ನಟ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ವಿಚ್ಛೇದನದ ಸುದ್ದಿ ಹೊರಬಿದ್ದಾಗ ಸಾಕಷ್ಟು ಸದ್ದು ಮಾಡಿತ್ತು. ಬರೋಬ್ಬರಿ ಏಳು ವರ್ಷ ಪ್ರೀತಿಸಿ ಬಳಿಕ ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ವಿವಾಹವಾದ ಈ ಜೋಡಿ ನಾಲ್ಕೇ ವರ್ಷದಲ್ಲಿ ದೂರಾಯಿತು. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ.
ಇನ್ನು ವಿಚ್ಛೇದನಕ್ಕೆ ಕಾರಣ ಏನೆಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಆ ಸಮಯಕ್ಕೆ ಹೊರಹಾಕಿದ್ದ ಶ್ರೀದೇವಿ ಭೈರಪ್ಪ ನಟಿಯ ಹೆಸರನ್ನು ತೆಗೆದುಕೊಂಡಿದ್ದರು. ಇದೀಗ ಅದರ ಬಗ್ಗೆ ಶ್ರೀದೇವಿ ಭೈರಪ್ಪ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹಿಂಬಾಲಕರಿಗೆ ಪ್ರಶ್ನೆಗಳನ್ನು ಕೇಳಿ ಎಂದು ಸ್ಟೋರಿ ಹಂಚಿಕೊಂಡಿದ್ದ ಅವರಿಗೆ ವ್ಯಕ್ತಿಯೊಬ್ಬರು ಯುವ ಮತ್ತು ಆ ನಟಿಯ ಬಗ್ಗೆ ಏನ್ ಹೇಳ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶ್ರೀದೇವಿ ನಟಿಯ ಹೆಸರನ್ನು ಬ್ಲರ್ ಮಾಡಿ ‘ಮೋಸ ಮಾಡುವುದು ಒಂದು ಆಯ್ಕೆ. ಅದು ಗೊತ್ತಿಲ್ಲದೇ ಆಗುವ ತಪ್ಪಲ್ಲ’ ಎಂದು ಬರೆದುಕೊಂಡಿದ್ದಾರೆ.
ಈ ಉತ್ತರಕ್ಕೆ ಮತ್ತೋರ್ವ ಮೆಸೇಜ್ ಮಾಡಿದ್ದು, ‘ಯುವ ನಿನ್ನನ್ನು ಬಿಟ್ಟು ಒಳ್ಳೆಯ ಕೆಲಸ ಮಾಡಿದ್ರು’ ಎಂದು ಕಳುಹಿಸಿದ್ದಾರೆ. ಈ ಮೆಸೇಜ್‌ನ ಸ್ಕ್ರೀನ್‌ಶಾಟ್ ಅನ್ನು ಸ್ಟೋರಿಯಲ್ಲಿ ಹಂಚಿಕೊಂಡಿರುವ ಶ್ರೀದೇವಿ ‘ಸರಿಯಾದ ಉತ್ತರ ಬ್ರದರ್, ಅದಕ್ಕೆ ಬಿಟ್ಟಿದ್ದು ನನ್ನ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ‘ನಮ್ಮ ಅಪ್ಪ ಅಮ್ಮ ಅಗೌರವ ಹಾಗೂ ಮೋಸವನ್ನು ಸಹಿಸಿಕೊಂಡು ಇರೋಕೆ ಹೇಳಿಕೊಟ್ಟಿಲ್ಲ. ಅದನ್ನೇ ನೀವೂ ಸಹ ನಿಮ್ಮ ಮಕ್ಕಳಿಗೆ ಹೇಳಿಕೊಡುತ್ತೀರ ಎಂದು ಭಾವಿಸುತ್ತೇನೆ’ ಎಂದು ಖಡಕ್ ಉತ್ತರವನ್ನು ಕೊಟ್ಟಿದ್ದಾರೆ.
ಸದ್ಯ ಶ್ರೀದೇವಿ ಬೈರಪ್ಪ ಅವರ ಈ ಸ್ಟೋರಿಗಳ ಸ್ಕ್ರೀನ್‌ಶಾಟ್‌ಗಳು ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹರಿದಾಡುತ್ತಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


