ಡಿಸೆಂಬರ್ ಬಂದಿದ್ದೇ ತಡ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳ ಬಿಡುಗಡೆಯ ಹವಾ ಎದ್ದಿದೆ. ಇದೇ 11ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಬಿಡುಗಡೆಯಾದರೆ, ಡಿಸೆಂಬರ್ 25ರಂದು ಕಿಚ್ಚ ಸುದೀಪ್ ನಟನೆಯ ಮಾರ್ಕ್ ಹಾಗೂ ಶಿವರಾಜ್‌ಕುಮಾರ್ ಮತ್ತು ಉಪೇಂದ್ರ ನಟನೆಯ 45 ಬಿಡುಗಡೆಯಾಗಲಿವೆ.
ಡೆವಿಲ್ ಚಿತ್ರದ ಟ್ರೈಲರ್ ಡಿಸೆಂಬರ್ 5ರಂದು ಬಿಡುಗಡೆಯಾದರೆ, ಇಂದು ( ಡಿಸೆಂಬರ್ 7 ) ಬಿಡುಗಡೆಯಾಗಿದೆ. 45 ಚಿತ್ರದ ಟ್ರೈಲರ್ ಬಿಡುಗಡೆ ಬಾಕಿಯಿದೆ.
ಹೀಗೆ ಡಿಸೆಂಬರ್‌ನಲ್ಲಿ ಸಾಲು ಸಾಲು ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾಗುತ್ತಿರುವುದರ ಬಗ್ಗೆ ಇಂದು ನಡೆದ ಮಾರ್ಕ್ ಟ್ರೈಲರ್ ಬಿಡುಗಡೆ ಪತ್ರಿಕಾಗೋಷ್ಟಿಯಲ್ಲಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದರು.
ದರ್ಶನ್ ಡೆವಿಲ್ ಹಾಗೂ ಶಿವಣ್ಣ ಮತ್ತು ಉಪೇಂದ್ರ ನಟನೆಯ 45 ಚಿತ್ರಗಳು ಮಾರ್ಕ್ ಜತೆ ಒಂದೇ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿದ್ದು, ಇದರ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಕೇಳಿದಾಗ ಕಿಚ್ಚ ಸುದೀಪ್ ಮೂರು ಸಿನಿಮಾ ಅಲ್ಲ ಎರಡೇ ಸಿನಿಮಾ ಒಟ್ಟಿಗೆ ಬರುತ್ತಿರುವುದು, ಇನ್ನೊಂದು ಚಿತ್ರ ಜತೆಗೆ ಬರುತ್ತಿಲ್ಲ ಮೂರು ವಾರಗಳು ಮುಂಚೆಯೇ ಬರುತ್ತಿದೆ. ನಾವು ಮೂರು ವಾರ ಆದ ಮೇಲೆ ಬರುತ್ತಿದ್ದೇವೆ. ನೇರವಾಗಿ ಡಿಸೆಂಬರ್ 25ಕ್ಕೆ ಹೋಗಲಿ ವಿಷಯ. ಅದರ ಬಗ್ಗೆ ಮಾತನಾಡೋಣ ಎಂದರು.
ಮುಂದುವರಿದು ಪತ್ರಕರ್ತ ಇದನ್ನು ತಾವು ಹೇಗೆ ಸ್ವೀಕರಿಸುತ್ತೀರಾ ಹಾಗೂ ಇದರಿಂದ ಚಿತ್ರಮಂದಿರದ ಸಮಸ್ಯೆ ಆಗುವುದಿಲ್ವಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುದೀಪ್ ದೀಪಾವಳಿಯನ್ನು ಎಲ್ಲರೂ ಮಾಡುತ್ತಾರೆ, ಎಲ್ಲರಿಗೂ ಊಟ ಸಿಗುವುದಿಲ್ಲವೇ? ಹಾಗೆಯೇ ಇದೂ ಸಹ. ಚಿತ್ರಮಂದಿರಗಳ ಸಮಸ್ಯೆ ಆಗುವುದಾಗಿದ್ದರೆ ನಾವು ಬರುತ್ತಾ ಇದ್ವಾ? ಎಂದು ಸುದೀಪ್ ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


