ಅಬುಧಾಬಿಯ ಇತಿಹಾದ್ ಎರೆನಾದಲ್ಲಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.
ಈ ಹರಾಜಿಗೂ ಮುಂಚೆ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರಿಟೈನ್ ಮಾಡಿಕೊಂಡು ಉಳಿದ ಆಟಗಾರರನ್ನು ಕೈಬಿಟ್ಟಿದೆ. ಹೀಗೆ ಫ್ರಾಂಚೈಸಿಗಳಿಂದ ಹೊರಬಿದ್ದ ಆಟಗಾರರು ಇಂದಿನ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಹರಾಜು ಆರಂಭವಾದ ಕೆಲವೇ ನಿಮಿಷಗಳಲ್ಲಿ ನಿರೀಕ್ಷೆಯಂತೆ ಕೆಮರಾನ್ ಗ್ರೀನ್ ಬರೋಬ್ಬರಿ 25.2 ಕೋಟಿ ಮೊತ್ತಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದಾರೆ. ಇದೇ ರೀತಿ ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಪವರ್‌ಹಿಟ್ಟರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಸಹ ಒಂದೊಳ್ಳೆ ಮೊತ್ತಕ್ಕೆ ಬಿಕರಿಯಾಗಬಹುದು ಎಂಬ ನಿರೀಕ್ಷೆಯಿತ್ತು.
ಆದರೆ ಯಾವೊಂದು ಫ್ರಾಂಚೈಸಿ ಸಹ ಲಿಯಾಮ್ ಲಿವಿಂಗ್‌ಸ್ಟನ್ ಮೇಲೆ ಬಿಡ್ ಮಾಡದೇ ಲಿವಿಂಗ್‌ಸ್ಟನ್ ಅನ್‌ಸೋಲ್ಡ್ ಅಗಿದ್ದಾರೆ. ಹೀಗೆ ಮೊದಲ ಸುತ್ತಿನಲ್ಲಿ ಅನ್‌ಸೋಲ್ಡ್ ಆದ ಲಿವಿಂಗ್‌ಸ್ಟನ್ ಅಂತಿಮ ಹಂತದಲ್ಲಿ ಮತ್ತೆ ಬಿಕರಿಯಾಗಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ. ಲಿವಿಂಗ್‌ಸ್ಟನ್ 2 ಕೋಟಿ ಮುಖಬೆಲೆ ಹೊಂದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


