ಇಂದು ( ಡಿಸೆಂಬರ್ 16 ) ಅಬುಧಾಬಿಯ ಇತಿಹಾಸ್ ಎರೆನಾದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ 10 ತಂಡಗಳು ಸೇರಿದಂತೆ 237.55 ಕೋಟಿ ಮೊತ್ತದ ಹಣದೊಂದಿಗೆ ಒಟ್ಟು 77 ಖಾಲಿ ಇರುವ ಸ್ಥಾನಗಳಿಗೆ ಆಟಗಾರರನ್ನು ಖರೀದಿಸಲು ಹರಾಜಿಗೆ ಧುಮುಕಿವೆ.
ಕೆಲ ಫ್ರಾಂಚೈಸಿಗಳಿಗೆ ಇದು ಮಿನಿ ಹರಾಜು ಎನಿಸಿಕೊಂಡರೆ, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಗೆ ಇದು ಮೆಗಾ ಹರಾಜು ಎಂದೇ ಹೇಳಬಹುದು. ರಿಟೆನ್ಷನ್ ವೇಳೆ ಹಲವಾರು ಆಟಗಾರರನ್ನೈ ಕೈಬಿಟ್ಟಿರುವ ಈ ಫ್ರಾಂಚೈಸಿಗಳು ದೊಡ್ಡ ಪರ್ಸ್‌ನೊಂದಿಗೆ ಹರಾಜಿಗೆ ಇಳಿದಿವೆ.
ಈ ಪೈಕಿ ಎಲ್ಲರ ಚಿತ್ತ ನೆಟ್ಟಿದ್ದ ಆಸ್ಟ್ರೇಲಿಯಾದ ಕೆಮರೂನ್ ಗ್ರೀನ್‌ಗೆ ನಿರೀಕ್ಷೆಯಂತೆ ಕೋಟಿಯ ಹೊಳೆ ಹರಿದಿದೆ. ಕೆಮರೂನ್ ಗ್ರೀನ್ ಖರೀದಿಗಾಗಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಗಿಬಿದ್ದಿದ್ದವು. ಈ ಪೈಕಿ ಅಂತಿಮವಾಗಿ ಚೆನ್ನೈ ಹಾಗೂ ಕೊಲ್ಕತ್ತಾ ಫ್ರಾಂಚೈಸಿಗಳ ನಡುವೆ ನೇರಾನೇರ ಪೈಪೋಟಿ ನಡೆಯಿತು.
ಅಂತಿಮವಾಗಿ ಗ್ರೀನ್ 25.2 ಕೋಟಿ ರೂಪಾಯಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ. ಇನ್ನು ಕೆಮರೂನ್ ಗ್ರೀನ್ ಮೇಲೆ ಫ್ರಾಂಚೈಸಿಗಳು ಕೋಟಿ ಕೋಟಿ ಬಿಡ್ ಮಾಡುತ್ತಿದ್ದನ್ನು ಕಂಡು ಕ್ರಿಕೆಟ್ ಅಭಿಮಾನಿಗಳು ರಿಷಬ್ ಪಂತ್ ಅತ್ಯಧಿಕ ಮೊತ್ತದ ದಾಖಲೆಯನ್ನು ಮುರಿಯಬಹುದು ಎಂದು ಊಹಿಸಿದ್ದರು. ಪಂತ್ ಕಳೆದ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿ ಪಡೆದಿದ್ದರು. ಆದರೆ ಗ್ರೀನ್ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


