕುರಿತು ಉದ್ದನೆಯ ಭಾಷಣ ಮಾಡಿದ ಶ್ರೀಲೀಲಾ ಕೊನೆಯಲ್ಲಿ ಕನ್ನಡದ ಜನರು ತಾನು ಯಾವುದೇ ಭಾಷೆಗೆ ಹೋಗಿ ಸಿನಿಮಾ ಮಾಡಿದ್ರೂ ಅಲ್ಲಿ ಬಂದು ʼಲವ್‌ ಫ್ರಮ್‌ ಕರ್ನಾಟಕʼ ಎಂದು ಕಾಮೆಂಟ್‌ ಹಾಕುತ್ತಾರೆ. ನಿಮ್ಮ ಈ ಬೆಂಬಲವನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ. ನಾನು ಎಷ್ಟೇ ಸಿನಿಮಾ ಮಾಡಿದರೂ ಕನ್ನಡದವಳು ಎಂದು ಹೇಳಿಕೆ ನೀಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

    ಇನ್ನು ಈ ವಿಡಿಯೊ ಕಂಡ ನೆಟ್ಟಿಗರು ಇದೇ ರೀತಿ ಕನ್ನಡದ ಮೂಲಕ ಪರಭಾಷಾ ಸಿನಿಮಾಗಳಲ್ಲಿ ನಟಿಸಿ ನಾನು ಹೈದರಾಬಾದ್‌ನವಳು ಎಂದು ಹೇಳಿಕೊಳ್ಳುತ್ತಿದ್ದ ರಶ್ಮಿಕಾ ಮಂದಣ್ಣಗೆ ಇದು ಸರಿಯಾದ ಟಾಂಗ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

    ಮಹದೇಶ್ವರಬೆಟ್ಟ: 5 ಹುಲಿಗಳ ಸಾವಿಗೆ ನಿಖರ ಕಾರಣ ಬಿಚ್ಚಿಟ್ಟ ಪ್ರಯೋಗಾಲಯದ ವರದಿ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading