ನಿನ್ನೆ ( ಡಿಸೆಂಬರ್ 16 ) ಅಬುಧಾಬಿಯ ಇತಿಹಾದ್ ಅರೆನಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 77 ಆಟಗಾರರ ಹರಾಜು ನಡೆದಿದ್ದು, ಎಲ್ಲ ತಂಡಗಳು ಗರಿಷ್ಟ 25 ಆಟಗಾರರ ಸ್ಕ್ವಾಡ್ ರಚಿಸಿಕೊಂಡಿವೆ.
ಕಳೆದ ತಿಂಗಳು ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ತಂಡದಿಂದ ಕೈಬಿಟ್ಟ ಆಟಗಾರರ ಸ್ಥಾನಕ್ಕೆ ಹೊಸ ಆಟಗಾರರನ್ನು ಫ್ರಾಂಚೈಸಿಗಳು ನೇಮಕ ಮಾಡಿಕೊಂಡಿವೆ. ಈ ಪೈಕಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕೆಮರೂನ್ ಗ್ರೀನ್ ಬರೋಬ್ಬರಿ 25.2 ಕೋಟಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಇನ್ನು ಕಳೆದ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 27 ಕೋಟಿ ಪಡೆದಿದ್ದ ರಿಷಬ್ ಪಂತ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಹೀಗೆ ಈ ವರ್ಷ ಗ್ರೀನ್ ಅತಿಹೆಚ್ಚು ಮೊತ್ತ ಹಾಗೂ ಕಳೆದ ವರ್ಷ ರಿಷಬ್ ಪಂತ್ ಅತಿಹೆಚ್ಚು ಮೊತ್ತ ಪಡೆದರೆ, ಆರಂಭದ ಐಪಿಎಲ್ ಆವೃತ್ತಿಯಿಂದ ಇಲ್ಲಿಯವರೆಗೆ ಪ್ರತಿ ಆವೃತ್ತಿಯಲ್ಲೂ ಅತಿಹೆಚ್ಚು ಮೊತ್ತ ಪಡೆದ ಆಟಗಾರರು ಯಾರು ಎಂಬ ಮಾಹಿತಿ ಮುಂದಿದೆ.
2026 – ಕ್ಯಾಮೆರಾನ್ ಗ್ರೀನ್ (₹25.2 ಕೋಟಿ)* – ಕೆಕೆಆರ್
2025 – ರಿಷಭ್ ಪಂತ್ (₹27 ಕೋಟಿ) – ಲಕ್ನೋ
2024 – ಮಿಚೆಲ್ ಸ್ಟಾರ್ಕ್ (₹24.75 ಕೋಟಿ)- ಕೆಕೆಆರ್
2023 – ಸ್ಯಾಮ್ ಕರನ್ (₹18.5 ಕೋಟಿ) – ಚೆನ್ನೈ
2022 – ಇಶಾನ್ ಕಿಶನ್ (₹15.25 ಕೋಟಿ) – ಮುಂಬೈ
2021 – ಕ್ರಿಸ್ ಮಾರಿಸ್ (₹16.25 ಕೋಟಿ) – ರಾಜಸ್ಥಾನ್
2020 – ಪ್ಯಾಟ್ ಕಮಿನ್ಸ್ (₹15.5 ಕೋಟಿ) – ಕೆಕೆಆರ್
2019 – ಜಯದೇವ್ ಉನಾದ್ಕಟ್ ( ರಾಜಸ್ತಾನ್), ವರುಣ್ ಚಕ್ರವರ್ತಿ ( ಪಂಜಾಬ್) (₹8.4 ಕೋಟಿ)
2018 – ಬೆನ್ ಸ್ಟೋಕ್ಸ್ (₹12.5 ಕೋಟಿ) – ರಾಜಸ್ಥಾನ್
2017 – ಬೆನ್ ಸ್ಟೋಕ್ಸ್ (₹14.5 ಕೋಟಿ) – ಪುಣೆ
2016 – ಶೇನ್ ವಾಟ್ಸನ್ (₹9.5 ಕೋಟಿ) – ಆರ್‌ಸಿಬಿ
2015 – ಯುವರಾಜ್ ಸಿಂಗ್ (₹16 ಕೋಟಿ ) – ಡೆಲ್ಲಿ ಡೇರ್‌ಡೆವಿಲ್ಸ್
2014 – ಯುವರಾಜ್ ಸಿಂಗ್ (₹14 ಕೋಟಿ) – ಆರ್‌ಸಿಬಿ
2013 – ಗ್ಲೆನ್ ಮ್ಯಾಕ್ಸ್‌ವೆಲ್ ( 6.3 ಕೋಟಿ) – ಮುಂಬೈ
2012 – ರವೀಂದ್ರ ಜಡೇಜಾ (12.8 ಕೋಟಿ) – ಚೆನ್ನೈ
2011 – ಗೌತಮ್ ಗಂಭೀರ್ (14.9 ಕೋಟಿ) – ಕೆಕೆಆರ್
2010 – ಕೀರನ್ ಪೊಲ್ಲಾರ್ಡ್ (ಮುಂಬೈ), ಶೇನ್ ಬಾಂಡ್ (ಕೆಕೆಆರ್) – (4.8 ಕೋಟಿ)
2009 – ಕೆವಿನ್ ಪೀಟರ್ಸನ್ (ಆರ್‌ಸಿಬಿ) , ಆಂಡ್ರ್ಯೂ ಫ್ಲಿಂಟಾಫ್ (ಚೆನ್ನೈ) – (9.8 ಕೋಟಿ)
2008 – ಎಂ.ಎಸ್. ಧೋನಿ (9.5 ಕೋಟಿ) – ಚೆನ್ನೈ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


