Thursday, March 19, 2026
spot_img
More
    spot_img
    HomeLatest newsಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲಿದೆ: ನರೇಂದ್ರ ಮೋದಿ

    ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲಿದೆ: ನರೇಂದ್ರ ಮೋದಿ

    ನವದೆಹಲಿ: ಶೀಘ್ರದಲ್ಲೇ ಭಾರತವು ತನ್ನದೇ ಆದ ಸ್ವಂತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವತ್ತ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

    ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಪ್ರಯುಕ್ತ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಬಾಹ್ಯಾಕಾಶದಲ್ಲಿ ಭಾರತವು ಸ್ವಂತ ನಿಲ್ದಾಣವನ್ನು ಹೊಂದಬೇಕೆಂಬುದು ದಶಕಗಳ ಕನಸು. ಅದು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಎಂದು ಹೇಳಿದರು.

    ಇತ್ತೀಚೆಗಷ್ಟೇ ಬಾಹ್ಯಾಕಾಶಕ್ಕೆ ತೆರಳಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶವು ಶೀಘ್ರದಲ್ಲೇ ಗಗನಯಾತ್ರಿಗಳ ತಂಡವನ್ನು ರಚನೆ ಮಾಡಲಿದೆ. ಯುವಜನರು ಇದರಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕೆಂದು ಕರೆ ಕೊಟ್ಟರು.

    ಇಂದು ಭಾರತವು ಸೆಮಿ-ಕ್ರಯೋಜೆನಿಕ್ ಎಂಜಿನ್‌ಗಳು ಮತ್ತು ಎಲೆಕ್ಟ್ರಿಕ್ ಪೊಪಲ್ಷನ್‌ನಂತಹ ಅದ್ಭುತ ತಂತ್ರಜ್ಞಾನಗಳಲ್ಲಿ ವೇಗವಾಗಿ ಮುಂದುವರಿಯುತ್ತಿದೆ. ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ, ಭಾರತವು ಶೀಘ್ರದಲ್ಲೇ ಗಗನಯಾನದೊಂದಿಗೆ ಮೇಲೇರಲಿದೆ ಮತ್ತು ಮುಂಬರುವ ದಿನಗಳಲ್ಲಿ ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ ಎಂದರು.

    ಮೂರು ದಿನಗಳ ಹಿಂದೆ ನಾನು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಭೇಟಿಯಾದೆ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆ ತುಂಬಿದರು. ಅವರು ನನಗೆ ತ್ರಿವರ್ಣ ಧ್ವಜವನ್ನು ತೋರಿಸುತ್ತಿದ್ದ ಕ್ಷಣ, ಅನುಭವ ಪದಗಳಿಗೆ ಮೀರಿದ್ದು ಎಂದು ಹೇಳಿದರು.

    ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗಿನ ನನ್ನ ಚರ್ಚೆಯಲ್ಲಿ, ನವಭಾರತದ ಯುವಕರ ಅಪಾರ ಧೈರ್ಯ ಮತ್ತು ಅನಂತ ಕನಸುಗಳನ್ನು ನಾನು ನೋಡಿದ್ದೇನೆ. ಈ ಕನಸುಗಳನ್ನು ಮುಂದಕ್ಕೆ ಕೊಂಡೊಯ್ಯಲು, ನಾವು ಭಾರತದ ಗಗನಯಾತ್ರಿಗಳ ಗುಂಪನ್ನು ಸಹ ಸಿದ್ಧಪಡಿಸಲಿದ್ದೇವೆ. ಇಂದು ಬಾಹ್ಯಾಕಾಶ ದಿನದಂದು, ಭಾರತದ ಕನಸುಗಳಿಗೆ ರೆಕ್ಕೆಗಳನ್ನು ನೀಡಲು ಈ ಗಗನಯಾತ್ರಿಗಳ ಗುಂಪಿಗೆ ಸೇರಲು ನಾನು ನನ್ನ ಯುವ ಸ್ನೇಹಿತರನ್ನು ಆಹ್ವಾನಿಸುತ್ತೇನೆ ಎಂದು ನುಡಿದರು.

    ಧರ್ಮಸ್ಥಳ: ಎಸ್‌ಐಟಿ ತನಿಖೆಯಲ್ಲಿ ಸತ್ಯ ಆಚೆ ಬರಲಿದೆ ಎಂದ ನಟಿ ರಮ್ಯಾ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಗರ್ಭಧಾರಣೆ ಘೋಷಿಸಿದ ತಿಂಗಳಲ್ಲೇ ಯೂಟ್ಯೂಬರ್ ಪತ್ನಿ ಹತ್ಯೆ—ಪತಿಯ ಭೀಕರ ಕೃತ್ಯ!

    ತೆಲಂಗಾಣದಲ್ಲಿ ನಡೆದ ಈ ದಾರುಣ ಘಟನೆ ದೇಶದಾದ್ಯಂತ ಆತಂಕ ಮೂಡಿಸಿದೆ. “ಯೂಟ್ಯೂಬರ್ ಪತ್ನಿ ಹತ್ಯೆ” ಪ್ರಕರಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತನ್ನ ಗರ್ಭಧಾರಣೆಯನ್ನು ಸ್ವತಃ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ...

    ಐಪಿಎಲ್ 2026: ಇಶಾನ್ ಕಿಶನ್ ಕೈಗೆ SRH ನಾಯಕತ್ವ—ಅಭಿಷೇಕ್ ಶರ್ಮಾಗೆ ಹೊಸ ಜವಾಬ್ದಾರಿ!

    ಐಪಿಎಲ್ 2026 ಕುರಿತು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ! “ಐಪಿಎಲ್ 2026 ಇಶಾನ್ ಕಿಶನ್ SRH ನಾಯಕ” ಎಂಬ ಸುದ್ದಿ ಈಗ ಕ್ರಿಕೆಟ್ ವಲಯದಲ್ಲಿ ಸದ್ದು ಮಾಡುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು,...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading